ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾರ್ದನ ರೆಡ್ಡಿ ವಿರುದ್ಧ ಐಟಿಯಿಂದ ಮತ್ತೊಂದು ಪ್ರಕರಣ

|
Google Oneindia Kannada News

Recommended Video

ರೆಡ್ಡಿ ವಿರುದ್ಧ ಸೆಕ್ಷನ್ 276 ಸಿ ಅಡಿ ಪ್ರಕರಣ ದಾಖಲು | Oneindia Kannada

ಬೆಂಗಳೂರು, ನವೆಂಬರ್ 15: ಮೆ.ಎನ್ನೋಬರ್ ಕನ್‌ಸ್ಟ್ರಕ್ಷನ್ ಕಂಪೆನಿಯ ಪಾಲುದಾರಿಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದೆ.

2007ರಲ್ಲಿ ನಡೆದಿದ್ದ ಆದಾಯ ತೆರಿಗೆ ದಾಳಿ ವೇಳೆ 2005-06ರಲ್ಲಿ ಮೆ.ಎನ್ನೋಬಲ್ ಕನ್‌ಸ್ಟ್ರಕ್ಷನ್ ಮೂಲಕ ಹೈದರಾಬಾದ್‌ನ ಲಿಲ್ಲಿಪುರದಲ್ಲಿ 21.80 ಕೋಟಿ ರೂ.ಮೌಲ್ಯದ ಜಮೀನು ಖರೀದಿಸಲಾಗಿತ್ತು. ಆದರೆ, ಅದರ ಆಸ್ತಿ ಮೌಲ್ಯವನ್ನು ಸೇಲ್ ಡೀಲ್‌ನಲ್ಲಿ 3.05 ಕೋಟಿ ರೂ ಎಂದಷ್ಟೇ ತೋರಿಸುವ ಮೂಲಕ ಆದಾಯ ತೆರಿಗೆ ಇಲಾಖೆಗೆ 18.75 ಕೋಟಿ ರೂ ಕುರಿತು ಮಾಹಿತಿ ನೀಡಿರಲಿಲ್ಲ.

ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

ಇದರ ತೆರಿಗೆ ವಂಚನೆ ಆರೋಪದಲ್ಲಿ ಜನಾರ್ದನ ರೆಡ್ಡಿ ಮತ್ತು ಎನ್ನೋಬಲ್‌ನ ನಾಲ್ವರು ಪಾಲುದಾರರ ವಿರುದ್ಧ ಆದಾಯ ತೆರಿಗೆ ಇಲಾಖೆ ಖಾಸಗಿ ದೂರು ಸಲ್ಲಿಸಿದ್ದು, ಸೆಕ್ಷನ್ 276 ಸಿ ಅಡಿ ಪ್ರಕರಣ ದಾಖಲಿಸಲಾಗಿದೆ.

IT Case Against Janardhana Reddy For Tax Evasion

ಜನಾರ್ದನ ರೆಡ್ಡಿ ಜಾಮೀನಿಗೆ 40 ಕೋಟಿ ಆಮಿಷ; ಸಿಬಿಐ ಮಾಜಿ ಜಡ್ಜ್ ಸಾಕ್ಷ್ಯ ಜನಾರ್ದನ ರೆಡ್ಡಿ ಜಾಮೀನಿಗೆ 40 ಕೋಟಿ ಆಮಿಷ; ಸಿಬಿಐ ಮಾಜಿ ಜಡ್ಜ್ ಸಾಕ್ಷ್ಯ

ಈ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ದಾಖಲಿಸಲಾಗಿದೆ. ಡಿ.3ರಂದು ಪ್ರಕರಣವು ವಿಚಾರಣೆಗೆ ಬರಲಿದೆ. ಜನಾರ್ದನ ರೆಡ್ಡಿ ಗಣಿ ಉದ್ಯಮಕ್ಕೆ ಬರುವ ಮುನ್ನ ಎನ್ನೋಬಲ್ ಫೈನಾನ್ಸ್ ಎಂಬ ಸಂಸ್ಥೆ ನಡೆಸುತ್ತಿದ್ದರು.

English summary
IT has filed a case against Ex minister Janardhana Reddy and others on a tax evasion in purchasing an asset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X