ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವಸಹಿತ ಗಗನಯಾನ ಯೋಜನೆ: ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 7: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಮಾನವ ಸಹಿತ ಗಗನಯಾತ್ರೆ ಯೋಜನೆಯನ್ನು 2022ರಲ್ಲಿ ನಡೆಸಲಿದೆ.

ಗಗನಯಾನಕ್ಕೆ ತೆರಳುವ ವಾಹನದ ಮಾದರಿಯನ್ನು ಇಸ್ರೋ ಬೆಂಗಳೂರಿನಲ್ಲಿ ನಡೆದ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ.

ವರ್ಷದಿಂದ ವರ್ಷಕ್ಕೆ ಇಸ್ರೋ ಹೊಸ ಹಂತಕ್ಕೆ ತಲುಪುತ್ತಿದ್ದು, ಜಾಗತಿಕ ಮಟ್ಟದಲ್ಲಿನ ತನ್ನ ಐತಿಹಾಸಿಕ ಸಾಧನೆಗಳು ಮತ್ತು ಯೋಜನೆಗಳಿಂದ ಗಮನ ಸೆಳೆದಿದೆ.

ಮಹತ್ವದ ಯೋಜನೆಗೆ ಇಸ್ರೋ ಸಜ್ಜು: ಉತ್ತರ ಧ್ರುವದಲ್ಲಿ ಉಪಗ್ರಹ ನಿಲ್ದಾಣಮಹತ್ವದ ಯೋಜನೆಗೆ ಇಸ್ರೋ ಸಜ್ಜು: ಉತ್ತರ ಧ್ರುವದಲ್ಲಿ ಉಪಗ್ರಹ ನಿಲ್ದಾಣ

ಇಸ್ರೋ ಈಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸುತ್ತಿದ್ದು, ಆರ್ಬಿಟಲ್ ಮಾಡೆಲ್ ಎಂಬ ಗಗನಯಾನ ವ್ಯವಸ್ಥೆ ಮಾದರಿಯೊಂದಿಗೆ 2021ರ ಅಂತ್ಯ ಅಥವಾ 2022ರ ಆರಂಭದಲ್ಲಿ ತನ್ನ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಿದೆ.

ಮೂವರು ಯಾತ್ರಿಗಳು

ಮೂವರು ಯಾತ್ರಿಗಳು

ಮಾನವ ಸಹಿತ ಗಗನಯಾತ್ರೆ ಯೋಜನೆಗೆ ಮೂವರು ಗಗನಯಾತ್ರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಭಾರತೀಯ ವಾಯುಸೇನೆ ಗಗನಯಾತ್ರಿಗಳನ್ನು ಆಯ್ಕೆ ಮಾಡಲಿದೆ. ಈ ಪ್ರಕ್ರಿಯೆಗೆ ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಅವರ ನೆರವು ಪಡೆದುಕೊಳ್ಳಲು ಇಸ್ರೋ ನಿರ್ಧರಿಸಿದೆ.

ಚಂದ್ರಯಾನ-2 ಉಡಾವಣೆಗೆ ಇನ್ನು ನಾಲ್ಕೇ ತಿಂಗಳು ಬಾಕಿಚಂದ್ರಯಾನ-2 ಉಡಾವಣೆಗೆ ಇನ್ನು ನಾಲ್ಕೇ ತಿಂಗಳು ಬಾಕಿ

2-3 ವರ್ಷ ತರಬೇತಿ

2-3 ವರ್ಷ ತರಬೇತಿ

ಗಗನಯಾತ್ರಿಗಳನ್ನು ಆಯ್ಕೆ ಮಾಡಿದ ಬಳಿಕ ಅವರಿಗೆ 2-3 ವರ್ಷ ತರಬೇತಿ ನೀಡಬೇಕಾಗಲಿದೆ. ಕೆಲವು ತರಬೇತಿಗಳನ್ನು ಭಾರತದಲ್ಲಿಯೇ ನೀಡಿದರೆ, ಇನ್ನು ಕೆಲವು ತರಬೇತಿಗಳನ್ನು ವಿದೇಶದಲ್ಲಿ ಪಡೆದುಕೊಳ್ಳಬೇಕಾಗಲಿದೆ.

ತರಬೇತಿಗಾಗಿ ರಷ್ಯಾ, ಅಮೆರಿಕ, ಜರ್ಮನಿ ಮತ್ತು ಇತರೆ ದೇಶಗಳನ್ನು ಆಯ್ಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದು, ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.

ಚಂದ್ರನಲ್ಲಿ ಮಂಜುಗಡ್ಡೆ: ದೃಢಪಡಿಸಿದ ಇಸ್ರೋದ ಚಂದ್ರಯಾನ ನೌಕೆ

ಇನ್ನೂ ಮೂವರಿಗೆ ತರಬೇತಿ

ಇನ್ನೂ ಮೂವರಿಗೆ ತರಬೇತಿ

ಗಗನಯಾನ ಯೋಜನೆ ಪೂರ್ಣರೂಪ ಪಡೆದುಕೊಳ್ಳಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೊದಲು ಮೂವರನ್ನು ಗಗನಯಾತ್ರೆಗೆ ಆಯ್ಕೆ ಮಾಡಿದ್ದರೂ, ತುರ್ತು ಸಂದರ್ಭಗಳಲ್ಲಿ ನೆರವಾಗಲು ಹೆಚ್ಚುವರಿಯಾಗಿ ಮೂವರನ್ನು ಆಯ್ಕೆ ಮಾಡಿ ಅವರಿಗೂ ತರಬೇತಿ ನೀಡಲಾಗುವುದು.

ಒಂದು ಸಾವಿರ ಕೋಟಿ ವೆಚ್ಚ

ಒಂದು ಸಾವಿರ ಕೋಟಿ ವೆಚ್ಚ

ಗಗನಯಾನ ನೌಕೆಯನ್ನು ಗರಿಷ್ಠ 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಸುತ್ತಾಡಿಸಲು ಅನುಕೂಲವಾಗುವಂತೆ ನೌಕೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ಈ ಯೋಜನೆಗೆ ಒಂದು ಸಾವಿರ ಕೋಟಿ ರೂ. ತಗುಲುತ್ತದೆ. ಮಾರ್ಕ್ 3 ರಾಕೆಟ್ ಮೂಲಕ ಈ ನೌಕೆಯನ್ನು ಉಡಾವಣೆ ಮಾಡಲು ಚಿಂತನೆ ನಡೆಸಲಾಗಿದೆ.

ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಅಥವಾ ದೇಶದ ಯಾವುದೇ ಭೂಭಾಗದಲ್ಲಿ ನೌಕೆಯನ್ನು ಇಳಿಸಬಹುದು ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

ವಿವಿಧ ಸೌಲಭ್ಯಗಳು

ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಗಗನಯಾನ ವ್ಯವಸ್ಥೆ ಯೋಜನೆಗೆ ಇಸ್ರೋ ಕೆಲವು ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ರೀ ಎಂಟ್ರಿ ಮೆಷಿನ್ ಸಾಮರ್ಥ್ಯ, ಮನುಷ್ಯರು ಕೂರುವ ವ್ಯವಸ್ಥೆ, ಅಣು ಸುರಕ್ಷತಾ ವ್ಯವಸ್ಥೆ, ಬಾಹ್ಯಾಕಾಶಕ್ಕೆ ಹೊಂದಿಕೆಯಾಗುವ ಉಡುಪುಗಳು ಒಳಗೊಂಡಿವೆ.

ಗಗನಯಾನ ಉಡುಗೆ

ಗಗನಯಾನ ಉಡುಗೆ

ಜಗತ್ತಿಗೆ ತನ್ನ ಸಾಧನೆಯನ್ನು ತೋರಿಸುವ ಉದ್ದೇಶದಿಂದ ಇಸ್ರೋ, ತಿರುವನಂತಪುರದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಎರಡು ವರ್ಷಗಳ ಹಿಂದೆ ತಯಾರಿಸಿದ ಬಾಹ್ಯಾಕಾಶ ಉಡುಗೆಯನ್ನು ಆರನೇ ಬೆಂಗಳೂರು ಬಾಹ್ಯಾಕಾಶ ಪ್ರದರ್ಶನದಲ್ಲಿ ಪ್ರದರ್ಶಿಸಿದೆ.

ಇಸ್ರೋದ ಸ್ಪೇಸ್ ಸೂಟ್ 60 ನಿಮಿಷಕ್ಕೆ ಸಾಲುವಷ್ಟು ಒಂದು ಆಕ್ಸಿಜನ್ ಸಿಲಿಂಡರ್ಅನ್ನು ಕೂಡ ಒಳಗೊಂಡಿರುತ್ತದೆ. ಇಸ್ರೋ ಎರಡು ಸ್ಪೇಸ್‌ ಸೂಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇನ್ನೊಂದು ಸೂಟ್‌ಅನ್ನು 2022ರಲ್ಲಿ ಮಾನಸ ಸಹಿತ ಗಗನಯಾನ ಯೋಜನೆ ಚಾಲನೆ ಪಡೆಯುವ ಮುನ್ನವೇ ಸಿದ್ಧಗೊಳಿಸಲಾಗುವುದು.

ಇಸ್ರೋ ಪ್ರದರ್ಶನ

ಭೂಮಿಯ ಮೇಲ್ಮೈನಿಂದ 400 ಕಿ.ಮೀ. ದೂರದ ಕಕ್ಷೆಯಲ್ಲಿ ಐದರಿಂದ ಏಳು ದಿನ ಮೂವರು ಗಗನಯಾತ್ರಿಗಳು ಪ್ರಯಾಣಿಸುವ ನೌಕೆಯ ಮಾದರಿಯನ್ನು ಕೂಡ ಇಸ್ರೋ ಪ್ರದರ್ಶಿಸಿದೆ.

ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವ ಸಂದರ್ಭದಲ್ಲಿ ಬೆಂಕಿಯ ಚೆಂಡಿನಂತೆ ಬದಲಾಗುವ ಥರ್ಮಲ್ ಶೀಲ್ಡ್‌ಅನ್ನು ಈ ನೌಕೆ ಒಳಗೊಂಡಿರುತ್ತದೆ.

25 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ

25 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ

ನೌಕೆಯ ಅಣು ಕವಚವು ಒಳಭಾಗದ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ ಇರುವಂತೆ ಕಾಪಾಡಿಕೊಳ್ಳುತ್ತದೆ. ಭೂಮಿಯ ವಾತಾವರಣದೊಳಗೆ ಗಗನಯಾನ ನೌಕೆ ಮರುಪ್ರವೇಶಿಸಿದಾಗ ಅದರ ಗಾಜಿನ ಮೂಲಕ ಗಗನಯಾತ್ರಿಗಳು ಜ್ವಾಲೆಯನ್ನು ವೀಕ್ಷಿಸಬಹುದಾಗಿದೆ. ಈ ನೌಕೆಯು ಭೂಮಿಯನ್ನು ಪ್ರತಿ 90 ನಿಮಿಷಕ್ಕೊಮ್ಮೆ ಸುತ್ತಲಿದೆ. ಗಗನಯಾತ್ರಿಗಳು ಬಾಹ್ಯಾಕಾಶದಿಂದಲೇ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳನ್ನು ಕಾಣಬಲ್ಲರು.

ಎರಡು ಮಾನವರಹಿತ ನೌಕೆ

ಎರಡು ಮಾನವರಹಿತ ನೌಕೆ

2020ರ ಡಿಸೆಂಬರ್ ಮತ್ತು 2021ರ ಜೂನ್‌ನಲ್ಲಿ ಎರಡು ಮಾನವ ರಹಿತ ಗಗನನೌಕೆಗಳನ್ನು ಕೂಡ ಇಸ್ರೋ ಉಡಾವಣೆ ಮಾಡಲಿದೆ. ಮಾನವ ಸಹಿತ ಗಗನಯಾನದಂತೆಯೇ ಮಾನವ ರಹಿತ ನೌಕೆಗಳೂ ಮಹತ್ವದ ಪಾತ್ರವಹಿಸಲಿವೆ ಎಂದು ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ತಿಳಿಸಿದ್ದಾರೆ.

English summary
ISRO will launch its first ever manned space mission, Gaganayaan in 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X