ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಡಿಕೆ ಸುರೇಶ್ ಭೇಟಿಯಾದ ಜೆಡಿಎಸ್‌ ನಾಯಕ ಕೆ. ಸಿ. ವಿರೇಂದ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05; ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ನಾಯಕ, ಉದ್ಯಮಿ ಕೆ. ಸಿ. ವೀರೇಂದ್ರ (ಪಪ್ಪಿ) ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಚಿತ್ರದುರ್ಗ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ.

ನಟ ದೊಡ್ಡಣ್ಣ ಅಳಿಯ ಮತ್ತು ಉದ್ಯಮಿ ಕೆ. ಸಿ. ವೀರೇಂದ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಭೇಟಿಯಾಗಿದ್ದಾರೆ. ಈ ಚಿತ್ರಗಳನ್ನು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಚಿತ್ರದುರ್ಗ: ಫಲ ಕೊಡದ ಜೆಡಿಎಸ್, ಚಿತ್ರದುರ್ಗ: ಫಲ ಕೊಡದ ಜೆಡಿಎಸ್, "ಕೈ" ಹಿಡಿಯಲು ಸಜ್ಜಾಗಿದ್ದಾರಾ ಕ್ಯಾಸಿನೊ ದೊರೆ?

ಕೆ. ಸಿ. ವೀರೇಂದ್ರ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರು. ಆದರೆ ಅವರು ಚಿತ್ರದುರ್ಗ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಡಿಕೆಶಿ ಟಿಕೆಟ್ ಹಂಚಿಕೆ ಕಾರ್ಯತಂತ್ರ 'ಕೈ' ಸುಡಲಿದೆಯೇ? ಡಿಕೆಶಿ ಟಿಕೆಟ್ ಹಂಚಿಕೆ ಕಾರ್ಯತಂತ್ರ 'ಕೈ' ಸುಡಲಿದೆಯೇ?

JDS Leader KC Veerendra Puppy Meets DK Suresh

ಉದ್ಯಮಿಯಾಗಿ, ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆ. ಸಿ. ವೀರೇಂದ್ರ ಜೆಡಿಎಸ್‌ ಜೊತೆ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಖರ್ಗೆ ಅಧ್ಯಕ್ಷರಾದರೆ ಕರ್ನಾಟಕ ಕಾಂಗ್ರೆಸ್‌ಗೆ ಆಗುವ ಲಾಭಗಳು! ಖರ್ಗೆ ಅಧ್ಯಕ್ಷರಾದರೆ ಕರ್ನಾಟಕ ಕಾಂಗ್ರೆಸ್‌ಗೆ ಆಗುವ ಲಾಭಗಳು!

JDS Leader KC Veerendra Puppy Meets DK Suresh

ಇಂತಹ ಸಂದರ್ಭದಲ್ಲಿಯೇ ಕೆ. ಸಿ. ವೀರೇಂದ್ರ ಡಿ. ಕೆ. ಸುರೇಶ್ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಸಚಿವ, ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಮತ್ತು ಇತರ ನಾಯಕರ ಜೊತೆ ಕೆ. ಸಿ. ವೀರೇಂದ್ರ ಡಿ. ಕೆ. ಸುರೇಶ್ ಭೇಟಿಯಾಗಿದ್ದಾರೆ.

ಉದ್ಯಮಿಯಾದ ಕೆ. ಸಿ. ವೀರೇಂದ್ರ ಮನೆ ಮೇಲೆ 2016ರ ಡಿಸೆಂಬರ್‌ನಲ್ಲಿ ಸಿಬಿಐ ದಾಳಿ ನಡೆದಿತ್ತು. ನೋಟುಗಳ ನಿಷೇಧದ ಬಳಿಕ ನಡೆದ ದಾಳಿಯ ವೇಳೆ ಅವರ ನಿವಾಸದಲ್ಲಿ ಲಕ್ಷಾಂತರ ರೂಪಾಯಿಯ ಹೊಸ ನೋಟುಗಳು ಪತ್ತೆಯಾಗಿತ್ತು.

ಚಳ್ಳಕೆರೆಯ ಉದ್ಯಮಿಯ ಪುತ್ರ ಕೆ. ಸಿ. ವೀರೇಂದ್ರ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಉದ್ಯಮ ಹೊಂದಿದ್ದಾರೆ. ಚಿತ್ರದುರ್ಗ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವರು ಬಯಸಿದ್ದಾರೆ. ಹಾಲಿ ಕ್ಷೇತ್ರದ ಶಾಸಕರು ಬಿಜೆಪಿಯ ಜಿ. ಎಚ್. ತಿಪ್ಪಾರೆಡ್ಡಿ.

English summary
Chitradurga district JD(S) leader K. C. Veerendra Puppy met Congress leader and MP D. K. Suresh. K. C. Veerendra Puppy may join Congress party soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X