ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

|
Google Oneindia Kannada News

Recommended Video

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು | Oneindia Kannada

ಬೆಂಗಳೂರು, ನವೆಂಬರ್ 14: ಆಂಬಿಡೆಂಟ್‌ ಪ್ರಕರಣದಲ್ಲಿ ಲಂಚ ಪಡೆದ ಹಾಗೂ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಸಿಸಿಬಿಯಿಂದ ಬಂಧಿಸಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇಂದು ಜಾಮೀನು ದೊರೆತಿದೆ.

ಸಿಸಿಬಿ ಮುಂದೆ ನವೆಂಬರ್ 10 ರಂದು ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಸಿಸಿಬಿಯು ಭಾನುವಾರ ನವೆಂಬರ್ 11 ರಂದು ಬಂಧಿಸಿತ್ತು. ಒಂದನೇ ಎಸಿಎಂಎಂ ನ್ಯಾಯಾಲಯವು ರೆಡ್ಡಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ನಿನ್ನೆ ಸಲ್ಲಿಸಿದ್ದ ರೆಡ್ಡಿ ಅವರ ಜಾಮೀನಿನ ಅರ್ಜಿ ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ಇಂದು ಜಾಮೀನು ಮಂಜೂರು ಮಾಡಿದೆ. ಹಾಗಾಗಿ ರೆಡ್ಡಿ ಅವರ ಮೂರು ದಿನದ ಜೈಲುವಾಸ ಅನುಭವಿಸಿದ್ದರು. ಮಾಲೂರಿನ ರಘುರಾಮ ರೆಡ್ಡಿ ಎಂಬುವರು ರೆಡ್ಡಿ ಅವರಿಗೆ ಶೂರಿಟಿ ನೀಡಿದ್ದಾರೆ.

Janardhan Reddy gets bail in Ambident case

ಸೋಮವಾರ ಅನಂತ್‌ಕುಮಾರ್‌ ಅವರು ವಿಧಿವಶರಾದ ಕಾರಣ ಸೆಷನ್ಸ್‌ ಕೋರ್ಟ್‌ ಎಲ್ಲ ಕಲಾಪಗಳಿಗೆ ರಜೆ ಘೋಷಿಸಿತು ಹಾಗಾಗಿ ಅಂದು ರೆಡ್ಡಿ ಅವರು ಜಾಮೀನಿಗೆ ಅರ್ಜಿ ಸಲ್ಲಿಸಲಾಗಲಿಲ್ಲ. ಹಾಗಾಗಿ ಮಂಗಳವಾರ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು.

ಮಂಗಳವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿ ಇಂದು ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ರೆಡ್ಡಿ ಅವರನ್ನು ಬಂಧಿಸಿದ್ದಕ್ಕೆ ಸಿಸಿಬಿಗೆ ಛೀಮಾರಿಯನ್ನೂ ಹಾಕಿದೆ.

English summary
Former minister Janardhanr Reddy gets bail in Ambident bribery case. CCB arrested Janardhan Reddy on Sunday (November 10). Sessions court gave him bail today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X