ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಸರ್ಕಾರ ವಿಸರ್ಜಿಸುವುದು ಉತ್ತಮ: JDS ಮುಖಂಡ ಬಸವರಾಜ ಹೊರಟ್ಟಿ

|
Google Oneindia Kannada News

Recommended Video

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಸವರಾಜ ಹೊರಟ್ಟಿ

ಬೆಂಗಳೂರು, ಮೇ 18: ಮೈತ್ರಿ ಸರ್ಕಾರದ ಬಗ್ಗೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅತೃಪ್ತಿ ಹೊರಹಾಕಿದ್ದು, ಸರ್ಕಾರವನ್ನು ವಿಸರ್ಜಿಸಿ ಮತ್ತೆ ಚುನಾವಣೆಗೆ ಹೋಗುವುದು ಒಳಿತೆಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಮಾಜಿ ಸಚಿವ, ಜೆಡಿಎಸ್‌ನ ಪ್ರಮುಖ ಮುಖಂಡ ಬಸವರಾಜ ಹೊರಟ್ಟಿ ಅವರು, ಮೈತ್ರಿ ಸರ್ಕಾರ ಸೂಕ್ತವಾಗಿ ಆಡಳಿತ ನಡೆಸುತ್ತಿಲ್ಲವೆಂಬ ಅಸಮಾಧಾನವನ್ನು ಹೊರಹಾಕಿದ್ದಾರೆ.

ದೇವೇಗೌಡರ ಹೋರಾಟದ ಕೆಚ್ಚು ನನಗೆ ಪ್ರೇರಣೆ: ಸಿದ್ದರಾಮಯ್ಯ ದೇವೇಗೌಡರ ಹೋರಾಟದ ಕೆಚ್ಚು ನನಗೆ ಪ್ರೇರಣೆ: ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷ ಪದೇ-ಪದೇ ಏನಾದರೂ ಗೊಂದಲ ಸೃಷ್ಠಿಸುತ್ತಿದೆ, ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ, ಸಿಎಂ ಕುಮಾರಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Its better to dissolve government and go to election: JDS leader Basavraj Horatti

ಬಿಜೆಪಿಯಿಂದಲೂ ಗೊಂದಲುಗಳು ನಿರ್ಮಾಣವಾಗುತ್ತಿವೆ, ಮೈತ್ರಿ ಸರ್ಕಾರವನ್ನು ಉರುಳಿಸಬೇಕೆಂದು ಬಿಜೆಪಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರದ ಹಿರಿ ತಲೆಗಳಿಗೆ 4 ಪ್ರಶ್ನೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರದ ಹಿರಿ ತಲೆಗಳಿಗೆ 4 ಪ್ರಶ್ನೆ

ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಬೆಂಬಲಿಗರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಅವರು, ಸಿದ್ದರಾಮಯ್ಯ ಸಿಎಂ ಆಗುವುದಾದರೆ ಜೆಡಿಎಸ್‌ ಯಾಕೆ ಬೆಂಬಲ ನೀಡಬೇಕು? ಕುಮಾರಸ್ವಾಮಿ ಐದು ವರ್ಷ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಅದು ಹಾಗೆಯೇ ನಡೆಯಲಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಕಾಂಗ್ರೆಸ್-ಜೆಡಿಎಸ್‌ಗೆ 18 ಸ್ಥಾನ: ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆಕಾಂಗ್ರೆಸ್-ಜೆಡಿಎಸ್‌ಗೆ 18 ಸ್ಥಾನ: ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ

ಸಿಎಂ ಸ್ಥಾನದ ಬಗ್ಗೆ ಸುಮ್ಮನೆ ಗೊಂದಲ ಸೃಷ್ಠಿಸಲಾಗುತ್ತಿದೆ, ಕೆಲವು ನಿರುದ್ಯೋಗಿಗಳು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಐದು ವರ್ಷ ಸಿಎಂ ಆಗಿದ್ದಾರೆ, ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದಾರೆ ಎಂದು ಅವರು ಹೇಳಿದರು.

English summary
JDS leader Basavraj Horatti said its better to dissolve government and go to election. He complaints on coalition partner congress that it does not letting Kumaraswamy to administrate properly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X