ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902

|
Google Oneindia Kannada News

ಬೆಂಗಳೂರು, ನವೆಂಬರ್ 11: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಜೈಲು ವಾಸ ಶುರುವಾಗಿದೆ. ಪರಪ್ಪನ ಅಗ್ರಹಾರ ಸೇರಿರುವ ಅವರ ಖೈದಿ ಸಂಖ್ಯೆ 10902.

ಆಂಬಿಡೆಂಟ್‌ ವಂಚನೆ ಪ್ರಕರಣದಲ್ಲಿ ಇಡಿ ಯಲ್ಲಿದ್ದ ಕೇಸನ್ನು ಆರೋಪಿಗಳ ಪರ ಮಾಡಿಕೊಡುತ್ತೇನೆ ಎಂದು ಹೇಳಿ ರೆಡ್ಡಿ ಅವರು ಆರೋಪಿಗಳಿಂದ 20 ಕೋಟಿ ಲಂಚ ಪಡೆದಿದ್ದಾರೆ ಹಾಗೂ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಸಿಸಿಬಿಯು ಜನಾರ್ದನ ರೆಡ್ಡಿ ಮೇಲೆ ಹೊರಿಸಿ ಅವರನ್ನು ಬಂಧಿಸಿದೆ.

Janardhan Reddy is in Parappana Agrahara jail his no is 10902

ಸಿಸಿಬಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಜನಾರ್ದನ ರೆಡ್ಡಿ ಅವರಿಗೆ ನ್ಯಾಯಾಧೀಶಕರು ನವೆಂಬರ್ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬೇಲ್ ದೊರಕುವವರೆಗೆ ರೆಡ್ಡಿ ಅವರು ವಿಚಾರಣಾಧೀನ ಖೈದಿಗಳ ಜೊತೆ ಇರಲಿದ್ದಾರೆ.

ಜನಾರ್ದನ ರೆಡ್ಡಿ ಬಂಧನ ಏಕೆ? ಮುಂದಿನ ನಡೆ ಏನು? ಜನಾರ್ದನ ರೆಡ್ಡಿ ಬಂಧನ ಏಕೆ? ಮುಂದಿನ ನಡೆ ಏನು?

ರೆಡ್ಡಿ ಪರ ಹನುಮಂತರಾಯಪ್ಪ, ಹಿರಿಯ ವಕೀಲ ಆಚಾರ್ಯ, ಚಂದ್ರಶೇಖರ್ ಅವರುಗಳು ಜಾಮೀನಿಗಾಗಿ ಹೋರಾಡಲು ತಯಾರಿ ನಡೆಸಿದ್ದಾರೆ. ನಾಳೆ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸುತ್ತಿದ್ದು ಜಾಮೀನು ನೀಡಬೇಕೆಂದು ಮನವಿ ಮಾಡಲಿದ್ದಾರೆ.

ಗಾಲಿ ರೆಡ್ಡಿ ತಿಜೋರಿ ಬಗ್ಗೆ ಎಷ್ಟೆಲ್ಲ ಗುಮಾನಿ! ಬಾಯಿ ಕೊಟ್ಟು ಕೋಲಲ್ಲಿ ಬಡಿಸಿಕೊಂಡರೆ? ಗಾಲಿ ರೆಡ್ಡಿ ತಿಜೋರಿ ಬಗ್ಗೆ ಎಷ್ಟೆಲ್ಲ ಗುಮಾನಿ! ಬಾಯಿ ಕೊಟ್ಟು ಕೋಲಲ್ಲಿ ಬಡಿಸಿಕೊಂಡರೆ?

ಆಂಬಿಡೆಂಟ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಆರನೇ ಆರೋಪಿಯನ್ನಾಗಿ ಮಾಡಲಾಗಿದೆ. ರೆಡ್ಡಿ ಅವರ ಮೇಲೆ 419,420,468, 120 (b), 201 ಐಪಿಸಿ ಸೆಕ್ಷನ್ ಸೇರಿದಂತೆ ಇನ್ನು ಕೆಲವು ಸೆಕ್ಷನ್‌ಗಳಡಿ ಆರೋಪಗಳನ್ನು ಹೊರಿಸಲಾಗಿದೆ.

ಪರಪ್ಪನ ಅಗ್ರಹಾರಕ್ಕೆ ರೆಡ್ಡಿ, ನ.24ರ ವರೆಗೆ ನ್ಯಾಯಾಂಗ ಬಂಧನ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ, ನ.24ರ ವರೆಗೆ ನ್ಯಾಯಾಂಗ ಬಂಧನ

English summary
Janardhan Reddy's is in Parappana Agrahara jail in judicial custody. He is now prisoner no 10902. CCB arrested him in Ambident bribery case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X