ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರದ ಅಬ್ದುಲ್ ಐಎಸ್‌ಐಎಸ್ ಸೇರಿಲ್ಲ, ಸೌದಿಯಲ್ಲಿದ್ದಾನೆ

By ವಿಕಾಸ್ ನಂಜಪ್ಪ
|
Google Oneindia Kannada News

ಬಿಜಾಪುರ, ಡಿಸೆಂಬರ್ 02 : ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿದ್ದ ಕರ್ನಾಟಕ ಮೂಲದ ಅಬ್ದುಲ್ ಖುದ್ದೂಸ್ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿತ್ತು. ಪೊಲೀಸರು ಖುದ್ದೂಸ್ ಮನೆಗೆ ಭೇಟಿ ನೀಡಿದಾಗ ಆತ ಬದುಕಿರುವ ಮತ್ತು ಸೌದಿ ಅರೆಬೀಯಾದಲ್ಲಿ ಕೆಲಸ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ.

ಕರ್ನಾಟಕ ಮೂಲದ ಫಯಾಜ್ ಮೊಹಮದ್, ಅಬ್ದುಲ್ ಖುದ್ದೂಸ್ ಮತ್ತು ಉಮರ್ ಸುಭಾನ್ ಎಂಬುವವರು ಐಎಸ್ಐಎಸ್ ಸೇರಿದ್ದಾರೆ. ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿತ್ತು. ಬಿಜಾಪುರದ ಖುದ್ದೂಸ್ ಹೆಸರನ್ನು ಮೃತಪಟ್ಟವರ ಪಟ್ಟಿಗೆ ಸೇರಿಸಲಾಗಿತ್ತು. [ISIS ಸೇರಿದ್ದ ಮೂವರ ಸಾವು?]

isis

ಈ ಪಟ್ಟಿ ಹಿಡಿದು ಪೊಲೀಸರು ಅಬ್ದುಲ್ ಖುದ್ದೂಸ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡಲು ಮುಂದಾಗಿದ್ದಾರೆ. ಆಗ ಖುದ್ದೂಸ್ ಕುಟುಂಬದವರು ಆತ ಬದುಕಿದ್ದಾನೆ ಸೌದಿ ಅರೇಬಿಯಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ. [ಐಸಿಸ್‌ ಸರ್ವನಾಶಕ್ಕೆ ಪಣತೊಟ್ಟ ವೀರ ಯೋಧ ಅಬು]

ಪೊಲೀಸರು ಖುದ್ದೂಸ್‌ಗೆ ಕರೆ ಮಾಡುವಂತೆ ಕುಟುಂಬದವರಿಗೆ ಸೂಚನೆ ನೀಡಿದ್ದಾರೆ. ಅವರು ಕರೆ ಮಾಡಿದಾಗ ವಿಡಿಯೋ ಚಾಟ್ ಮೂಲಕ ಆತ ಪೊಲೀಸರ ಸಮ್ಮುಖದಲ್ಲಿಯೇ ಕುಟುಂಬದವರ ಜೊತೆ ಮಾತುಕತೆ ನಡೆಸಿದ್ದಾನೆ. ಈ ಬೆಳವಣಿಗೆ ಬಗ್ಗೆ ತಕ್ಷಣ ಪೊಲೀಸರು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]

ಭಾರತದಿಂದ ಸಿರಿಯಾಕ್ಕೆ ತೆರಳಿ ಐಎಸ್‌ಐಎಸ್ ಸೇರಿರಬಹುದು ಎಂದು ತಯಾರಿಸಿರುವ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆ ಸಿದ್ಧಪಡಿಸಿರುವ ಪಟ್ಟಿಯ ಪ್ರಕಾರ ಕರ್ನಾಟಕ 6 ಜನರು ಐಎಸ್ಐಎಸ್ ಸಂಘಟನೆ ಸೇರಿದ್ದಾರೆ ಎಂದು ಶಂಕಿಸಲಾಗಿದೆ.

ಅಬ್ದುಲ್ ಖುದ್ದೂಸ್ ಸೇರಿದಂತೆ ಮೂವರು ಯುದ್ಧದ ಸಂದರ್ಭದಲ್ಲಿ ಸಿರಿಯಾದಲ್ಲಿ ಮೃತಪಟ್ಟಿದ್ದರು ಎಂದು ಪಟ್ಟಿ ಮಾಡಲಾಗಿತ್ತು. ಆದರೆ, ಈಗ ಖುದ್ದೂಸ್ ಜೀವಂತವಾಗಿರುವುದು ಖಚಿತವಾದ ಕಾರಣ, ಆತನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

English summary
In a peculiar case the police were forced to remove the name of a person from Karnataka who was earlier proclaimed dead. This is the case relating to Bijapur resident Abdul Khuddus whose name figured in the list of ISIS recruits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X