ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್ ವಶದಿಂದ ಇಬ್ಬರು ಕನ್ನಡಿಗರ ರಕ್ಷಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 1 : ಐಎಸ್‌ಐಎಸ್ ಉಗ್ರರು ಅಪಹರಣ ಮಾಡಿದ್ದ ಭಾರತೀಯ ಪೈಕಿ ಇಬ್ಬರು ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಇಬ್ಬರು ಉಗ್ರರ ವಶದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕೋಲಾರದ ವಿಜಯ್‍ ಕುಮಾರ್ ಮತ್ತು ರಾಯಚೂರಿನ ಲಕ್ಷ್ಮೀಕಾಂತ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವಿಟ್ಟರ್‍ನಲ್ಲಿ ಮಾಹಿತಿ ನೀಡಿದ್ದಾರೆ. ನಾಲ್ವರು ಭಾರತೀಯರನ್ನು ಉಗ್ರರು ಶುಕ್ರವಾರ ಅಪಹರಣ ಮಾಡಿದ್ದರು. [ನಾಲ್ವರು ಭಾರತೀಯರ ಅಪಹರಣ]

libya

ಕರ್ನಾಟಕ ಮೂಲದ ಇಬ್ಬರು ಹಾಗೂ ಆಂಧ್ರಪ್ರದೇಶದ ಇಬ್ಬರು ಸೇರಿದಂತೆ ನಾಲ್ವರು ಭಾರತೀಯರನ್ನು ಲಿಬಿಯಾದಲ್ಲಿ ಶುಕ್ರವಾರ ಅಪಹರಣ ಮಾಡಲಾಗಿತ್ತು. ಆಂಧ್ರ ಪ್ರದೇಶದ ಬಲರಾಮ್, ಗೋಪಿ ಅವರನ್ನು ಬಿಡುಗಡೆಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. [ISIS ಸೇರಿದ್ದ ಕರ್ನಾಟಕದ ಮೂವರ ಸಾವು?]

ಐಎಸ್‌ಐಎಸ್ ಉಗ್ರರು ಅಪಹರಣ ಮಾಡಿದವರನ್ನು ಬಿಡುಗಡೆ ಮಾಡಲು ಯಾವುದೇ ಬೇಡಿಕೆ ಇಟ್ಟಿಲ್ಲ. ಲಿಬಿಯಾದಲ್ಲಿ ಐಎಸ್‌ಐಎಸ್ ಪ್ರಬಲ್ಯ ಹೆಚ್ಚಾಗುತ್ತಿದ್ದಂತೆ ಇಂತಹ ಅಪಹರಣಗಳು ನಿರಂತರವಾಗಿ ನಡೆಯುತ್ತಿವೆ. ಲಿಬಿಯಾದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರ ಸ್ವರೂಪ ಪಡೆದುಕೊಂಡರೆ ದೇಶವನ್ನು ತೊರೆಯುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚಿಸಿದೆ.

39 ಜನರ ಕಥೆ ಏನು? : ಅಂದಹಾಗೆ ಐಎಸ್‌ಐಎಸ್ ಉಗ್ರರು ಇರಾಕ್‌ನಲ್ಲಿ 39 ಭಾರತೀಯರನ್ನು ಅಪಹರಿಸಿದ್ದರು. ಆದರೆ, ಇದುವರೆಗೆ ಅವರ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳುತ್ತಿದೆ. ಇದು ಬಿಟ್ಟರೆ ಬೇರೆ ಯಾವುದೇ ಮಾಹಿತಿಗಳು ಸಿಗುತ್ತಿಲ್ಲ.

English summary
ISIS terrorists released two Indians. Karnataka based Lakshmikanth and Vijay Kumar released. Two others are still being held hostage and are expected to be released soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X