ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ, ಉಲ್ಲಂಘಿಸುವಂತಿಲ್ಲ

By Manjunatha
|
Google Oneindia Kannada News

ಬೆಂಗಳೂರು, ಮೇ 25: ಇಂದು ಕುಮಾರಸ್ವಾಮಿ ಅವರು ಬಹುಮತ ಸಾಬೀತು ಮಾಡಬೇಕಿದ್ದು, ಎರಡೂ ಪಕ್ಷದ ಸಚೇತಕರು ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

ಸ್ಪೀಕರ್ ಆಯ್ಕೆ ಮತ್ತು ಅದರ ನಂತರ ನಡೆಯುವ ವಿಶ್ವಾಸಮತ ಮುಗಿಯುವವರೆಗೂ ಪಕ್ಷದ ಪರವೇ ಇರುವಂತೆ ವಿಪ್ ಜಾರಿ ಮಾಡಲಾಗಿದೆ. ಕಳೆದ ಬಾರಿ ಯಡಿಯೂರಪ್ಪ ಅವರು ವೀಶ್ವಾಮತ ಯಾಚನೆ ಮಾಡುವ ಸಮಯದಲ್ಲಿಯೂ ವಿಪ್ ಜಾರಿ ಮಾಡಲಾಗಿತ್ತು, ಆದರೆ ಅವರು ಮತಯಾಚನೆ ಮಾಡಲಿಲ್ಲ.

ಕರ್ನಾಟಕ ವಿಶ್ವಾಸಮತ LIVE:ಪರೀಕ್ಷೆ ಗೆಲ್ಲುತ್ತಾ ಜೆಡಿಎಸ್-ಕಾಂಗ್ರೆಸ್?ಕರ್ನಾಟಕ ವಿಶ್ವಾಸಮತ LIVE:ಪರೀಕ್ಷೆ ಗೆಲ್ಲುತ್ತಾ ಜೆಡಿಎಸ್-ಕಾಂಗ್ರೆಸ್?

ಜೆಡಿಎಸ್‌ ಪಕ್ಷದ ಸಚೇತಕರು ಇನ್ನೂ ಆಯ್ಕೆ ಆಗದ ಕಾರಣ ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ಅವರೇ 36 ಶಾಸಕರಿಗೂ ವಿಪ್ ಜಾರಿ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲೂ ಸಚೇತಕರಿಲ್ಲದ ಕಾರಣ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಕಾಂಗ್ರೆಸ್‌ನ 78 ಶಾಸಕರಿಗೂ ವಿಪ್ ಜಾರಿ ಮಾಡಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ವಿಶ್ವಾಸಮತಕ್ಕೆ ಮುನ್ನ 7 ಪ್ರಮುಖ ಸಂಗತಿಗಳುಜೆಡಿಎಸ್-ಕಾಂಗ್ರೆಸ್ ವಿಶ್ವಾಸಮತಕ್ಕೆ ಮುನ್ನ 7 ಪ್ರಮುಖ ಸಂಗತಿಗಳು

JDS-Congress issued whip to their MLAs

ವಿಪ್ ಉಲ್ಲಂಘಿಸಿದಲ್ಲಿ ಪಕ್ಷದಿಂದ ಉಚ್ಛಾಟನೆ ಆಗುವ ಜೊತೆಗೆ ಹಲವು ವಿಚಾರಣೆಗಳ ನಂತರ ಶಾಸಕ ಸ್ಥಾನ ಕಳೆದುಕೊಳ್ಳುವ ಜೊತೆಗೆ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಾಗುವ ಸಾಧ್ಯತೆ ಇರುತ್ತದೆ.

English summary
JDS and Congress party issued whip to their MLAs ahed of HD Kumaraswamy calling for vote of confidence. parties ordered their MLAs to stay with party in Speaker election and vote of confidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X