• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಗಲಕೋಟೆ: ಮಂದಿರ ಧ್ವಂಸ ಖಂಡಿಸಿ ಜೈನರ ಪ್ರತಿಭಟನೆ

By Mahesh
|

ಬಾಗಲಕೋಟೆ, ಡಿ.03: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿದ್ದ ಜೈನ ದೇಗುಲವನ್ನು ಜಿಲ್ಲಾಡಳಿತ ನೆಲಸಮಗೊಳಿಸಿದೆ. ಕರ್ನಾಟಕ ಸರ್ಕಾರದ ಈ ಕ್ರಮವನ್ನು ಖಂಡಿಸಿ ಜೈನ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಜೈನ ಸಮುದಾಯದವರ ಪ್ರತಿಭಟನೆಗೆ ಮಾಜಿ ಸಚಿವ ಸಿಟಿ ರವಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಡೊಂಗರವಾಲೆ ಬಡೆಬಾಬಾ ಪೂಜಾ ಮಂದಿರ, ಪ್ರವಚನ ಮಂಟಪ, ಆದಿನಾಥ ಭಗವಾನರ ಬಸದಿ, ಧ್ಯಾನ ಮಂದಿರ ಮತ್ತಿತರ ಕಟ್ಟಡಗಳನ್ನು ಬಾಗಲಕೋಟೆ ಜಿಲ್ಲಾಡಳಿತ ನೆಲಸಮಗೊಳಿಸಿದೆ. ಭದ್ರಗಿರಿ ಬೆಟ್ಟ ಎಂದು ಗುರುತಿಸಿಕೊಂಡಿರುವ ಈ ಪ್ರದೇಶ, ಸರ್ಕಾರಕ್ಕೆ ಸೇರಿದ್ದಾಗಿದ್ದು, ಹೀಗಾಗಿ ಜಿಲ್ಲಾಡಳಿತ ವಶ ಪಡಿಸಿಕೊಂಡಿದೆ. [ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]

ಕರ್ನಾಟಕದ ಇತರೆ ಭಾಗಗಳಲ್ಲದೆ, ಮಹಾರಾಷ್ಟ್ರ, ಗೋವಾ, ಬೆಳಗಾವಿ ಜಿಲ್ಲೆ ಸೇರಿ ಅನೇಕ ಕಡೆಗಳಿಂದ ಜೈನ ಸಮುದಾಯದ ಮುಖಂಡರು, ಶ್ರಾವಕ, ಶ್ರಾವಕಿಯರು ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದತ್ತ ಧಾವಿಸುತ್ತಿದ್ದಾರೆ.

ದೇಗುಲ ಧ್ವಂಸ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಕಲ್ಲು ತೂರಾಟ ಮಾಡಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. [ಅಲ್ಪಸಂಖ್ಯಾತರ ಪಟ್ಟಿಗೆ ಜೈನ ಸಮುದಾಯ]

ಭದ್ರಗಿರಿ ಬೆಟ್ಟದ ಸುತ್ತಾಮುತ್ತಾ ಬಿಗುವಿನ ವಾತಾವರಣವಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಜೈನ ಸಮುದಾಯದ ಸಾವಿರಾರು ಜನರು ತೇರದಾಳ-ಹನಗಂಡಿ ಮಧ್ಯೆ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ಮುಂದುವರಿಸಿದ್ದು, ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಕುಡಚಿ ಶಾಸಕ ಪಿ.ರಾಜೀವ, ಮಾಜಿ ಶಾಸಕ ಸಿದ್ದು ಸವದಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಧಾರ್ಮಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ,ಮಾಜಿ ಸಚಿವ ಸಿಟಿ ರವಿ ಸೇರಿದಂತೆ ಅನೇಕ ಮಂದಿ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ಜಮಖಂಡಿಯಲ್ಲಿ ಜೈನರ ಪ್ರತಿಭಟನೆ ಏಕೆ?

ಜಮಖಂಡಿಯಲ್ಲಿ ಜೈನರ ಪ್ರತಿಭಟನೆ ಏಕೆ?

ಡೊಂಗರವಾಲೆ ಬಡೆಬಾಬಾ ಪೂಜಾ ಮಂದಿರ, ಪ್ರವಚನ ಮಂಟಪ, ಆದಿನಾಥ ಭಗವಾನರ ಬಸದಿ, ಧ್ಯಾನ ಮಂದಿರ ಮತ್ತಿತರ ಕಟ್ಟಡಗಳನ್ನು ಬಾಗಲಕೋಟೆ ಜಿಲ್ಲಾಡಳಿತ ನೆಲಸಮಗೊಳಿಸಿದೆ. ರ್ಕಾರದ ಈ ಕ್ರಮವನ್ನು ಖಂಡಿಸಿ ಜೈನ ಸಮುದಾಯ ಪ್ರತಿಭಟನೆ ನಡೆಸುತ್ತಿದೆ.

ರಸ್ತೆ ಅಗಲೀಕರಣ ಸಂದರ್ಭದಲ್ಲಿ ದರ್ಗಾ ಮುಟ್ಟಲಿ

ರಸ್ತೆ ಅಗಲೀಕರಣ ಸಂದರ್ಭದಲ್ಲಿ ದರ್ಗಾ ಮುಟ್ಟಲಿ ನೋಡೋಣ. ದೇಗುಲದ ಮೇಲೆ ಏಕೆ ಕಣ್ಣು?

ಬುದ್ಧಿಜೀವಿಗಳೇ ಎಲ್ಲಿದ್ದೀರಿ?

ಬುದ್ಧಿಜೀವಿಗಳೇ ಎಲ್ಲಿದ್ದೀರಿ? ಮಾಧ್ಯಮಗಳು ಇತ್ತ ಗಮನ ಹರಿಸಿಲ್ಲ ಏಕೆ? ಇದು ಅಸಹಿಷ್ಣುತೆ ಅಲ್ಲವೇ?

ಜೈನರ ಮೇಲೆ ದಾಳಿ ನಡೆಯುತ್ತಿದೆ

ಜೈನರ ಮೇಲೆ ದಾಳಿ ನಡೆಯುತ್ತಿದೆ. ಕರ್ನಾಟಕವನ್ನು ಸೆಕ್ಯುಲರ್ ರಾಷ್ಟ್ರ ಎಂದು ಕರೆಯಬಹುದೆ?

ಭದ್ರಗಿರಿಯ ಮತ್ತೊಂದು ದೃಶ್ಯ

ಜಮಖಂಡಿ ತಾಲೂಕಿನ ಭದ್ರಗಿರಿಯ ಮತ್ತೊಂದು ದೃಶ್ಯ

ಮಾಜಿ ಸಚಿವ ಸಿಟಿ ರವಿ ಅವರಿಂದ ಖಂಡನೆ

ಬಾಗಲಕೋಟೆ: ಮಂದಿರ ಧ್ವಂಸ ಖಂಡಿಸಿದ ಮಾಜಿ ಸಚಿವ ಸಿಟಿ ರವಿ ಅವರಿಂದ ಟ್ವೀಟ್.

ಟಿಪ್ಪುವಿನಂತೆ ಸಿದ್ದರಾಮಯ್ಯ ಆಗುತ್ತಿದ್ದಾರೆಯೇ

ಟಿಪ್ಪು ಜಯಂತಿ ಆಚರಿಸಿದ ಮೇಲೆ ಸಿದ್ದರಾಮಯ್ಯ ಅವರು ಟಿಪ್ಪುವಿನಂತೆ ದೇಗುಲ ಧ್ವಂಸ ಕಾರ್ಯಾಚರಣೆಗೆ ಇಳಿದಿದ್ದಾರೆಯೇ? : ಸಿಟಿ ರವಿ

ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ: ಚಕ್ರವರ್ತಿ

ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ: ಚಕ್ರವರ್ತಿ ಸೂಲಿಬೆಲೆ. ಬನಹಟ್ಟಿ ಬಸದಿ, ದೇಗುಲಗಳ ಬಗ್ಗೆ ಇತಿಹಾಸ ಹೀಗಿದೆ ಎಂದು ಟ್ವೀಟ್ ಮಾಡಿದ್ದಾರೆ.

English summary
"I Strongly Condemn d Demolition of d Historic Jain Temple near Jamakhandi, Bagalkot district in Karnataka.I Share d Grief of Peace Loving Jains' tweeted BJP leader CT Ravi in support of Jain community who are protesting against Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X