ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಪರಿಷತ್ ಕಲಾಪ ಕರೆದಿರುವುದೇ ಕಾನೂನು ಬಾಹಿರ: ಸಿ.ಎಂ. ಇಬ್ರಾಹಿಂ

|
Google Oneindia Kannada News

ಬೆಂಗಳೂರು, ಡಿ. 14: ಸರ್ಕಾರದ ಸೂಚನೆಯೆ ಮೇರೆಗೆ ನಾಳೆ (ಡಿ.15) ಮತ್ತೆ ವಿಧಾನ ಪರಿಷತ್ ಕಲಾಪ ಸಮಾವೇಶ ಗೊಳ್ಳಲಿದೆ. ಪ್ರಮುಖವಾಗಿ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚಿಸಲು ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಹೀಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನ ಪರಿಷತ್ ಕಲಾಪ ಆರಂಭವಾಗಲಿದೆ.

Recommended Video

ಬೆಂಗಳೂರು: ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾದ ಮೇಲ್ಮನೆ-ಅಕ್ಷರಶಃ ರಣಾಂಗಣವಾಗಿತ್ತು ವಿಧಾನಪರಿಷತ್ | Oneindia Kannada

ಈ ಬಗ್ಗೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು, ನಾಳೆ ಕರೆದಿರುವ ಪರಿಷತ್ ಕಲಾಪವನ್ನು ಕರೆದಿರುವುದೇ ಕಾನೂನು ಬಾಹಿರ ಎಂದಿದ್ದಾರೆ. ಸಂಪುಟದಲ್ಲಿ ನಿರ್ಣಯಿಸಿ ಅದನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ಅದರ ಮೇಲೆ ರಾಜ್ಯಪಾಲರು ಸದನ ಕರೆಯಬೇಕು. ಕಳೆದ 70 ವರ್ಷಗಳ ಇತಿಹಾಸದಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಅವರಿಂದ ಪತ್ರ ಬರೆಯಿಸಿ ನಮ್ಮನ್ನು (ಪರಿಷತ್‌ ಸದಸ್ಯರನ್ನು) ಸದನಕ್ಕೆ ಕರೆದಿರುವುದೇ ಕಾನೂನು ಬಾಹಿರ. ಅದು ಒಪ್ಪುವಂಥದ್ದು ಅಲ್ಲ. ನಾಳೆ ಈ ಬಗ್ಗೆ ಒಂದು ತೀರ್ಮಾನವನ್ನು ನಾವು ಕೈಗೊಳ್ಳುತ್ತೇನೆ ಎಂದರು.

It is illegal for the Legislative council to convene tomorrow CM Ibrahim

ಇನ್ನು ಗೋ ಹತ್ಯೆ ವಿಧೇಯಕದ ಬಗ್ಗೆ ಮಾತನಾಡಿದ ಇಬ್ರಾಹಿಂ ಅವರು, ಗೋ ಹತ್ಯೆ ಮಾಡುವುದು ಬೇಡ ಅಂತಾ ನಾನೇ ಮುಸ್ಲಿಮರಿಗೆ ಹೇಳುತ್ತೇನೆ. ಆದರೆ ಹಸು ಹಾಲು ಕೊಡುವುದನ್ನು ನಿಲ್ಲಿಸಿದರೆ ಅದನ್ನು ಸಾಕುವವರು ಯಾರು? ಜರ್ಸಿ ಹಸು ಗಂಡು ಕರುವನ್ನು ಹಾಕಿದರೆ ಅದನ್ನು 13 ವರ್ಷ ಸಾಕುವವರು ಯಾರು? ಹೀಗಾಗಿ ಈ ವಿಧೇಯಕದ ಬಗ್ಗೆ ರೈತ ಸಂಘದವರೊಂದಿಗೆ ಕುಳಿತು ಸಿಎಂ ಯಡಿಯೂರಪ್ಪ ಅವರು ಮಾತನಾಡಲಿ ಎಂದು ಒತ್ತಾಯಿಸಿದ್ದಾರೆ.

English summary
Opposition parties have already expressed their objection to the BJP move. It is illegal for the council to convene tomorrow CM Ibrahim stated. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X