ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಐಎಸ್‌ಐಎಸ್ ಚಟುವಟಿಕೆ; ಎನ್‌ಐಎ ಚಾರ್ಜ್ ಶೀಟ್

|
Google Oneindia Kannada News

ಬೆಂಗಳೂರು, ಜುಲೈ 13 : ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಐಎಸ್‌ಐಎಸ್ ಉಗ್ರ ಸಂಘಟನೆಯ ಚಟುವಟಿಕೆ ಕುರಿತು ಎನ್‌ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪ್ರಕರಣದ ತನಿಖೆ ಕೈಗೊಂಡಿದ್ದ ಎನ್‌ಐಎ 17 ಆರೋಪಿಗಳನ್ನು ಉಲ್ಲೇಖಿಸಿದೆ.

ಬೆಂಗಳೂರಿನ ಸಿಸಿಬಿ ಪೊಲೀಸರು ಸದ್ದುಗುಂಟೆಪಾಳ್ಯದಲ್ಲಿ ಮೆಹಬೂಬ್ ಪಾಷ ಎಂಬಾತನನ್ನು ಬಂಧಿಸಿದ್ದರು. ಶಂಕಿತ ಉಗ್ರನನ್ನು ಬಂಧಿಸಿದಾಗ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಐಎಸ್‌ಐಎಸ್ ಚಟುವಟಿಕೆ ವಿಸ್ತರಣೆ ಮಾಡಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು.

12 ಮಂದಿ ಐಎಸ್‌ಐಎಸ್ ಶಂಕಿತ ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ 12 ಮಂದಿ ಐಎಸ್‌ಐಎಸ್ ಶಂಕಿತ ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಎನ್‌ಐಎ ಈ ಪ್ರಕರಣ ತನಿಖೆಯನ್ನು ಕೈಗೊಂಡಿತ್ತು. ಸೋಮವಾರ ಈ ಕುರಿತು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, 17 ಆರೋಪಿಗಳನ್ನು ಇದರಲ್ಲಿ ಉಲ್ಲೇಖ ಮಾಡಿದೆ. ಮೆಹಬೂಬ್ ಪಾಷ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಎಂದು ತಿಳಿಸಲಾಗಿದೆ.

ಉ.ಪ್ರ, ಪಶ್ಚಿಮ ಬಂಗಾಳದಲ್ಲಿ ಐಎಸ್‌ಐಎಸ್ ಉಗ್ರರ ಸಂಚಾರ ಉ.ಪ್ರ, ಪಶ್ಚಿಮ ಬಂಗಾಳದಲ್ಲಿ ಐಎಸ್‌ಐಎಸ್ ಉಗ್ರರ ಸಂಚಾರ

ISIS Activities In Karnataka Tamil Nadu NIA Files Charge Sheet

'ಬೆಂಗಳೂರು ಜಿಹಾದಿ ಗ್ಯಾಂಗ್' ಹೆಸರಿನಲ್ಲಿ ಇವರು ರಾಜ್ಯದಲ್ಲಿ ಐಎಸ್‌ಐಎಸ್ ಉಗ್ರ ಸಂಘಟನೆ ಚಟುವಟಿಕೆ ವಿಸ್ತರಣೆ ಮಾಡಲು ಸಂಚು ರೂಪಿಸಿದ್ದರು. ಈ ಸಂಘಟನೆಗಳಿಗೆ ಯುವಕರನ್ನು ಸೆಳೆಯುವುದು ಮೆಹಬೂಬ್ ಪಾಷ ಕೆಲಸವಾಗಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಈತ ಮಾಸ್ಟರ್ ಮೈಂಡ್ ಆಗಿದ್ದ.

English summary
NIA filed charge-sheet against 17 accused who are the conspirators and formed a terror group initiated by ISIS terrorists Mehboob Pasha of Bengaluru. They were trying to expand ISIS activities in India especially in Karnataka and Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X