ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ದಾಳಿ LIVE: ಶಾಕೂ ಇಲ್ಲ ಏನೂ ಇಲ್ಲ, ಇದಕ್ಕೆಲ್ಲ ನಾವು ಹೆದರುವುದಿಲ್ಲ: ರೇವಣ್ಣ

|
Google Oneindia Kannada News

ಮೈಸೂರು, ಹಾಸನ, ಮಾರ್ಚ್ 28: ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ, ಸಿಎಸ್ ಪುಟ್ಟರಾಜು, ಎಂಎಲ್‌ಸಿ ಬಿಎಂ ಫಾರೂಕ್ ಸೇರಿದಂತೆ 10 ಪ್ರಭಾವಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣೆ ವೇಳೆ ಕೋಟ್ಯಂತರ ಹಣ ಸಾಗಣೆ ಶಂಕೆ ಹಿನ್ನೆಲೆ ಐಟಿ ದಾಳಿ ನಡೆಸಲಾಗಿದೆ. ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ ಭಾಗದಲ್ಲಿ ಹಣ ಸಾಗಣೆ ಶಂಕೆ ಹಿನ್ನೆಲೆ ದಾಳಿ ನಡೆದಿದೆ. ಮಂಡ್ಯಕ್ಕೆ ಹಣ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿ ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿ

ಚುನಾವಣಾ ಅಕ್ರಮದ ಬಗ್ಗೆ ವಾರದಿಂದ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಮೈಸೂರು, ಮಂಡ್ಯದಲ್ಲಿ ಅಕ್ರಮವಾಗಿ ಹಣ ಸಾಗಾಟದಲ್ಲಿ ಸಚಿವ ಸಿ.ಎಸ್. ಪುಟ್ಟರಾಜು ಪ್ರಮುಖ ಪಾತ್ರ ವಹಿಸಿರುವ ಅನುಮಾನದಿಂದ ದಾಳಿ ನಡೆಸಿದ್ದಾರೆ.

It raid on ministers and 10 other influential persons:LIVE

ಎಚ್​.ಡಿ. ರೇವಣ್ಣ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯ ಹಾಸನ ಕಚೇರಿ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಹಾಸನದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರ ವಿಚಾರಣೆ ನಡೆಸಲಾಗುತ್ತಿದೆ. ಹಾಗೇ, ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಡತಗಳ ಪರಿಶೀಲನೆ ಮಾಡಲಾಗುತ್ತಿದೆ.

ಸಿಎಂ ಆಪ್ತ ಸಿಎಸ್ ಪುಟ್ಟರಾಜು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಅತ್ತ ಸಚಿವ ಎಚ್ ಡಿ ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಮುಂದುವರೆದ ಐಟಿ ಇಲಾಖೆ ದಾಳಿ : ಸಿಎಂ ಆಪ್ತ ಪುಟ್ಟರಾಜುಗೆ ಬಿಸಿ ಮುಂದುವರೆದ ಐಟಿ ಇಲಾಖೆ ದಾಳಿ : ಸಿಎಂ ಆಪ್ತ ಪುಟ್ಟರಾಜುಗೆ ಬಿಸಿ

ರಾಯಗೌಡ ಅವರ ಚೆನ್ನರಾಯಪಟ್ಟಣದ ನಿವಾಸವೂ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮಂಡ್ಯದಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳ ಮತ್ತೊಂದು ತಂಡವೇ ಈ ದಾಳಿ ಮಾಡಿದ್ದು, ಸುಮಾರು 10 ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಎಚ್ ಡಿ ರೇವಣ್ಣ ಅವರ ಮೂವರು ಆಪ್ತರಿಗೆ ಸೇರಿದೆ ಎನ್ನಲಾದ 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ವಿವಿಧೆಡೆ ರಾತ್ರೋರಾತ್ರಿ ಆದಾಯ ತೆರಿಗೆ ದಾಳಿ!
ಮೂಲಗಳ ಪ್ರಕಾರ ರೇವಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುತ್ತಿಗೆದಾರರಾದ ನಾರಾಯಣ ರೆಡ್ಡಿ, ಅಶ್ವತ್, ರಾಯಗೌಡ ಅವರ ಹಾಸನದ ಮನೆಗಳ ಮೇಲೆ ದಾಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅವರ ಮನೆಗಳು ಮಾತ್ರವಲ್ಲದೇ ಅವರ ಬೆಂಬಲಿಗರ ಮನೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Newest FirstOldest First
11:34 AM, 28 Mar

ಐಟಿ ಕಚೇರಿ ಎದುರು ಪ್ರತಿಭಟನೆ

ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿ ಎದುರು ದೋಸ್ತಿ ಪ್ರತಿಭಟನೆ
10:37 AM, 28 Mar

ಜೆಡಿಎಸ್ ಮುಖಂಡರಿಂದ ಸಿಎಂ ಕುಮಾರಸ್ವಾಮಿ ಭೇಟಿ

ಸಚಿವ ಸಿಎಸ್ ಪುಟ್ಟರಾಜು ಹಾಗೂ ಹಲವರ ಮನೆಯ ಮೇಲೆ ಐಟಿ ದಾಳಿ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಾದ ಜೆಡಿಎಸ್ ನಾಯಕರು
10:35 AM, 28 Mar

ಕೇಂದ್ರದಿಂದ ಐಟಿ, ಸಿಬಿಐ ದುರ್ಬಳಕೆ

ಕೇಂದ್ರ ಸರ್ಕಾರದಿಂದ ಐಟಿ, ಸಿಬಿಐ ದುರ್ಬಳಕೆ, ಇದರಿಂದ ಜೆಡಿಎಸ್ ಹೆದರುವುದಿಲ್ಲ, ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ- ಮಧು ಬಂಗಾರಪ್ಪ
10:17 AM, 28 Mar

ಐಟಿ ದಾಳಿಯಿಂದ ದೇವೇಗೌಡರು ಹೆದರಲ್ಲ

ಐಟಿ ದಾಳಿಯಿಂದ ದೇವೇಗೌಡರು ಹೆದರಲ್ಲ
ಐಟಿ ದಾಳಿಯಿಂದ ದೇವೇಗೌಡರನ್ನು ಹೆದರಿಸಬಹುದು ಎಂದುಕೊಂಡಿದ್ದರೆ ಅದೇ ಬಿಜೆಪಿಯ ಅಂತ್ಯಕಾಲ- ಎಚ್‌ಡಿ ರೇವಣ್ಣ
10:16 AM, 28 Mar

ನಮಗೆ ಶಾಕೂ ಇಲ್ಲ ಏನೂ ಇಲ್ಲ

ನಮಗೆ ಶಾಕೂ ಇಲ್ಲ ಏನೂ ಇಲ್ಲ,ಇಂಥಹದ್ದಕ್ಕೆಲ್ಲ ನಾವು ಹೆದರುವ ಪ್ರಶ್ನೆಯೇ ಇಲ್ಲ- ಎಚ್‌ಡಿ ರೇವಣ್ಣ
9:42 AM, 28 Mar

ಐಟಿ ದಾಳಿ ಮಾಡಿಸುವ ಪವರ್ ನನಗಿಲ್ಲ: ಸುಮಲತಾ ಅಂಬರೀಷ್

ಐಟಿ ದಾಳಿ ಮಾಡಿಸುವ ಪವರ್ ನನಗಿಲ್ಲ: ಸುಮಲತಾ ಅಂಬರೀಷ್
ಕೇಂದ್ರದ ಐಟಿ ಅಧಿಕಾರಿಗಳು ಮಾಡುವಂತಹ ಕೆಲಸ ಇದು, ನನಗೆ ಐಟಿ ದಾಳಿಗೂ ಸಂಬಂಧವಿಲ್ಲ, ಐಟಿ ದಾಳಿ ಮಾಡಿಸುವಂತಹ ಪವರ್ ನನಗಿಲ್ಲ, ನಾನು ಲೋಕಸಭಾ ಪಕ್ಷೇತರ ಅಭ್ಯರ್ಥಿ ಅಷ್ಟೆ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ- ಸುಮಲತಾ ಅಂಬರೀಷ್
9:37 AM, 28 Mar

ಪುಟ್ಟರಾಜು ಅಣ್ಣನ ಮಗನ ಮನೆ ಮೇಲೆ ಐಟಿ ದಾಳಿ

ಸಿಎಸ್ ಪುಟ್ಟರಾಜು ಅಣ್ಣನ ಮಗ ಅಶೋಕ್ ಅವರ ಮನೆ ಮೇಲೂ ಐಟಿ ದಾಳಿ
Advertisement
9:31 AM, 28 Mar

ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ

ಸಚಿವ ಸಿಎಸ್ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ: ಬೆಂಬಲಿಗರಿಂದ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ
9:25 AM, 28 Mar

ಐಟಿ ಅಧಿಕಾರಿಗಳು ಅಮಿತ್ ಷಾ ಏಜೆಂಟ್‌ಗಳು

ಐಟಿ ಅಧಿಕಾರಿಗಳು ಅಮಿತ್ ಷಾ ಅವರ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ: ಸಿಎಸ್ ಪುಟ್ಟರಾಜು
9:23 AM, 28 Mar

ಎಚ್ ಡಿ ರೇವಣ್ಣ ಆಪ್ತರಿಗೆ ಸೇರಿದ 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ

ಎಚ್ ಡಿ ರೇವಣ್ಣ ಅವರ ಮೂವರು ಆಪ್ತರಿಗೆ ಸೇರಿದೆ ಎನ್ನಲಾದ 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

English summary
IT raid on minster HD Revanna residence in Hassan,minister CS Puttaraju his relatives and 10 influential persons Bengaluru, mysuru, mandya. IT officials currently scrutinizing crucial documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X