ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಚ್ಚಿಕು ಗೆಳೆಯ ರೆಡ್ಡಿ ಬಗ್ಗೆ ಶ್ರೀರಾಮಲು ಹೇಳಿದ್ದೇನು?

|
Google Oneindia Kannada News

Janardhan Reddy, Sriramulu
ಗದಗ, ಅ, 24 : ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಶ್ರೀರಾಮುಲು ತಮ್ಮ ಆಪ್ತಮಿತ್ರ ಜರ್ನಾರ್ದನ ರೆಡ್ಡಿ ಬಗ್ಗೆ ಮೌನ ಮುರಿದ್ದಾರೆ. ಸಿಬಿಐ ಒತ್ತಡ ಬಂದರೂ, ಜೈಲಿನಲ್ಲಿರುವ ಆತ್ಮೀಯ ಸ್ನೇಹಿತ ಹಾಗೂ ತಮ್ಮ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಸ್ನೇಹ ತೊರೆಯುವುದಿಲ್ಲ ಎಂದು ಘೋಷಿಸಿದ್ದಾರೆ.

ಬುಧವಾರ ಗದಗದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದಿಂದ ಏರ್ಪಡಿಸಲಾಗಿದ್ದ 555 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಸ್ನೇಹ ಕಡಿದುಕೊಳ್ಳುವಂತೆ ವಿಚಾರಣೆ ಸಂದರ್ಭದಲ್ಲಿ ಸಿಬಿಐ ಸೂಚಿಸಿದೆ ಎಂದು ಹೇಳಿದರು.

ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರ ಜೊತೆಗಿನ ಸ್ನೇಹವನ್ನು ಕಡಿದುಕೊಳ್ಳಿ, ಇಲ್ಲದಿದ್ದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನೀವು ಸಿಲುಕುತ್ತಿರಿ ಎಂದು ತಿಳಿಸಿದ್ದಾರೆ. ಆದರೆ, ಜನಾರ್ದನ ರೆಡ್ಡಿ ರಾಜಕೀಯವಾಗಿ ನನ್ನನ್ನು ಬೆಳಸಿದವರು, ಎಂತಹ ಪರಿಸ್ಥಿತಿ ಎದುರಾದರೂ ಅವರ ಜೊತೆಗಿನ ಸ್ನೇಹ ಮುಂದುವರೆಯುತ್ತದೆ ಎಂದು ಶ್ರೀರಾಮುಲು ಹೇಳಿದರು.

ಆದರೆ, ನಾನು ಜೈಲಿಗೆ ಹೋದರೂ ಸರಿ ಜನಾರ್ದನ ರಡ್ಡಿ ಅವರ ಸ್ನೇಹವನ್ನು ಕಡಿದುಕೊಳ್ಳಲಾರೆ. ಸಿಬಿಐ ಸೂಚನೆಯನ್ನೂ ಮೀರಿ ರೆಡ್ಡಿ ಜೊತೆಗಿನ ಸ್ನೇಹವನ್ನು ಮುಂದುವರೆಸುವುದಾಗಿ ಶ್ರೀರಾಮುಲು ಘೋಷಿಸಿದರು. ಆ ಮೂಲಕ ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ರೆಡ್ಡಿಯ ಜೊತೆಗಿನ ಸ್ನೇಹ ಗಟ್ಟಿಯಾದದ್ದು ಎಂದು ಸಾಬೀತು ಮಾಡಿದರು.

ಜನಾರ್ದನ ರೆಡ್ಡಿ ಅವರು ಜೈಲು ಸೇರಿದ ನಂತರ ಅವರನ್ನು ಹಲವಾರು ಬಾರಿ ಭೇಟಿಯಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಹಾಗೂ ಸಂಘಟನೆ ಕುರಿತು ವಿವರಣೆ ನೀಡಿದ್ದೇನೆ. ಅವರ ಅನುಪಸ್ಥಿತಿ ಹಾಗೂ ಸುರೇಶಬಾಬು ಜೈಲು ಸೇರಿದ ನಂತರ ನಾನು ಸಂಕಷ್ಟಕ್ಕೆ ಸಿಲುಕಿರುವುದು ನಿಜ, ತಮಗೆ ಎಂತಹ ಸಂಕಷ್ಟ ಎದುರಾದರೂ, ರೆಡ್ಡಿಯ ಸ್ನೇಹ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶ್ರಿರಾಮಲು ತಿಳಿಸಿದರು.

ಮೈತ್ರಿ, ವಿಲೀನ ಇಲ್ಲ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿಮಾಡಿಕೊಳ್ಳುವಿದಿಲ್ಲ. ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡುವುದಿಲ್ಲ. ಎಲ್ಲಾ 28 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಲಿದೆ ಎಂದು ಶ್ರೀರಾಮುಲು ಹೇಳಿದರು.

English summary
Janardhan Reddy and Sriramulu Friends Forever said, BSR Congress president B.Sriramulu. On Wednesday, October 23 he addressed media and said, Janardhan Reddy is my best friend. now is in jail. But, we have close Friends Forever he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X