ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾವ್ರ ವಿಡಿಯೋ ಟ್ವೀಟ್‌ ಮಾಡಿ, ಮಾರುಕಟ್ಟೆಗೆ ಬಂದ ಜಾವಾ ಬೈಕ್‌

|
Google Oneindia Kannada News

ಬೆಂಗಳೂರು, ನವೆಂಬರ್ 16: ಹಲವು ವರ್ಷಗಳ ನಂತರ ರಸ್ತೆಗೆ ಇಳಿದಿರುವ ಜಾವಾ ಬೈಕ್ ಪಾದಾರ್ಪಣೆ ಮಾಡುವ ಮೊದಲು ಅಣ್ಣಾವ್ರು ಡಾ.ರಾಜ್‌ಕುಮಾರ್ ಆಶೀರ್ವಾದ ಪಡೆದುಕೊಂಡಿದೆ!

ಹಲವು ವರ್ಷಗಳ ಹಿಂದೆ ರಸ್ತೆಗಳ ರಾಜನಂತೆ ಮೆರೆದ ಜಾವಾ ಬೈಕ್ ಈಗ ವಾಪಸ್‌ ಬಂದಿದ್ದು, ಅದರ ರೀಲಾಂಚ್‌ಗೆ ಮುನ್ನ ಡಾ.ರಾಜ್‌ಕುಮಾರ್ ಅವರು ಹಳೆಯ ಜಾವಾ ಬೈಕ್‌ ಅನ್ನು ಚಲಾಯಿಸುತ್ತಿರುವ ಚಿತ್ರದ ವಿಡಿಯೋವನ್ನು ಟ್ವೀಟ್‌ ಮಾಡಿದೆ.

ಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿ ಸೇವೆ: ಅನುಮತಿಯೊಂದೇ ಇನ್ನೂ ಬಾಕಿಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿ ಸೇವೆ: ಅನುಮತಿಯೊಂದೇ ಇನ್ನೂ ಬಾಕಿ

ಡಾ.ರಾಜ್‌ಕುಮಾರ್ ಅವರು ಹಲವು ಮನಮೋಹಕ ಚಿತ್ರಗಳಲ್ಲಿ ಒಂದಾದ 'ನಾ ನಿನ್ನ ಮರೆಯಲಾರೆ' ಚಿತ್ರದ ದೃಶ್ಯವೊಂದನ್ನು ಜಾವಾ ಮೋಟರ್ಸ್‌ ಟ್ವೀಟ್‌ ಮಾಡಿದೆ. ದೃಶ್ಯದಲ್ಲಿ ಅಣ್ಣಾವ್ರು ಜಾವಾ ಬೈಕ್ ಚಲಾಯಿಸುತ್ತಿದ್ದಾರೆ. ಜಾವಾ ಬೈಕ್‌ನಲ್ಲಿ ಸಾಹಸವೊಂದನ್ನು ಮಾಡುವ ವಿಡಿಯೋ ಅದಾಗಿದೆ.

ಬೆಂಗಳೂರು ರಸ್ತೆಗೆ ಇಳಿಯಲಿವೆ 911 ಚೀತಾಗಳುಬೆಂಗಳೂರು ರಸ್ತೆಗೆ ಇಳಿಯಲಿವೆ 911 ಚೀತಾಗಳು

ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಬೈಕ್ ರೇಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಜ್‌ಕುಮಾರ್ ಅವರು ಚಿತ್ರದುದ್ದಕ್ಕೂ ಜಾವಾ ಬೈಕ್ ಅನ್ನೇ ಚಲಾಯಿಸುತ್ತಿರುತ್ತಾರೆ. ಆಗ ಚಿತ್ರ ಬಿಡುಗಡೆ ಆದಾಗ ಅಣ್ಣಾವ್ರು ಚಲಾಯಿಸಿದ್ದ ಜಾವಾ ಬೈಕ್‌ ಭಾರಿ ಟ್ರೆಂಡ್‌ ಆಗಿತ್ತು. ಆಗಿನ ಯುವಕರಿಗೆ ಜಾವಾ ಬೈಕ್‌ನ ಹುಚ್ಚು ಹತ್ತಿಸಿದ್ದು ಇದೇ 'ನಾ ನಿನ್ನ ಮರೆಯಲಾರೆ' ಚಿತ್ರ.

ನವೆಂಬರ್ 15ಕ್ಕೆ ರಸ್ತೆಗಿಳಿದಿದೆ ಜಾವಾ

ಹಾಗಾಗಿಯೇ ಜಾವಾ ಮೋಟರ್ಸ್‌ ಈ ಚಿತ್ರದ ದೃಶ್ಯವನ್ನು ಟ್ವೀಟ್‌ ಮಾಡಿದೆ. ನವೆಂಬರ್ 15 ಕ್ಕೆ ಹೊಸ ಜಾವಾ ರಸ್ತೆಗೆ ಇಳಿದಿದೆ. ಹೊಸ ಮಾದರಿಯನ್ನು ಹಳೆಯ ಗತ್ತನ್ನು ಉಳಿಸಿಕೊಂಡು ಮಾರುಕಟ್ಟೆಗೆ ಇಳಿದಿರುವ ಜಾವಾ ಬೈಕ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಮಹೀಂದ್ರಾ ಸಂಸ್ಥೆ ಮರುನಿರ್ಮಿಸಿದೆ

ಮಹೀಂದ್ರಾ ಸಂಸ್ಥೆ ಮರುನಿರ್ಮಿಸಿದೆ

ಮಹೀಂದ್ರಾ ಸಂಸ್ಥೆಯು ಜಾವಾ ಬೈಕ್‌ಗಳನ್ನು ಮರುನಿರ್ಮಿಸಿದ್ದು ಸದ್ಯ ಮೂರು ಬೈಕ್‌ಗಳನ್ನು ಹೊರತಂದೆ. ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನ ಬಿಡುಗಡೆ ಮಾಡಿದಲ್ಲಿ ಇದರಲ್ಲಿ ಜಾವಾ ಪೆರಾಕ್ ಎನ್ನುವ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ರಾಯಲ್ ಎನ್‌ಫೀಲ್ಡ್‌ಗೆ ಪ್ರತಿಸ್ಪರ್ಧಿ

ರಾಯಲ್ ಎನ್‌ಫೀಲ್ಡ್‌ಗೆ ಪ್ರತಿಸ್ಪರ್ಧಿ

ಜಾವಾ ಬಿಡುಗಡೆಗೊಳಿಸಿದ ಜಾವಾ ಮತ್ತು ಜಾವಾ 42 ಬೈಕ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಸಾವಿರಾರು ಬುಕಿಂಗ್‌ಗಳು ಸಹ ಆಗಿಹೋಗಿವೆ. ರಾಯಲ್ ಎನ್‌ಫೀಲ್ಡ್‌ 350 ಕ್ಲಾಸಿಕ್ ಬೈಕ್‌ಗಳೊಂದಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಿವೆ.

1.64, 1.55 ಮತ್ತು 1.89 ಲಕ್ಷ ಬೆಲೆ

1.64, 1.55 ಮತ್ತು 1.89 ಲಕ್ಷ ಬೆಲೆ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಹತ್ತಿರದ ಮಹೀಂದ್ರಾ ಡೀಲರ್‌ ಮುಖಾಂತರ 5000 ಮುಂಗಡ ನೀಡಿ ಗಾಡಿಯನ್ನು ಬುಕ್ ಮಾಡಬಹುದಾಗಿದೆ.

English summary
Jawa motorcycle tweets Dr.Rajkumar's movie video before it launch the new Jawa new bikes to the market. Jawa new model bike released on November 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X