ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳದ ಅಹ್ಮದ್‌ಗೆ ಐಎಸ್ಐಎಸ್ ನಂಟಿಲ್ಲ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 07 : ಐಎಸ್‌ಐಎಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದ್ದ ಭಟ್ಕಳ ಮೂಲದ ರಾವೂಫ್ ಅಹ್ಮದ್‌ನನ್ನು ಬಿಡುಗಡೆ ಮಾಡಲಾಗಿದೆ. ಅಹ್ಮದ್ ಸಂಘಟನೆ ಜೊತೆ ನಂಟು ಹೊಂದಿರುವ ಕುರಿತು ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.

ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ತಂಡ ಎರಡು ದಿನಗಳ ಹಿಂದೆ ಪುಣೆ ವಿಮಾನ ನಿಲ್ದಾಣದಲ್ಲಿ ಅಹ್ಮದ್‌ನನ್ನು ವಶಕ್ಕೆ ಪಡೆದಿತ್ತು. ದುಬೈಗೆ ತೆರಳು ಸಜ್ಜಾಗಿದ್ದ ಅಹ್ಮದ್‌ನನ್ನು ವಶಕ್ಕೆ ಪಡೆದು, ಮುಂಬೈಗೆ ಕರೆತಂದು ವಿಚಾರಣೆ ನಡೆಸಲಾಯಿತು. ವಿಚಾರಣೆ ನಂತರ ಬಿಡುಗಡೆ ಮಾಡಲಾಗಿದೆ. [ಪುಣೆಯಲ್ಲಿ ಭಟ್ಕಳದ ಯುವಕ ವಶಕ್ಕೆ]

isis

ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ತಂಡ ರಾವೂಫ್ ಅಹ್ಮದ್‌ ವಿಚಾರಣೆ ನಡೆಸಿ ಬಿಡುಗಡೆ ಮಾಡಿವೆ. ರಾವೂಫ್ ಅಹ್ಮದ್‌ ಐಎಸ್‌ಐಎಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿರುವ ಕುರಿತು ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ['ನಮಗೆ ಭಾರತದ ಸಂವಿಧಾನದ ಮೇಲೆ ಗೌರವವಿಲ್ಲ']

ಮೊಬೈಲ್ ಶಾಪ್ ಇಟ್ಟುಕೊಂಡಿದ್ದ : ವಿಚಾರಣೆ ವೇಳೆ ರಾವೂಫ್ ಅಹ್ಮದ್‌ ಭಟ್ಕಳದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಎಂಬುದು ತಿಳಿದುಬಂದಿದೆ. ದುಬೈನಲ್ಲಿ ಕೆಲಸ ಸಿಕ್ಕಿದ ಕಾರಣ, ದುಬೈಗೆ ಹೊರಟಿದ್ದ. ಆಗ ಪುಣೆ ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. [ಕಲಬುರಗಿಯ ಸಿರಾಜುದ್ದೀನ್ ತನಿಖೆ NIA]

ವಿಚಾರಣೆ ವೇಳೆ ರಾವೂಫ್ ಅಹ್ಮದ್‌ ಮೊಹಮದ್ ಶಫಿ ಅರ್ಮರ್ ಭಟ್ಕಳದವನಾಗಿದ್ದರಿಂದ ನನಗೆ ತಿಳಿದಿತ್ತು. ಆದರೆ, ಆತನ ಪರಿಚಯವಿರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

English summary
A joint investigation conducted by the National Investigation Agency and the Intelligence Bureau has found no evidence against Abdul Rauf Musa who was detained in Pune for alleged links with the ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X