ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಸರ್ಕಾರ ಉರುಳಿಸಲು ಜನಾರ್ದನ ರೆಡ್ಡಿ ಬಂಡವಾಳ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13: ಮೈತ್ರಿ ಸರ್ಕಾರ ಉರುಳಿಸಿ ಯಡಿಯೂರಪ್ಪ ಸಿಎಂ, ಶ್ರೀರಾಮುಲು ಉಪಮುಖ್ಯಮಂತ್ರಿ ಮಾಡಲು ಗಣಿ ದೊರೆ ಜನಾರ್ದನ ರೆಡ್ಡಿ ಅವರೇ ಬೆನ್ನೆಲುಬಾಗಿ ನಿಂತಿದ್ದು, ಮೈತ್ರಿ ಸರ್ಕಾರ ಉರುಳಿಸಲು ಅವರೇ ಬಂಡವಾಳ ಹೂಡಿದ್ದಾರೆ! ಎನ್ನಲಾಗಿದೆ.

ತಮ್ಮ ಪ್ರಿಯ ಶಿಷ್ಯ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಜನಾರ್ದನ ರೆಡ್ಡಿ ಅವರು, ಯಡಿಯೂರಪ್ಪ ಅವರ ಹಿಂದೆ ನಿಂತು ಮೈತ್ರಿ ಸರ್ಕಾರ ಉರುಳಿಸು ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದಿವೆ.

ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕರೆ ಬಿಜೆಪಿ ಸರ್ಕಾರ: ಆಪರೇಷನ್‌ಗೆ ಅಸ್ತು?ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕರೆ ಬಿಜೆಪಿ ಸರ್ಕಾರ: ಆಪರೇಷನ್‌ಗೆ ಅಸ್ತು?

ಮೈತ್ರಿ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ಮಾಡುತ್ತಿರುವ ಯತ್ನಗಳ ಹಿಂದೆ ಜನಾರ್ದನ ರೆಡ್ಡಿ ಅವರು ಇದ್ದಾರೆ ಎಂಬ ಗುಮಾನಿ ದಟ್ಟವಾಗಿ ಎದ್ದಿದೆ. ಯಡಿಯೂರಪ್ಪ ಅವರನ್ನು ಹಿಂದೆ ನಿಂತು ಮುನ್ನಡೆಸುತ್ತಿರುವುದೇ ಜನಾರ್ದನ ರೆಡ್ಡಿ ಎಂಬ ಮಾತುಗಳು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಯಡಿಯೂರಪ್ಪ ನೀಡಿದ್ದರು ಬೆಂಬಲ

ಯಡಿಯೂರಪ್ಪ ನೀಡಿದ್ದರು ಬೆಂಬಲ

ಯಡಿಯೂರಪ್ಪ ಅವರು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಜನಾರ್ಧನ ರೆಡ್ಡಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಮರಳಿ ತರಲು ಪ್ರಯತ್ನ ಮಾಡಿದ್ದರು. ರಾಮುಲು ಅವರಂತೂ ಜನಾರ್ಧನ ರೆಡ್ಡಿ ಅವರನ್ನು ವಿಧಾನಸೌಧದಲ್ಲಿ ಮತ್ತೆ ಕೂರಿಸಲು ಇನ್ನಿಲ್ಲದ ಯತ್ನ ಮಾಡುತ್ತಿದ್ದಾರೆ. ಸ್ವತಃ ರಾಜಕಾರಣಕ್ಕೆ ಮರಳುವ ಯತ್ನದಲ್ಲಿರುವ ರೆಡ್ಡಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರನ್ನು ಶಕ್ತಿಯುತ ಸ್ಥಾನದಲ್ಲಿ ಕೂರಿಸಲು ತೆರೆಹಿಂದೆ ನಿಂತು ಯತ್ನ ನಡೆಸುತ್ತಿದ್ದಾರೆ.

ಉ.ಕರ್ನಾಟಕ ಶಾಸಕರ ಮೇಲೆ ಪ್ರಭಾವ

ಉ.ಕರ್ನಾಟಕ ಶಾಸಕರ ಮೇಲೆ ಪ್ರಭಾವ

ಶಾಸಕರ ಖರೀದಿ, ಉತ್ತರ ಕರ್ನಾಟಕ ಭಾಗದ ಶಾಸಕರ ಮೇಲೆ ಪ್ರಭಾವ ಇನ್ನುಳಿದ ಹಲವು ವಿಷಯಗಳಲ್ಲಿ ಜನಾರ್ಧನ ರೆಡ್ಡಿ ಅವರು ರಾಮುಲು ಹಾಗೂ ಯಡಿಯೂರಪ್ಪ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆ ಸಮಯದಲ್ಲಿ ಸಹ ತೆರೆಮರೆಯಲ್ಲಿದ್ದುಕೊಂಡೆ ಬಳ್ಳಾರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ರೆಡ್ಡಿ ಅವರ ಪ್ರಭಾವ ಕಾರಣವಾಗಿತ್ತು.

ಶಾಸಕರ ಖರೀದಿಗೆ ಹಣಕಾಸಿನ ನೆರವು?

ಶಾಸಕರ ಖರೀದಿಗೆ ಹಣಕಾಸಿನ ನೆರವು?

ಶಾಸಕರ ಖರೀದಿಗೆ ಹಣಕಾಸಿನ ನೆರವನ್ನೂ ಜನಾರ್ಧನ ರೆಡ್ಡಿ ನೀಡುತ್ತಿದ್ದಾರೆ. ಎಂಬ ಗುಲ್ಲು ಹಬ್ಬಿದ್ದು, ರಾಜ್ಯ ರಾಜಕಾರಣ ರಾಜಕೀಯಕ್ಕೆ ಮರಳಿ ಬರಲು ಜನಾರ್ಧನ ರೆಡ್ಡಿ ಬಹಳ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲಕ್ಕೆ ರೆಡ್ಡಿ ಸಾಥ್‌

ಆಪರೇಷನ್ ಕಮಲಕ್ಕೆ ರೆಡ್ಡಿ ಸಾಥ್‌

ಕಳೆದ ಬಾರಿ ಬಿಜೆಪಿ ಆಪರೇಷನ್ ಕಮಲ ಹೆಸರಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆದಾಗಲೂ ಸಹ ಇದೇ ಜನಾರ್ಧನ ರೆಡ್ಡಿ ಅವರು ಬಿಜೆಪಿಯ ಬೆನ್ನಿಗೆ ನಿಂತಿದ್ದರು. ಬಿಜೆಪಿಯ ಬಹುತೇಕ ರಾಜಕೀಯ ಸಾಹಸಗಳಿಗೆ ರೆಡ್ಡಿ ಸಯೋದರರು ಬೆನ್ನೆಲುಬಾಗಿ ನಿಂತಿದ್ದರು. ಆದರೆ ಸಿಬಿಐ ದಾಳಿ ಬಳಿಕ ಜನಾರ್ಧನ ರೆಡ್ಡಿ ಅವರನ್ನು ರಾಜಕೀಯದಿಂದ ದೂರ ಇಡಲಾಗಿದೆ.

English summary
Former BJP minister Janardhan Reddy helping Yeddyurappa to unstable the present coalition government. Janardhan Reddy condition to make his close friend Sriramulu as DCM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X