ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾಹುಲಿಯ "ರೀಜಿನಲ್ ಪಾರ್ಟಿ' ಕನಸು ಭಗ್ನಕ್ಕೆ ಬಿಡಲಾಯಿತೇ ಐಟಿ ಬ್ರಹ್ಮಾಸ್ತ್ರ!

|
Google Oneindia Kannada News

ಬೆಂಗಳೂರು, ಅ. 08: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪುತ್ರ ಬಿ.ವೈ. ವಿಜಯೇಂದ್ರ ಆಪ್ತರು- ಗುತ್ತಿಗೆದಾರರ ಮೇಲೆ ನಡೆದಿರುವ ಐಟಿ ದಾಳಿಯ ಹಿಂದೆ 'ರಾಜಕೀಯ ಚದುರಂಗ' ಆಟವಿದೆಯೇ ? ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಮತ್ತೆ ಕೆಜೆಪಿ ಪಕ್ಷ ಕಟ್ಟಿ ಅಖಾಡಕ್ಕೆ ಇಳಿಯಲು ಬಿಎಸ್ ವೈ ಮತ್ತು ವಿಜಯೇಂದ್ರ ಪೂರ್ವ ತಯಾರಿ ನಡೆಸುತ್ತಿದ್ದಾರೆಯೇ ? ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಪ್ರಾದೇಶಿಕ ಪಕ್ಷದ ಜತೆಗೆ ಇನ್ನೊಂದು ಪ್ರಾದೇಶಿಕ ಪಕ್ಷ ಹುಟ್ಟುಹಾಕಿ ಜಂಟಿಯಾಗಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಕಟ್ಟಿ ಹಾಕುವ ಪ್ಲಾನ್ ಮಾಡಿದ್ದರೇ ಹಳೇ ದೋಸ್ತಿಗಳು ? ಕೆಜೆಪಿ ಪಕ್ಷ ಹುಟ್ಟಿ ಹಾಕುವ ಮುನ್ನ ಆರ್ಥಿಕ ಸದೃಢತೆ ಸಾಧಿಸಲು ಬಿಎಸ್ ವೈ ಮತ್ತು ಬಿವೈವಿ ಮುಂದಾಗಿದ್ದ ಕಾರ್ಯತಂತ್ರ ಟಾರ್ಗೆಟ್ ಮಾಡಿ "ಐಟಿ ಬ್ರಹ್ಮಾಸ್ತ್ರ'ವನ್ನು ಪ್ರಯೋಗವಾಯಿತೇ?

 ಡಿ.ವೈ. ಉಪ್ಪಾರ್ ಮತ್ತು ರಾಹುಲ್ ಎಂಟರ್‌ಪ್ರೈಸಸ್ ಕಪ್ಪು - ಬಿಳುಪು ವಹಿವಾಟು ಪತ್ತೆ? ಡಿ.ವೈ. ಉಪ್ಪಾರ್ ಮತ್ತು ರಾಹುಲ್ ಎಂಟರ್‌ಪ್ರೈಸಸ್ ಕಪ್ಪು - ಬಿಳುಪು ವಹಿವಾಟು ಪತ್ತೆ?

ಕಳೆದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ 'ಐಟಿ ದಾಳಿ ಪ್ರಕರಣ' ರಾಜ್ಯ ರಾಜಕೀಯ ವಲಯದಲ್ಲಿ ಹುಟ್ಟು ಹಾಕಿರುವ ಗಂಭೀರ ಪ್ರಶ್ನೆಗಳಿವು. ಭವಿಷ್ಯದಲ್ಲಿ ಕರ್ನಾಟಕದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ 'ಪ್ರಾದೇಶಿಕ ಪಕ್ಷ' ಪ್ಲಾನ್ ಸದ್ದಿಲ್ಲದೇ ಕಾರ್ಯಗತವಾಗುತ್ತಿತ್ತು. ಐಟಿ ದಾಳಿ ಮೂಲಕ ಆ ಪ್ರಾದೇಶಿಕ ಪಕ್ಷದ ಸೀಕ್ರೇಟ್ ಪ್ಲಾನ್ ಬಗ್ಗು ಬಡಿಯುವ ಮೊದಲ ಭಾಗವಾಗಿ ಐಟಿ ದಾಳಿ ನಡೆದಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ.

2023 ವಿಧಾನಸಭೆ ಚುನಾವಣೆ ಟಾರ್ಗೆಟ್: ಅದು ನೈತಿಕವೋ, ಅನೈತಿಕವೋ ಗೊತ್ತಿಲ್ಲ. ಬಿಜೆಪಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತಂದಿದ್ದು ಮಾತ್ರ ಬಿಎಸ್ ವೈ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿ ಸರ್ಕಾರ ಅನ್ನುವದಕ್ಕಿಂತಲೂ ಬಿಎಸ್ ವೈ ಅವರ ರೈತ ಪರ ಸರ್ಕಾರ ಎಂದೇ ಎಂದೇ ಬಿಂಬಿತವಾಗಿತ್ತು. ಭ್ರಷ್ಟಾಚಾರ ಆರೋಪದ ನೆಪದಲ್ಲಿ ಬಿಎಸ್ ವೈ ಅವರನ್ನು ಬಿಜೆಪಿಯಿಂದ ದೂರ ಇಡುವ ಕಸರತ್ತು ಮಾಡಿ ಬಿಜೆಪಿ ನಾಯಕರಿಗೆ ಉಲ್ಟಾ ಹೊಡೆದಿತ್ತು. ಒಮ್ಮೆ ಬಿಎಸ್ ವೈ ಅವರಿಗೆ ಅವಮಾನ ಮಾಡಿ ಕೆಜೆಪಿ ಸೃಷ್ಟಿಗೆ ನಾಂದಿ ಹಾಡಿದ್ದ ಬಿಜೆಪಿ ಆನಂತರ ಎದುರಿಸಿದ್ದ ಚುನಾವಣೆಯಲ್ಲಿ ನೆಲಕಚ್ಚಿತು. ಸಿದ್ದರಾಮಯ್ಯ ನೇತೃತ್ವದ ಪೂರ್ಣಾವಧಿ ಕಾಂಗ್ರೆಸ್ ಸರ್ಕಾರ ಬಂದಿತ್ತು.

IT raid in Karnataka: What is the Secret Plan of IT raid on BSY nephew and contractors

ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ ಬಿಎಸ್ ವೈ ಅನಿವಾರ್ಯತೆ ಅಗತ್ಯ ಎಂದು ಅರಿತ ಅರ್‌ಎಸ್ಎಸ್ ನಾಯಕರು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದರೂ ಬಿಎಸ್ ವೈ ಅವರನ್ನೇ ಮತ್ತೆ ಅಧಿಪತಿಯನ್ನಾಗಿಸುವ ಅನಿವಾರ್ಯತೆಗೆ ಬಿದ್ದರು. ಯಾವುದೇ ಷರತ್ತು ರಹಿತ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದ ಬಿಎಸ್ ವೈ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಆಪರೇಷನ್ ಕಮಲ ಮೂಲಕ ಬಾಂಬೆ ಬಾಯ್ಸ್ ಹುಟ್ಟು ಹಾಕಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದ ಯಡಿಯೂರಪ್ಪ ಅವರಿಗೆ ವಯೋಮಾನ ಕಾರಣ ನೀಡಿ ಸಿಎಂ ಖುರ್ಚಿಯಿಂದ ಇಳಿಸಿತು. ಆಡಳಿತದ ಕೇಂದ್ರವಾಗಿದ್ದ ಪುತ್ರ ವಿಜಯೇಂದ್ರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ಬಿಜೆಪಿ ವರಿಷ್ಠರು ತಂತ್ರ ರೂಪಿಸಿ ದೂರ ಇಟ್ಟಿರುವುದು ಗುಟ್ಟಾಗಿ ಉಳಿದಿಲ್ಲ.

IT raid in Karnataka: What is the Secret Plan of IT raid on BSY nephew and contractors

ಯಡಿಯೂರಪ್ಪ ಮೌನ ಅಪಾಯಕಾರಿ:
ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಬೇಸತ್ತ ಯಡಿಯೂರಪ್ಪ 2023 ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಕೆಜೆಪಿಯನ್ನು ಮತ್ತೆ ಮುಂಚೂಣಿಗೆ ತರಲು ಸದ್ದಿಲ್ಲದೇ ತಯಾರಿ ನಡೆಸಿದ್ದರು ಎಂಬ ಮಾತು ಇದೀಗ ಕೇಳಿ ಬರುತ್ತಿದೆ. ಕನಿಷ್ಠ 30 ಸೀಟು ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದು ಆಳ್ವಿಕೆ ನಡೆಸಿರುವ ಜೆಡಿಎಸ್ ಜತೆಗೆ ಇನ್ನೊಂದು ಪ್ರಾದೇಶಿಕ ಪಕ್ಷ ಹುಟ್ಟಿ ಹಾಕಿ ಎರಡೂ ಒಂದಾದರೆ ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಅಧಿಕಾರ ಚುಕ್ಕಾಣಿ ಹಿಡಿಯುವುದು ಗಗನ ಕುಸುಮ. ರಾಜ್ಯದಲ್ಲಿರುವುದು ಎರಡು ಪ್ರಬಲ ಸಮುದಾಯ. ಒಕ್ಕಲಿಗ ಸಮುದಾಯದ ಮತ ಸೆಳೆಯಲು ಜೆಡಿಎಸ್ ಇದೆ. ಅದೇ ರೀತಿ ಲಿಂಗಾಯತ ಮತ ಸಳೆಯಲು ಕೆಜೆಪಿ ಹುಟ್ಟು ಹಾಕಿದರೆ ರಾಜ್ಯದಲ್ಲಿ ಎರಡು ಪ್ರಾದೇಶಿಕ ಪಕ್ಷಗಳು ಕನಿಷ್ಠ 40 ರಿಂದ 80 ಸೀಟು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಎರಡು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿ ನಿಂತು ಬಿಟ್ಟರೆ ಅಧಿಕಾರ ನಮ್ಮ ಕೈಗೇ ಎಂಬುದು ದಳಪತಿಗಳ ಮತ್ತು ರಾಜಾಹುಲಿ ನಡುವಿನ ಸೀಕ್ರೇಟ್ ಪ್ಲಾನ್ ಎಂಬ ಮಾತು ಈಗ ಕೇಳಿ ಬರುತ್ತಿದೆ.

IT raid in Karnataka: What is the Secret Plan of IT raid on BSY nephew and contractors

ದಳಪತಿಗಳ ಜೆಡಿಎಸ್ ಹಾಗೂ ಬಿಎಸ್ ವೈ ಅವರ ಕೆಜೆಪಿ ಮುಂದಿನ ವಿಧಾನಸಭಾ ಚುನಾವಣೆ ಅಖಾಡಕ್ಕೆ ಇಳಿದರೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಅಧಿಕಾರ ದಕ್ಕದಂತೆ ತಂತ್ರ ರೂಪಿಸಬಹುದು. ಇವತ್ತಿನ ರಾಜಕೀಯ ಬೆಳವಣಿಗೆ ನೋಡಿದರೆ ಕರ್ನಾಟಕದಲ್ಲಿ ಎದುರಾಗಿರುವ ವಿಧಾನಸಭೆ ಚುನಾವಣೆ ರಾಷ್ಟ್ರೀಯ ಪಕ್ಷಗಳ ಪಾಲಿಗೆ ಸುಲಭವಾಗಿಲ್ಲ. ಒಕ್ಕಲಿಗ ಸಮುದಾಯದ ಮತ ಸೆಳೆಯಲು ದಳಪತಿಗಳು. ಲಿಂಗಾಯುತ ಮತ ಬ್ಯಾಂಕ್ ಪಡೆಯಲು ಬಿಎಸ್ ವೈ ಅವರ ಕೆಜೆಪಿ ಅಖಾಡಕ್ಕೆ ಇಳಿದರೆ ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಊಹೆಗೂ ನಿಲುಕದ್ದು. ಇದರ ಭಾಗವಾಗಿಯೇ ಬಿ. ಎಸ್. ಯಡಿಯೂರಪ್ಪ ಅವರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೆಪಕ್ಕೆ ಮಾತ್ರ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ವಾಸ್ತವದಲ್ಲಿ ಕಾರ್ಯಕ್ಷೇತ್ರವನ್ನು ಶಿವಮೊಗ್ಗಕ್ಕೆ ವರ್ಗಾಯಿಸಿ ಕೆಜೆಪಿ ಪಕ್ಷ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರಂತೆ. ಕೆಜೆಪಿ ಪಕ್ಷ ಕಟ್ಟುವ ಅಂತಿಮ ತೀರ್ಮಾನ ಕೈಗೊಂಡ ಬೆನ್ನಲ್ಲೇ ಮುಂದಿನ ಚುನಾವಣೆಗೆ ಸಜ್ಜಾಗಲು ಆರ್ಥಿಕ ಶಕ್ತಿ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಕಾರ್ಯಗಳಿಗೆ ಚಾಲನೆ ನೀಡಿದ್ದರು ಎಂಬ ಮಾತು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.

IT raid in Karnataka: What is the Secret Plan of IT raid on BSY nephew and contractors

ಈ ಮಾಹಿತಿ ಸಿಕ್ಕ ಕೂಡಲೇ ಬಿಜೆಪಿ ಪಕ್ಷದ ಬುಡಕ್ಕೆ ಭವಿಷ್ಯದಲ್ಲಿ ಬೀಳಲಿರುವ ಬೆಂಕಿ ಹಾರಿಸಲು, ಕೆಜೆಪಿ ಕಟ್ಟುವ ಪ್ಲಾನ್ ಗೆ ಆರಂಭದಲ್ಲಿ ಆಘಾತ ಕೊಡಲು ಐಟಿ ಅಸ್ತ್ರ ಪ್ರಯೋಗಿಸಲಾಗಿದೆ. ಹೀಗಾಗಿಯೇ ಯಡಿಯೂರಪ್ಪ ಅವರ ಆಪ್ತ ವರ್ಗವನ್ನು ಟಾರ್ಗೆಟ್ ಮಾಡಿ ದೆಹಲಿಯಿಂದಲೇ ಐಟಿ ಕಾರ್ಯಚರಣೆ ಅಸ್ತ್ರ ಪ್ರಯೋಗಿಸಲಾಗಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ.

Recommended Video

MS Dhoni ಮುಂದಿನ ಬಾರಿ CSKಗೆ Coach ಆಗ್ತಾರಾ? | Oneindia Kannada

English summary
Secrete story of IT raid: IT' Bramhastra to Curb Ex Chief Minister B.S. Yadiyurappa,s "REGIONAL PARTY" dream know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X