ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಾಡಕ್ಕಿಳಿದ ಜನಾರ್ದನ ರೆಡ್ಡಿ, ಕಾಂಗ್ರೆಸ್‌ ಶಾಸಕನಿಗೆ ಗಾಳ?

By Manjunatha
|
Google Oneindia Kannada News

Recommended Video

Janardhan Reddy Audio Leaked:ಅಖಾಡಕ್ಕಿಳಿದ ಜನಾರ್ದನ ರೆಡ್ಡಿ,ಕಾಂಗ್ರೆಸ್‌ ಶಾಸಕನಿಗೆ ಗಾಳ? |Oneindia Kannada

ಬಳ್ಳಾರಿ, ಮೇ 18: ಬಿಜೆಪಿಗೆ ಬಹುಮತ ಸಾಬೀತು ಮಾಡಬೇಕಾದ ಅನಿವಾರ್ಯತೆ ಇದ್ದು, ಇತರ ಪಕ್ಷಗಳ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿ ನಿರತರಾಗಿದ್ದಾರೆ. ಇಂತಹಾ ಸಮಯದಲ್ಲಿ ಬಿಜೆಪಿಯ ಖಜಾನೆ ಎಂದೇ ಹೇಳಲಾಗಿರುವ ಜನಾರ್ಧನ ರೆಡ್ಡಿ ಅವರು ಬಿಜೆಪಿ ಪರ ಅಖಾಡಕ್ಕೆ ಇಳಿದಿದ್ದಾರೆ.

ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಾಲ್ ಅವರೊಂದಿಗೆ ಜನಾರ್ದನ ರೆಡ್ಡಿ ಅವರು ಮಾತನಾಡಿದ್ದಾರೆನ್ನಲಾದ ಆಡಿಯೋವನ್ನು ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರು ಬಿಡುಗಡೆ ಮಾಡಿದ್ದಾರೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?

ಆಡಿಯೋನಲ್ಲಿ ಜನಾರ್ದನ ರೆಡ್ಡಿ ಅವರದ್ದು ಎಂದು ಹೇಳಲಾಗಿರುವ ಧನಿ, ಬಸನಗೌಡ ದದ್ದಲ ಅವರಿಗೆ 'ಬಿಜೆಪಿ ಪಕ್ಷಕ್ಕೆ ಬಂದರೆ ನಿನ್ನನ್ನು ನೇರವಾಗಿ ರಾಷ್ಟ್ರೀಯ ಅಧ್ಯಕ್ಷರ ಮುಂದೆಯೇ ಕೂರಿಸಿ ನಿನಗೆ ಯಾವ ಸ್ಥಾನ ಬೇಕೊ ಅದನ್ನು ಕೊಡಿಸುವ' ಎಂದು ಹೇಳಲಾಗಿದೆ.

Janardhan reddy approaching congress MLA, Audio released

'ಶಿವನಗೌಡ ನಾಯಕ್, ರಾಜು ಗೌಡ ಅವರೆಲ್ಲಾ ನನ್ನಿಂದಲೇ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ, ನೀನು ನನ್ನ ಮಾತು ಕೇಳಿದರೆ ಈಗೇನು ಆಸ್ತಿ ಮಾರಿಕೊಂಡಿದ್ದೀಯೋ ಅದರ ನೂರರಷ್ಟು ಸಂಪಾದನೆ ಮಾಡಿಕೊಳ್ಳಬಹುದು' ಎಂದು ಜನಾರ್ದನ ರೆಡ್ಡಿ ಅವರದ್ದು ಎಂದು ಹೇಳಲಾಗಿರುವ ಧ್ವನಿ ಆಡಿಯೋ ಕ್ಲಿಪ್‌ನಲ್ಲಿ ಹೇಳಿದೆ.

ಸ್ಪೀಕರ್ ಆಗಿ ಬೋಪಯ್ಯ: ಖಚಿತ ಗೆಲುವಿನ ಭರವಸೆಯಲ್ಲಿ ಬಿಜೆಪಿ? ಸ್ಪೀಕರ್ ಆಗಿ ಬೋಪಯ್ಯ: ಖಚಿತ ಗೆಲುವಿನ ಭರವಸೆಯಲ್ಲಿ ಬಿಜೆಪಿ?

ಆಡಿಯೋ ಕ್ಲಿಪ್‌ನಲ್ಲಿ ಬಸನಗೌಡ ದದ್ದಲ್ ಅವರ ಧ್ವನಿಯೂ ಮುದ್ರಿತವಾಗಿದ್ದು, ನನಗೆ ಏನೂ ಇಲ್ಲದ ಸಮಯದಲ್ಲಿ ನನಗೆ ಟಿಕೆಟ್ , ಚುನಾವಣಾ ಖರ್ಚು ಕೂಡ ಅವರೇ ನೀಡಿ ಗೆಲ್ಲಿಸಿಕೊಂಡು ಬಂದಿದ್ದಾರೆ, ಅವರಿಗೆ ಅನ್ಯಾಯ ಮಾಡಲಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಆಡಿಯೋ ಕ್ಲಿಪ್‌ ಅನ್ನು ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಬಿಡುಗಡೆ ಮಾಡಿದ್ದು, ಜನಾರ್ದನ ರೆಡ್ಡಿ ಅವರು ನಮ್ಮ ಪಕ್ಷದ ಶಾಸಕರಿಗೆ ಆಮೀಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

English summary
Congress leader VS Ugrappa released a audio clip in which a voice said to BJP ex minister Janardhan Reddy's approaching Raichur Rural constituency congress MLA Basanagowda Daddal for give support to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X