ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಮ್‌ಡೆಸಿವಿರ್ ಜೀವ ಉಳಿಸುವ ಚುಚ್ಚುಮದ್ದಾ? ಓವರ್ ಟು ಡಾ.ಆಂಜನಪ್ಪ

|
Google Oneindia Kannada News

ಕಿಮ್ಸ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಆಗಿದ್ದ, ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಮಾಡಿರುವ ನಾಡಿನ ಖ್ಯಾತ ವೈದ್ಯರಾದ ಡಾ.ಆಂಜನಪ್ಪ ಅವರು ರೆಮ್‌ಡೆಸಿವಿರ್ ಇಂಜಕ್ಷನ್ ಜೀವ ಉಳಿಸುತ್ತಾ ಎನ್ನುವುದರ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

ಕೋವಿಡ್ ವಾರಿಯರ್ ಆಗಿ, ಕಳೆದ ಹದಿನಾಲ್ಕು ತಿಂಗಳಿನಿಂದ ಸಾರ್ವಜನಿಕರಿಗೆ ಸಲಹೆ, ಮಾರ್ಗದರ್ಶನವನ್ನು ನೀಡುತ್ತಿರುವ ಡಾ.ಆಂಜನಪ್ಪ ಅವರು ಕೋವಿಡ್ ಬಗ್ಗೆ ಭಯಬೇಡ, ಆದರೆ ಜಾಗರೂಕತೆ ಅತಿ ಮುಖ್ಯ ಎಂದು ಒತ್ತಿ ಹೇಳಿದ್ದಾರೆ.

ಕೊವಿಡ್ 19: ಮೇ 05ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ? ಕೊವಿಡ್ 19: ಮೇ 05ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?

ಮಳೆಗಾಲದಲ್ಲಿ ಬರುವ ಶೀತ, ಜ್ವರದ ರೀತಿಯಲ್ಲೇ ಇದೊಂದು ವೈರಲ್ ಫೀವರ್. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ ಹಾಗೇ, ಸರಕಾರ ಸೂಚಿಸಿದ ಮಾರ್ಗಸೂಚಿಯನ್ನು ಪಾಲಿಸಿದರೆ ಏನೂ ಆಗುವುದಿಲ್ಲ ಎನ್ನುವ ಅಭಯವನ್ನು ಡಾ.ಆಂಜನಪ್ಪ ನೀಡಿದ್ದಾರೆ.

ರೆಮ್‌ಡೆಸಿವಿರ್ ಚುಚ್ಚುಮುದ್ದು ಆಂಟಿ ವೈರಲ್ ಡ್ರಗ್ ಆಗಿದೆ, ಸೋಂಕಿತರಿಗೆ ಉಸಿರಾಟದ ತೊಂದರೆ ಏನೂ ಇಲ್ಲದೇ ಇದ್ದಾಗ ಈ ಇಂಜಕ್ಷನ್ ಪ್ರಯೋಗ ಮಾಡಬೇಕು ಎಂದು ಡಾ. ಆಂಜನಪ್ಪ ಸಲಹೆಯನ್ನು ನೀಡಿದ್ದಾರೆ.

ಕೊರೊನಾ ಸಂಕಷ್ಟದ ಮಧ್ಯೆ ಗುಡ್ ನ್ಯೂಸ್ ಹೇಳಿದ ಡಾ.ಸಿ.ಎನ್.ಮಂಜುನಾಥ್: ಕಂಡೀಷನ್ ಅಪ್ಲೈಕೊರೊನಾ ಸಂಕಷ್ಟದ ಮಧ್ಯೆ ಗುಡ್ ನ್ಯೂಸ್ ಹೇಳಿದ ಡಾ.ಸಿ.ಎನ್.ಮಂಜುನಾಥ್: ಕಂಡೀಷನ್ ಅಪ್ಲೈ

ರೆಮ್‌ಡೆಸಿವಿರ್ ಚುಚ್ಚುಮುದ್ದು ಸೋಂಕು ಉಲ್ಬಣವಾಗುವುದನ್ನು ಕಡಿಮೆ ಮಾಡುತ್ತೆ

ರೆಮ್‌ಡೆಸಿವಿರ್ ಚುಚ್ಚುಮುದ್ದು ಸೋಂಕು ಉಲ್ಬಣವಾಗುವುದನ್ನು ಕಡಿಮೆ ಮಾಡುತ್ತೆ

ರೆಮ್‌ಡೆಸಿವಿರ್ ಚುಚ್ಚುಮುದ್ದು ಸೋಂಕು ಉಲ್ಬಣವಾಗುವುದನ್ನು ಕಡಿಮೆ ಮಾಡುತ್ತೆ. ಈ ಇಂಜಕ್ಷನ್ ಅನ್ನು ರೋಗಿಗಳಿಗೆ ಯಾವ ಸಮಯದಲ್ಲಿ ಕೊಡಬೇಕು ಎನ್ನುವುದು ಒಬ್ಬ ವೈದ್ಯನಿಗೆ ಗೊತ್ತಿರುತ್ತದೆ. ಇದು ಜೀವ ಉಳಿಸುವ ಚುಚ್ಚುಮದ್ದಲ್ಲ ಎಂದು ಡಾ.ಆಂಜನಪ್ಪ ಹೇಳಿದ್ದಾರೆ.

 30 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಮಾಡಿರುವ ಖ್ಯಾತ ವೈದ್ಯ ಡಾ.ಆಂಜನಪ್ಪ

30 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಮಾಡಿರುವ ಖ್ಯಾತ ವೈದ್ಯ ಡಾ.ಆಂಜನಪ್ಪ

ಮಾಸ್ಕ್, ಶುಚಿತ್ವ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬರದೇ ಜನರು ನಿರ್ಲಕ್ಷ್ಯ ತೋರಿರುವುದರಿಂದ ಈ ವೈರಸ್ ಪ್ರಭಾವ ಜಾಸ್ತಿಯಾಯಿತು. ಮುನ್ನೂರಕ್ಕೂ ಹೆಚ್ಚು ವೈರಸ್ ಗಳಿವೆ. ಅದರಲ್ಲಿ ಕೊರೊನಾ ಕೂಡಾ ಒಂದು ಎಂದು ಡಾ.ಆಂಜನಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ರೆಮ್‌ಡೆಸಿವಿರ್ ನಾಟ್ ಎ ಲೈಫ್ ಸೇವಿಂಗ್ ಡ್ರಗ್

ರೆಮ್‌ಡೆಸಿವಿರ್ ನಾಟ್ ಎ ಲೈಫ್ ಸೇವಿಂಗ್ ಡ್ರಗ್

ವಿರ್ ಎಂದು ಬರೆಯುವ ಔಷಧಿಗಳೆಲ್ಲಾ ಆಂಟಿ ವೈರಲ್ ಡ್ರಗ್ ಗಳಾಗಿರುತ್ತವೆ. ರೆಮ್‌ಡೆಸಿವಿರ್ ಕೂಡಾ ಇದರಲ್ಲಿ ಒಂದು, ಇದು ನಾಟ್ ಎ ಲೈಫ್ ಸೇವಿಂಗ್ ಡ್ರಗ್. ಕಾಳಸಂತೆಯಲ್ಲಿ ಇದು ಮಾರಾಟವಾಗುತ್ತಿದೆ, ಇದು ಕೊಡದಿದ್ದರೂ ಏನೂ ತೊಂದರೆಯಿಲ್ಲ ಎಂದು ಡಾ.ಆಂಜನಪ್ಪ ಸಲಹೆಯನ್ನು ನೀಡಿದ್ದಾರೆ.

Recommended Video

Bed Blocking ಪ್ರಕರಣಕ್ಕೆ ಹೊಸ ತಿರುವು | Oneindia Kannada
 ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ, ರೆಮ್‌ಡೆಸಿವಿರ್ ಜೀವ ಉಳಿಸುವ ಚುಚ್ಚುಮದ್ದಲ್ಲ

ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ, ರೆಮ್‌ಡೆಸಿವಿರ್ ಜೀವ ಉಳಿಸುವ ಚುಚ್ಚುಮದ್ದಲ್ಲ

ಆಕ್ಸಿಜನ್ ಹಾಗೂ ಶ್ವಾಸಕೋಶದಲ್ಲಿನ ಸೋಂಕು ಹೋಗಲಾಡಿಸಲು ಸ್ಟೀರೈಡ್ ಡ್ರಗ್ಸ್‌ ಸಾಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ, ರೆಮ್‌ಡೆಸಿವಿರ್ ಜೀವ ಉಳಿಸುವ ಚುಚ್ಚುಮದ್ದಲ್ಲ ಎಂದು, ಜನರು ವೈದ್ಯರ ಮಾತನ್ನು ಕೇಳದೇ ಇರುವುದರಿಂದಲೇ ಅದರ ಬೇಡಿಕೆ ಹೆಚ್ಚಾಗಿ, ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಎಂದು ಡಾ.ಆಂಜನಪ್ಪ ಅಭಿಪ್ರಾಯ ಪಟ್ಟಿದ್ದಾರೆ.

English summary
Is Remdesivir Is A Life Saving Drug, Noted Physician Dr. Anjanappa Reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X