• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯನಗರ ಚುನಾವಣೆ : ಶೇ 54.9 ರಷ್ಟು ಮತದಾನ

By Sachhidananda Acharya
|
      Jayanagar Assembly Elections 2018 : ಮತದಾನದ ಬಗ್ಗೆ ಜನರ ಅಭಿಪ್ರಾಯ

      ಬೆಂಗಳೂರು, ಜೂನ್ 11 : ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಶಾಸಕರಾಗಿದ್ದ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಮುಂದೂಡಲಾಗಿದ್ದ ಚುನಾವಣೆ ಜಯನಗರ ಕ್ಷೇತ್ರಕ್ಕೆ ಇಂದು ನಡೆಯಿತು. ಸಂಜೆ 5 ಗಂಟೆಯ ವೇಳೆಗೆ ಶೇ.51ರಷ್ಟು ಮಾತ್ರ ಮತದಾನವಾಗಿದ್ದು, ಜೂನ್ 13ರಂದು ಜಯನಗರ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.

      ಇಲ್ಲಿ ಕಾಂಗ್ರೆಸಿನಿಂದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ಬಿ.ಎನ್ ವಿಜಯಕುಮಾರ್ ಅವರ ಸಹೋದರ ಬಿ.ಎನ್. ಪ್ರಹ್ಲಾದ್ ಸ್ಪರ್ಧೆಯಲ್ಲಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿಯೂ ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತಾದರೂ, ವಿಧಾನಸಭೆ ಚುನಾವಣೆ ನಡೆದು ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸುತ್ತಿದೆ.

      Jayanagar assembly constituency voting LIVE updates

      Newest First Oldest First
      7:19 PM, 11 Jun
      ಜಯನಗರ ಚುನಾವಣೆಯಲ್ಲಿ ಶೇ 55ರಷ್ಟು ಮತದಾನವಾಗಿದೆ. ಜೂನ್ 13ರಂದು ಮತ ಎಣಿಕೆ ನಡೆಯಲಿದೆ
      6:08 PM, 11 Jun
      ಜಯನಗರ ಕ್ಷೇತ್ರದ ಮತದಾನ ಮುಕ್ತಾಯ. 5 ಗಂಟೆ ತನಕ ಶೇ 51ರಷ್ಟು ಮತದಾನವಾಗಿದೆ.
      6:01 PM, 11 Jun
      ಹಳೆ ಮತದಾರರಲ್ಲಿ ಮತ ಚಲಾವಣೆಯ ಉತ್ಸಾಹ ಎಷ್ಟಿತ್ತೆಂದರೆ, ಕೆಲವಾರು ಹಿರಿಯ ನಾಗರಿಕರು ಹೊಸ ಬಟ್ಟೆ ತೊಟ್ಟು ಮತ ಚಲಾಯಿಸಲು ಆಗಮಿಸಿದ್ದರು.
      3:26 PM, 11 Jun
      3 ಗಂಟೆ ವೇಳೆಗೆ ಜಯನಗರದಲ್ಲಿ ಶೇಕಡಾ 43 ಮತದಾನವಾಗಿದೆ. ಇನ್ನೂ ಮತದಾನ ಮುಗಿಯಲು ಮೂರು ಗಂಟೆಗಳು ಬಾಕಿ ಉಳಿದಿದ್ದು, ಒಟ್ಟಾರೆ ಮತದಾನ ಅರ್ಧ ಶತಕದ ಗಡಿ ದಾಟುವ ನಿರೀಕ್ಷೆ ಇದೆ.
      1:52 PM, 11 Jun
      ಜಯನಗರದಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇಕಡಾ 34 ಮತದಾನ ನಡೆದಿದೆ. ಬೆಳಿಗ್ಗೆ ಬಿರುಸಿನಿಂದ ಮತದಾನ ನಡೆದಿದ್ದು, ಮಧ್ಯಾಹ್ನ ನಂತರವೂ ಇದೇ ರೀತಿ ಮತದಾನ ನಡೆದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚಿನ ಮತ ಚಲಾವಣೆಯಾಗುವ ಸಾಧ್ಯತೆ ಇದೆ.
      11:40 AM, 11 Jun
      ನಟ ಸುಂದರ್ ರಾಜ್ ದಂಪತಿ ಪುತ್ರಿ ಹಾಗೂ ನಟಿ ಮೇಘನಾ ರಾಜ್ ಜೊತೆ ಬಂದು ಮತ ಚಲಾಯಿಸಿದರು.
      10:18 AM, 11 Jun
      ಜಯನಗರದಲ್ಲಿ ಚುರುಕುಗೊಂಡ ಮತದಾನ ಪ್ರಕ್ರಿಯೆ. ಸಾಲು ಸಾಲಾಗಿ ಬಂದು ಮತ ಚಲಾಯಿಸುತ್ತಿರುವ ಮತದಾರರು
      10:10 AM, 11 Jun
      ಜೆ ಪಿ ನಗರದ ವಿಇಟಿ ಮತಗಟ್ಟೆಯಲ್ಲಿ ಮತಚಲಾಯಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ
      10:00 AM, 11 Jun
      ಬೆಳಗ್ಗೆ 9 ಗಂಟೆಯ ತನಗ ಶೇ.10 ರಷ್ಟು ಮತದಾನ
      9:59 AM, 11 Jun
      ಹಾಸ್ಯ ನಟ ಉಮೇಶ್, ನಟಿ ಭಾರತಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಸರತಿ ಸಾಲಲ್ಲಿ ನಿಂತು ಮತಚಲಾಯಿಸಿದರು.
      9:30 AM, 11 Jun
      ಜಯನಗರದಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಜನರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
      8:57 AM, 11 Jun
      "ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮತದಾರರು ಖಂಡಿತ ನಮಗೆ ಯಶಸ್ಸು ನೀಡುತ್ತಾರೆ. ಜನರು ಮತಚಲಾಯಿಸಬೇಕು ಎಂಬುದೇ ನನ್ನ ಮನವಿ,” ಎಂದು ಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಹೇಳಿದರು. ಮತಗಟ್ಟೆ ಸಂಖ್ಯೆ 173ಕ್ಕೆ ಭೇಟಿ ನೀಡಿದ ನಂತರ ಅವರು ಈ ಹೇಳಿಕೆ ನೀಡಿದರು.
      7:54 AM, 11 Jun
      ಜಯನಗರ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ತಮ್ಮ ಮತ ಚಲಾಯಿಸಿದರು. ಸರತಿ ಸಾಲಿನಲ್ಲಿ ನಿಂತು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಅವರು ತಮ್ಮ ಹಕ್ಕು ಚಲಾಯಿಸಿದರು.
      7:54 AM, 11 Jun
      ಜಯನಗರ 4ನೇ T ಬ್ಲಾಕ್ ನಲ್ಲಿರುವ ಮತಗಟ್ಟೆ ಸಂಖ್ಯೆ 52ರಲ್ಲಿ ಹಿರಿಯ ಚಿತ್ರ ನಟಿ ಭಾರತೀ ವಿಷ್ಣುವರ್ಧನ್ ಮತ ಚಲಾಯಿಸಿದರು.
      7:17 AM, 11 Jun
      ಜಯನಗರದಲ್ಲಿ 7 ಗಂಟೆಗೆ ಸರಿಯಾಗಿ ಮತದಾನ ಆರಂಭವಾಗಿದೆ. 216 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಜನರು ಬೆಳಗ್ಗೆಯೇ ಬಂದು ಮತ ಚಲಾವಣೆ ಮಾಡಲು ಮತಗಟ್ಟೆಗಳಲ್ಲಿ ಸಾಲಾಗಿ ನಿಂತಿದ್ದಾರೆ.
      5:43 AM, 11 Jun
      ಜಯನಗರದಲ್ಲಿ ಒಟ್ಟು 19 ಜನರು ಕಣದಲ್ಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನ ಆರಂಭವಾಗಲಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಮತದಾನಕ್ಕೆ ಅಗತ್ಯ ಏರ್ಪಾಟುಗಳನ್ನು ಮಾಡುವಲ್ಲಿ ಚುನಾವಣಾ ಸಿಬ್ಬಂದಿಗಳು ನಿರತರಾಗಿದ್ದಾರೆ.
      5:43 AM, 11 Jun
      2013ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಬಿಜೆಪಿಯ ಬಿ.ಎನ್. ವಿಜಯಕುಮಾರ್ ಜಯಶಾಲಿಯಾಗಿದ್ದರು. 43,990 ಮತಗಳನ್ನು ಪಡೆದಿದ್ದ ಅವರು 31,678 ಮತಗಳನ್ನು ಪಡೆದಿದ್ದ ಕಾಂಗ್ರೆಸಿನ ಎಂ.ಸಿ. ವೇಣುಗೋಪಾಲ್ ಅವರನ್ನು ಸೋಲಿಸಿದ್ದರು.
      5:42 AM, 11 Jun
      ಜಯನಗರ ಕ್ಷೇತ್ರದಲ್ಲಿ ಒಟ್ಟು 2,03,184 ಮತದಾರರಿದ್ದಾರೆ. ಇವರಲ್ಲಿ 1,02,668 ಪುರುಷ ಮತದಾರರು ಮತ್ತು 1,00,501 ಮಹಿಳಾ ಮತದಾರರಾಗಿದ್ದಾರೆ. 15 ತೃತೀಯ ಲಿಂಗಿ ಮತದಾರರೂ ಇಲ್ಲಿದ್ದಾರೆ.
      5:42 AM, 11 Jun
      ಜಯನಗರ ಕ್ಷೇತ್ರದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಕ್ಷೇತ್ರದ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      Karnataka assembly elections 2018: Jayanagar constituency voting live updates in Kannada. Get latest trends, developments, voting percentage updates. Voting of Jayanagar constituency was postponed to June 11 due to the death of BJP candidate BN Vijayakumar.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more