ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕಟಕಟಾ. ಜಮೀರ್ ವಿರುದ್ದ ರೇವಣ್ಣ ವಾಗ್ದಾಳಿಯ ಪರಿಯಿದು!

ಅವನು ಯಾವನ್ರೀ ಜಮೀರ್.. ಅವನನ್ನು ನಾವು ಲೆಕ್ಕಕ್ಕೇ ತೆಗೆದುಕೊಂಡಿಲ್ಲಾ.. ಚಾಮರಾಜಪೇಟೆಯಲ್ಲಿ ಸೀಮೆಯೆಣ್ಣೆ ಡಬ್ಬಾ ಹಿಡಿದುಕೊಂಡು ಹೋಗುತ್ತಿದ್ದ ಗಿರಾಕಿಯಾತ ಎಂದು ಜಮೀರ್ ವಿರುದ್ದ, ಜೆಡಿಎಸ್ ಮುಖಂಡ ರೇವಣ್ಣ ವಾಗ್ದಾಳಿ.

By Balaraj Tantry
|
Google Oneindia Kannada News

Recommended Video

H D Revanna, Karnataka JDS Leader slams Zameer Ahmed Khan | Oneindia Kannada

ಹಾಸನ, ಅ 5: ಜಾತ್ಯಾತೀತ ಜನತಾದಳದ ಭಿನ್ನಮತೀಯ ಮುಖಂಡ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ದ ವಾಗ್ದಾಳಿ ನಡೆಸಲು ಜೆಡಿಎಸ್ ಮುಖಂಡ, ಎಚ್ ಡಿ ರೇವಣ್ಣ, ಸೀಮೆಯೆಣ್ಣೆ ಡಬ್ಬದ ವಿಚಾರವನ್ನು ಜನತೆಯ ಮುಂದೆ ತಂದಿಟ್ಟಿದ್ದಾರೆ.

ಹಾಸನದಲ್ಲಿ ಗುರುವಾರ, ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರೇವಣ್ಣ, ಅವನು ಯಾವನ್ರೀ ಜಮೀರ್.. ಅವನನ್ನು ನಾವು ಲೆಕ್ಕಕ್ಕೇ ತೆಗೆದುಕೊಂಡಿಲ್ಲಾ.. ಚಾಮರಾಜಪೇಟೆಯಲ್ಲಿ ಸೀಮೆಯೆಣ್ಣೆ ಡಬ್ಬಾ ಹಿಡಿದುಕೊಂಡು ಹೋಗುತ್ತಿದ್ದ ಗಿರಾಕಿಯಾತ ಎಂದು ಹೇಳಿದ್ದಾರೆ.

JDS Leader HD Revanna statement in Hassan on Zammer Ahmed

ಈ ರಾಜ್ಯದ ಜನ ಒಂದಂತೂ ಬರೆದಿಟ್ಟುಕೊಳ್ಳಬೇಕು, ಕರ್ನಾಟಕದ ಯಾವುದೇ ಮುಸ್ಲಿಂ ಸಮುದಾಯದ ನಾಯಕರಿರಬಹುದು, ಅವರೆಲ್ಲಾ ಜೆಡಿಎಸ್ ನಿಂದ ರಾಜಕೀಯ ಕಲಿತವರು. ಹೀಗಿರುವಾಗ, ಜಮೀರ್ ಮುಂತಾದವರನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ ಜಮೀರ್..ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಆರ್ ವಿ ದೇವರಾಜ್ ಗೆ ಟೋಪಿ ಹಾಕಿದವನು. ಇವತ್ತು ನಮ್ಮ ಪಕ್ಷ ಮತ್ತು ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾನೆ. ಇವನ ಹೇಳಿಕೆಗೆಲ್ಲಾ ತಲೆಕೆಡೆಸಿಕೊಳ್ಳುವ ರಾಜಕೀಯ ವ್ಯಕ್ತಿತ್ವ ಆತನ್ನದ್ದಲ್ಲಾ ಎಂದು ಜಮೀರ್ ವಿರುದ್ದ ರೇವಣ್ಣ ಕಿಡಿಕಾರಿದ್ದಾರೆ.

ಚುನಾವಣೆಯ ಈ ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಭಲ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಮುಖಂಡರ ಕೊರತೆಯಿದೆ, ಹಾಗಾಗಿ ಪರಮೇಶ್ವರ್ ಸೇರಿದಂತೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಜಮೀರ್ ಹಿಂದೆ ಬಿದ್ದಿದೆಯೇ ಹೊರತು, ಜಮೀರ್ ದೊಡ್ಡ ನಾಯಕನೆಂದಲ್ಲಾ ಎಂದು ರೇವಣ್ಣ, ಜಮೀರ್ ವಿರುದ್ದ ಏಕವಚನದಲ್ಲಿ ಮಾತಿನ ಪ್ರಹಾರ ನಡೆಸಿದ್ದಾರೆ.

ಕೊರಟಗೆರೆ ಅಕ್ಕಿರಾಂಪುರದಲ್ಲಿ ನಡೆದ ಉರುಸ್ ಕಾರ್ಯಕ್ರಮಯೊಂದರಲ್ಲಿ, ಜಮೀರ್ ಭವಿಷ್ಯದ ಮುಸ್ಲಿಂ ನಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದರು.

English summary
JDS Leader and MLA HD Revanna statement in Hassan on dissident leader and MLA from Chamarajpet Zammer Ahmed Khan. JDS is not yet all bothered about Zameer, Revanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X