ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನೆ-ತೆನೆಹೊತ್ತ ಮಹಿಳೆ ದೋಸ್ತಿ: ಎಲ್ಲೆಲ್ಲಿ ಬಿಎಸ್ಪಿ ಸ್ಪರ್ಧೆ?

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 8: ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಒಟ್ಟಾಗಿ ಸ್ಪರ್ಧೆ ಮಾಡಲು ನಿರ್ಧರಿಸಿವೆ.

ಈ ಎರಡೂ ಪಕ್ಷಗಳ ನಡುವೆ ನಡೆದಿರುವ ಚುನಾವಣಾ ಪೂರ್ವ ಮೈತ್ರಿ ಪ್ರಕಾರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನೇತೃತ್ವದ ಜೆಡಿಎಸ್ 204 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದರೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್ಪಿ 20 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಚುನಾವಣಾ ಪೂರ್ವ ಮೈತ್ರಿ: ಬಿಎಸ್ಪಿ-ಜೆಡಿಎಸ್ ಸೀಟು ಹಂಚಿಕೆ ಅಂತಿಮಚುನಾವಣಾ ಪೂರ್ವ ಮೈತ್ರಿ: ಬಿಎಸ್ಪಿ-ಜೆಡಿಎಸ್ ಸೀಟು ಹಂಚಿಕೆ ಅಂತಿಮ

ಒಟ್ಟು 14 ಜಿಲ್ಲೆಗಳ 20 ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಉಳಿದ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಅಖಾಡಕ್ಕಿಳಿಯಲಿದ್ದಾರೆ.

JDS-BSP alliance: Here is the full list of constituencies where BSP will fight the elections

ಜೆಡಿಎಸ್ ಬಿಎಸ್ಪಿಗೆ ಬಿಟ್ಟುಕೊಟ್ಟಿರುವ ಒಟ್ಟು 20 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳು ಎಂಬುದು ವಿಶೇಷ. ಬಿಎಸ್ಪಿ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಕ್ರಮ ಸಂಖ್ಯೆ ಜಿಲ್ಲೆ ಕ್ಷೇತ್ರ
1 ಚಾಮರಾಜನರ 1.ಕೊಳ್ಳೇಗಾಲ (ಎಸ್.ಸಿ), 2.ಚಾಮರಾಜನಗರ, 3.ಗುಂಡ್ಲುಪೇಟೆ
2 ಬೆಂಗಳೂರು ನಗರ 4.ಆನೇಕಲ್ (ಎಸ್.ಸಿ)
3 ಬೆಳಗಾವಿ 5.ನಿಪ್ಪಾಣಿ, 6.ಚಿಕ್ಕೋಡಿ-ಸದಲಗ, 7.ರಾಯಭಾಗ (ಎಸ್.ಸಿ)
4 ದಾವಣಗೆರೆ 8.ಹೊನ್ನಾಳಿ
5 ಬೀದರ್ 9.ಬೀದರ್ ಉತ್ತರ
6 ಕಲಬುರಗಿ 10.ಚಿತ್ತಾಪುರ (ಎಸ್.ಸಿ), 11.ಕಲಬುರಗಿ ಗ್ರಾಮಾಂತರ (ಎಸ್.ಸಿ)
7 ಬಳ್ಳಾರಿ 12. ವಿಜಯನಗರ
8 ಬಾಗಲಕೋಟೆ 13.ಬಾಗಲಕೋಟೆ ನಗರ
9 ಉಡುಪಿ 14.ಕಾರ್ಕಳ
10 ಹುಬ್ಬಳ್ಳಿ ಧಾರವಾಡ 15.ಹುಬ್ಬಳ್ಳಿ-ಧಾರವಾಢ ಪೂರ್ವ (ಎಸ್.ಸಿ)
11 ಹಾವೇರಿ 16. ಬ್ಯಾಡಗಿ
12 ಗದಗ 17.ಶಿರಹಟ್ಟಿ (ಎಸ್.ಸಿ),18.ಗದಗ ನಗರ
13 ವಿಜಯಪುರ 19.ಬಬಲೇಶ್ವರ
14 ದಕ್ಷಿಣ ಕನ್ನಡ 20.ಸುಳ್ಯ (ಎಸ್.ಸಿ)
English summary
Karnataka Assembly Elections 2018: JDS and BSP enter into an alliance for upcoming assembly elections. Out of 224 seats, BSP to contest on 20. Here is the full list of constituencies, where BSP will field its candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X