ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಚಂದ್ರಯಾನ-2 ಮಾರ್ಚ್‌ನಲ್ಲಿ ಉಡಾವಣೆ: ಕೆ. ಶಿವನ್

|
Google Oneindia Kannada News

ಬೆಂಗಳೂರು, ಜನವರಿ 11: ಚಂದಿರನ ಅಂಗಳಕ್ಕೆ ತಲುಪುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯು ಈ ವರ್ಷದ ಮಾರ್ಚ್ 25 ರಿಂದ ಏಪ್ರಿಲ್ ಅಂತ್ಯದ ಒಳಗೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಚಂದ್ರಯಾನ-2 ಉಡಾವಣೆಯನ್ನು ಜನವರಿಯಿಂದ ಫೆಬ್ರುವರಿ ಅವಧಿಯಲ್ಲಿ ನಡೆಸಲು ಗುರಿ ಹೊಂದಲಾಗಿತ್ತು. ಆದರೆಮ ಕೆಲವು ಪರೀಕ್ಷೆಗಳು ಪೂರ್ಣಗೊಳ್ಳದ ಕಾರಣ ಮುಂದೂಡಲಾಗಿದೆ ಎಂದಯ ಹೇಳಿದ್ದಾರೆ.

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆ

ಚಂದ್ರನ ದಕ್ಷಿಣ ಧ್ರುವದ ಸಮೀಪ ತೆರಳುವ ಜಗತ್ತಿನ ಮೊದಲ ಯೋಜನೆ ಇದಾಗಿದೆ.

ISRO chairman K Sivan Chandrayan 2 mission will be launched between march 25 to april end

ಕಳೆದ ವರ್ಷ ಇಸ್ರೋ 17 ಯೋಜನೆಗಳ ಪೈಕಿ 16ಅನ್ನು ಯಶಸ್ವಿಯಾಗಿ ನಿಭಾಯಿಸಿದೆ. ಅತ್ಯಂತ ತೂಕದ ಜಿಸ್ಯಾಟ್ 29 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. 154ರಲ್ಲಿ 94 ಪ್ರಮುಖ ಯೋಜನೆಗಳು ಪೂರ್ಣಗೊಂಡಿವೆ.

ಒಟ್ಟು 30 ಸಾವಿರ ಕೋಟಿ ರೂ ಇಸ್ರೋ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ಹತ್ತು ಸಾವಿರ ಕೋಟಿ ರೂ.ಅನ್ನು ಗಗನಯಾನ ಯೋಜನೆಗೆ ಮೀಸಲಿಡಲಾಗಿದೆ ಎಂದಿದ್ದಾರೆ.

ಮೀನುಗಾರರು ನಾಪತ್ತೆ ಪ್ರಕರಣ: ಇಸ್ರೋ ಸಹಾಯಕ್ಕೆ ಯಾಚನೆಮೀನುಗಾರರು ನಾಪತ್ತೆ ಪ್ರಕರಣ: ಇಸ್ರೋ ಸಹಾಯಕ್ಕೆ ಯಾಚನೆ

ಮುಂದಿನ ಎರಡು ವರ್ಷ ಹಣ ವಿನಿಯೋಗ ಮಾಡಿದರೆ ನಾವು ಈ ಕ್ಷೇತ್ರದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿ ಮಾಡಬಹುದು ಎಂದು ತಿಳಿಸಿದ್ದಾರೆ.

 ಬಾಹ್ಯಾಕಾಶದಲ್ಲಿ ಒಂದು ವಾರ ಕಳೆಯಲಿದ್ದಾರೆ ಮೂವರು ಭಾರತೀಯರು ಬಾಹ್ಯಾಕಾಶದಲ್ಲಿ ಒಂದು ವಾರ ಕಳೆಯಲಿದ್ದಾರೆ ಮೂವರು ಭಾರತೀಯರು

ಇಸ್ರೋ ಟಿವಿಯ ಪ್ರಾಥಮಿಕ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಈ ಟಿವಿಯನ್ನು ಪ್ರಸಕ್ತ ವರ್ಷವೇ ಆರಂಭಿಸುವ ಯೋಜನೆ ನಡೆಸಲಾಗಿದೆ ಎಂದಿದ್ದಾರೆ.

English summary
ISRO is planning to launch India's second lunar mission Chandrayaan-2 between March 25 to April end, ISRO Chairman K Sivan said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X