ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ.ಶಿವಕುಮಾರ್‌ಗೆ ಐಟಿ ಸಂಕಷ್ಟ: ಬೇನಾಮಿ ಆಸ್ತಿ ಜಪ್ತಿ ಶೀಘ್ರ

|
Google Oneindia Kannada News

Recommended Video

ಡಿ.ಕೆ.ಶಿವಕುಮಾರ್‌ಗೆ ಐಟಿ ಸಂಕಷ್ಟ: ಬೇನಾಮಿ ಆಸ್ತಿ ಜಪ್ತಿ ಶೀಘ್ರ..! | Oneindia Kannada

ಬೆಂಗಳೂರು, ಜನವರಿ 08: ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ಸಂಕಷ್ಟ ಮತ್ತೆ ಎದುರಾಗಿದೆ. ಅಕ್ರಮ ಆಸ್ತಿ, ತೆರಿಗೆ ವಂಚನೆ ಸಂಬಂಧ ಸತತವಾಗಿ ವಿಚಾರಣೆಗೆ ಒಳಗಾಗುತ್ತಿರುವ ಡಿ.ಕೆ.ಶಿವಕುಮಾರ್ ಅವರು ಹೊಂದಿದ್ದಾರೆ ಎನ್ನಲಾಗುತ್ತಿರುವ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಆದಾಯ ತೆರಿಗೆ ಇಲಾಖೆಯು ಕೆಲವು ದಿನಗಳಿಂದ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರನ್ನು ಈ ಕುರಿತು ವಿಚಾರಣೆಗೆ ಒಳಪಡಿಸಿದೆ. ಡಿ.ಕೆ.ಶಿವಕುಮಾರ್ ಹಾಗೂ ಕುಟುಂಬಸ್ಥರ ಮೇಲೆ ಬೇನಾಮಿ ಕಾಯ್ದೆಯಡಿ ತನಿಖೆ ಪ್ರಗತಿಯಲ್ಲಿದೆ.

ತಾಯಿ ಗೌರಮ್ಮಗೆ ಐಟಿ ನೋಟಿಸ್, ವಿಚಾರಣೆ ಎದುರಿಸಿದ ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಐಟಿ ನೋಟಿಸ್, ವಿಚಾರಣೆ ಎದುರಿಸಿದ ಡಿಕೆ ಶಿವಕುಮಾರ್

ಡಿ.ಕೆ.ಶಿವಕುಮಾರ್ ಅವರು ಹೊಂದಿದ್ದಾರೆ ಎನ್ನಲಾಗಿರುವ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಲು ಆದಾಯ ತೆರಿಗೆ ಇಲಾಖೆಯು ಪ್ರಕ್ರಿಯೆ ಪ್ರಾರಂಭಿಸಿದೆ. ಜಪ್ತಿಗೆ ಮುನ್ನಾ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಕರ್ನಾಟಕ ಆದಾಯ ತೆರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ತಾಯಿ ಅವರ ವಿಚಾರಣೆ

ಡಿ.ಕೆ.ಶಿವಕುಮಾರ್ ತಾಯಿ ಅವರ ವಿಚಾರಣೆ

ಡಿ.ಕೆ.ಶಿವಕುಮಾರ್ ವಿರುದ್ಧ ಬೇನಾಮಿ ಆಸ್ತಿ ಸೇರಿದಂತೆ ತೆರಿಗೆ ತಪ್ಪಿಸುವ ಆರೋಪವೂ ಇದ್ದು, ಈ ಬಗ್ಗೆಯೂ ತನಿಖೆ ಪ್ರಗತಿಯಲ್ಲಿದೆ. ಕಳೆದ ವಾರವಷ್ಟೆ ಡಿ.ಕೆ.ಶಿವಕುಮಾರ್ ಅವರ ತಾಯಿ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇದರ ಬಗ್ಗೆ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು.

ವರ್ಷಾರಂಭದಲ್ಲೇ, ಬಿಜೆಪಿ ಮುಖಂಡರಿಗೆ ಡಿಕೆಶಿ ಬರೆದ ಬಹಿರಂಗ ಪತ್ರ ವರ್ಷಾರಂಭದಲ್ಲೇ, ಬಿಜೆಪಿ ಮುಖಂಡರಿಗೆ ಡಿಕೆಶಿ ಬರೆದ ಬಹಿರಂಗ ಪತ್ರ

ಎಲ್ಲೆಲ್ಲಿ ಆಸ್ತಿ ಎಂಬ ಬಗ್ಗೆ ಮಾಹಿತಿ ಇಲ್ಲ

ಎಲ್ಲೆಲ್ಲಿ ಆಸ್ತಿ ಎಂಬ ಬಗ್ಗೆ ಮಾಹಿತಿ ಇಲ್ಲ

ಡಿ.ಕೆ.ಶಿವಕುಮಾರ್ ಅವರು ಎಲ್ಲೆಲ್ಲಿ ಮತ್ತು ಯಾವ ರೂಪದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ತಿಳಿಸಲು ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ಬೇನಾಮಿ ಆಸ್ತಿ ಹೊಂದಿರುವ ವಿಷಯವನ್ನು ಅವರು ಸ್ಪಷ್ಟಪಡಿಸಿದ್ದಾರೆ. ಹಾಗೂ ಅದನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿರುವಾಗಿಯೂ ಹೇಳಿದ್ದಾರೆ.

ಎಸ್ ಎಂ ಕೃಷ್ಣ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇಕೆ? ಎಸ್ ಎಂ ಕೃಷ್ಣ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇಕೆ?

ಕಳೆದ ವರ್ಷ ನಡೆದಿದ್ದ ದಾಳಿ

ಕಳೆದ ವರ್ಷ ನಡೆದಿದ್ದ ದಾಳಿ

ಕಳೆದ ವರ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಶಾಸಕರ ಖರೀದಿ ತಪ್ಪಿಸಲೆಂದು ಗುಜರಾತ್‌ ಕಾಂಗ್ರೆಸ್‌ ಶಾಸಕರಿಗೆ ಡಿ.ಕೆ.ಶಿವಕುಮಾರ್ ಆಶ್ರಯ ನೀಡಿದ್ದ ವೇಳೆಯೇ ಈ ದಾಳಿ ನಡೆದಿತ್ತು.

840 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್‌

840 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್‌

ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ ಪ್ರಕಾರ 840 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ ಸರ್ಕಾರದಲ್ಲಿ ಜಲಸಂಪನ್ಮೂಲ ಹಾಗೂ ಉನ್ನತ ವೈದ್ಯಕೀಯ ಶಿಕ್ಷಣ ಸಚಿವರು ಆಗಿದ್ದಾರೆ.

English summary
Karnataka minister DK Shivakumar's property may seieze by IT department soon says IT officer. IT raided on DK Shivakumar last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X