ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ ಕೀ ಬಾತ್ ಕರ್ನಾಟಕ ಸಮೀಕ್ಷೆ: ಸರಳ ಬಹುಮತದತ್ತ ಬಿಜೆಪಿ ದಾಪುಗಾಲು

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 4: 'ಜನ್ ಕೀ ಬಾತ್' ಎಂಬ ಸಂಸ್ಥೆ ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿದ್ದು ಬಿಜೆಪಿ ಸರಳ ಬಹುಮತದ ಸಮೀಪಕ್ಕೆ ಬಂದು ನಿಲ್ಲಲಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಹೆಚ್ಚಿನ ಸಮೀಕ್ಷೆಗಳು ಕರ್ನಾಟಕದಲ್ಲಿ ಕಾಂಗ್ರೆಸಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದವು. ಆದರೆ ಈ ಸಮೀಕ್ಷೆ ಬಿಜೆಪಿಗೆ ಭರ್ಜರಿ ಸ್ಥಾನಗಳನ್ನು ನೀಡಿದೆ.

ಸಮೀಕ್ಷೆಯ ಪ್ರಕಾರ ಬಿಜೆಪಿಯ ಸ್ಥಾನಗಳಲ್ಲಿ ಭಾರೀ ಏರಿಕೆಯಾಗಲಿದ್ದು ನೂರರ ಗಡಿ ದಾಟಲಿವೆ. ಜೆಡಿಎಸ್ ಕೂಡ ಸ್ವಲ್ಪ ಮಟ್ಟಿಗೆ ತನ್ನ ಸ್ಥಾನಗಳನ್ನು ಉತ್ತಮಪಡಿಸಿಕೊಳ್ಳಲಿದೆ. ಆದರೆ ಆಡಳಿತರೂಢ ಕಾಂಗ್ರೆಸ್ ಮಾತ್ರ ಭಾರೀ ಪ್ರಮಾಣದಲ್ಲಿ ಸೀಟುಗಳನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿಯಲಿದೆ ಎಂಬುದಾಗಿ ಸಮೀಕ್ಷೆಯು ತಿಳಿಸಿದೆ.

ನ್ಯೂಸ್ಎಕ್ಸ್ ಸಮೀಕ್ಷೆ: ಸಿದ್ದರಾಮಯ್ಯ ಸರ್ಕಾರ ಪಾಸೋ? ಫೇಲೋ?ನ್ಯೂಸ್ಎಕ್ಸ್ ಸಮೀಕ್ಷೆ: ಸಿದ್ದರಾಮಯ್ಯ ಸರ್ಕಾರ ಪಾಸೋ? ಫೇಲೋ?

ಬಿಜೆಪಿಗೆ 102 ರಿಂದ 108 ಸ್ಥಾನಗಳು ಸಿಗಲಿವೆ ಎಂಬುದು ಸರ್ವೆಯ ಅಂದಾಜು. ಕಾಂಗ್ರೆಸ್ ಎರಡನೇ ಸ್ಥಾನ ಪಡೆಯಲಿದ್ದು 72-74 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲಿದ್ದರೆ, ಜೆಡಿಎಸ್ 42-44 ಮತ್ತು ಇತರರು 2-4 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

Jan Ki Baat Karnataka opinion poll gives BJP 102 -108

ಬಿಜೆಪಿಗೆ ಶೇಕಡಾ 40ರಷ್ಟು ಮತಗಳು ಬೀಳಲಿವೆ, ಕಾಂಗ್ರೆಸ್ ಕೇವಲ ಶೇಕಡಾ 38 ಮತಗಳಿಗೆ ತೃಪ್ತಿ ಹೊಂದಬೇಕಾಗುತ್ತದೆ. ಜೆಡಿಎಸ್ ಕಳೆದ ಬಾರಿಯಷ್ಟೇ ಅಂದರೆ ಶೇಕಡಾ 20 ಮತಗಳನ್ನು ಪಡೆಯಬಹುದು ಎಂಬುದಾಗಿ ಸರ್ವೆ ಫಲಿತಾಂಶ ತಿಳಿಸಿದೆ.

ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ : ಯಾರಿಗೆ ಎಷ್ಟು ಸ್ಥಾನ?ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ : ಯಾರಿಗೆ ಎಷ್ಟು ಸ್ಥಾನ?

ಒಟ್ಟು 1.2 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಿದ್ದೇವೆ ಎಂದು ಜನ್ ಕೀ ಬಾತ್ ಸಂಸ್ಥೆ ಹೇಳಿಕೊಂಡಿದೆ.

English summary
A new pre-poll survey for Karnataka says that the BJP would end up winning 102-108 seats in the assembly elections. Jan Ki Baat which published the opinion poll has however given the Congress double digits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X