• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಹನದಲ್ಲಿ DL, RC ಒರಿಜಿನಲ್ಲೇ ಬೇಕಾ? ಇಲ್ಲಾಂದ್ರೆ ದಂಡ ಬೀಳುತ್ತಾ?

|
Google Oneindia Kannada News
   ವಾಹನದಲ್ಲಿ DL, RC ಒರಿಜಿನಲ್ಲೇ ಬೇಕಾ? ಇಲ್ಲಾಂದ್ರೆ ದಂಡ ಬೀಳುತ್ತಾ? | Oneindia Kannada

   ಬೆಂಗಳೂರು, ಸೆಪ್ಟೆಂಬರ್ 06: ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯ ನಂತರ ವಾಹನ ಚಾಲಕರಲ್ಲಿ ಸಾಕಷ್ಟು ಗೊಂದಲ ಆರಂಭವಾಗಿದೆ. ದಂಡ ಹಾಕುವುದಕ್ಕೂ ಮುನ್ನ ಸಂಚಾರಿ ನಿಯಮಗಳ ಬಗ್ಗೆ ಜನಸಾಮಾನ್ಯರಲ್ಲಿ ಸರಿಯಾದ ಅರಿವು ಮೂಡಿಸಿ, ದುಬಾರಿ ದಂಡ ವಿಧಿಸುವ ಮುನ್ನ ರಸ್ತೆಯನ್ನು ಸರಿಪಡಿಸಿ, ಗುಂಡಿಗಳನ್ನು ಮುಚ್ಚಿ ಎಂಬಿತ್ಯಾದಿ ಆಗ್ರಹಗಳು ಕೇಳಿಬರುತ್ತಿವೆ.

   ಇದರೊಟ್ಟಿಗೆ ವಾಹನದ ಮತ್ತು ಚಾಲಕರ ದಾಖಲೆಗಳ ಒರಿಜಿನಲ್ ಪ್ರತಿಯನ್ನೇ ಇಟ್ಟುಕೊಳ್ಳಬೇಕಾ? ಅಥವಾ ಅವುಗಳ ಸ್ಕ್ಯಾನ್ಡ್ ಕಾಪಿಯನ್ನು ಇಟ್ಟುಕೊಂಡರೂ ನಡೆಯುತ್ತದಾ? ಅಕಸ್ಮಾತ್ ಒರಿಜಿನಲ್ ಪ್ರತಿ ಇಲ್ಲವೆಂದರೆ ಅದಕ್ಕೂ ದಂಡ ತೆರಬೇಕಾ? ಎಂಬಿತ್ಯಾದಿ ಅನುಮಾನಗಳು ಜನಸಾಮಾನ್ಯರಲ್ಲಿ ಎದ್ದಿವೆ.

   ದೆಹಲಿಯಲ್ಲಿ ವ್ಯಕ್ತಿಯೊಬ್ಬರಿಗೆ 24,000 ರೂ. ದಂಡ ಹಾಕಿದ ಘಟನೆಯ ನಂತರ ವಾಹನ ಸವಾರರಲ್ಲಿ ಆತಂಕ ಮೂಡಿದ್ದು, ದಾಖಲೆಗಳು ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದವರು, ಒರಿಜಿನಲ್ ಪ್ರತಿಗಳನ್ನೇ ವಾಹನದಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಆದರೆ ಅದಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಪರಿಹಾರ ನೀಡಿದ್ದಾರೆ.

   ಒರಿಜಿನಲ್ ಬೇಕೆಂದಿಲ್ಲ

   ಒರಿಜಿನಲ್ ಬೇಕೆಂದಿಲ್ಲ

   ಸವಾರರು ತಮ್ಮ ವಾಹನ ಪರವಾನಗಿ(DL) ಮತ್ತು ನೋಂದಣಿ ಪ್ರಮಾಣಪತ್ರ(RC)ಗಳ ಒರಿಜಿನಲ್ ಪ್ರತಿಯನ್ನು ಇಟ್ಟುಕೊಳ್ಳಲೇಬೇಕೆಂದಿಲ್ಲ. ಆದರೆ ಅವುಗಳ ಸ್ಕ್ಯಾನ್ಡ್ ಪ್ರತಿಯನ್ನು ನಿಮ್ಮ ಮೊಬೈಲ್ ನಲ್ಲಿ ಇರಿಸಿಕೊಳ್ಳಲೇ ಬೇಕು. ಮೊಬೈಲ್ ನಲ್ಲಿ ಡಿಜಿಲಾಕರ್ app ಅನ್ನು ಇನ್ ಸ್ಟಾಲ್ ಮಾಡಿಕೊಂಡು, ಅದರಲ್ಲಿ ಡಿಎಲ್, ಆರ್ ಸಿ ಮತ್ತು ಎಮಿಶನ್ ಸರ್ಟಿಫಿಕೇಟ್ ಗಳನ್ನು ಇಟ್ಟುಕೊಳ್ಳಬಹುದು.

   ಇನ್ಶುರೆನ್ಸ್ ಹಾರ್ಡ್ ಕಾಪಿ

   ಇನ್ಶುರೆನ್ಸ್ ಹಾರ್ಡ್ ಕಾಪಿ

   ಆದರೆ ವಾಹನ ವಿಮೆಯ ಪ್ರತಿಯನ್ನು ಮಾತ್ರ ಒರಿಜಿನಲ್ ಹಾರ್ಡ್ ಕಾಪಿಯನ್ನೇ ಇಟ್ಟುಕೊಳ್ಳಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

   ಒರಿಜಿನಲ್ ಪ್ರತಿ ಯಾವಾಗ ಬೇಕು?

   ಒರಿಜಿನಲ್ ಪ್ರತಿ ಯಾವಾಗ ಬೇಕು?

   ಸಂಚಾರಿ ಪೊಲೀಸರು ಕೇಳಿದಾಗ ವಾಹನ ಸವಾರರು ಡಿಜಿಲಾಕರ್ ನಲ್ಲಿರುವ ತಮ್ಮ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ತೋರಿಸಬಹುದು. ಆದರೆ ಸವಾರರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಯ ಯಾವುದೇ ಪ್ರಕರಣಗಳಿದ್ದರೆ ಅಂಥ ಸಂದರ್ಭದಲ್ಲಿ ಒರಿಜಿನಲ್ ಪ್ರತಿಯನ್ನು ಪರಿಶೀಲಿಸುವುದು ಅನಿವಾರ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಒರಿಜಿನಲ್ ಪ್ರತಿಯನ್ನೇ ನೀಡಬೇಕಾಗುತ್ತದೆ.

   ಬೆಂಗಳೂರು ವ್ಯಕ್ತಿಗೆ 17000 ರೂ. ದಂಡ

   ಬೆಂಗಳೂರು ವ್ಯಕ್ತಿಗೆ 17000 ರೂ. ದಂಡ

   ಮೋಟಾರ್ ವೆಹಿಕಲ್ ತಿದ್ದುಪಡಿ ಕಾಯ್ದೆಯ ನೂತನ ನಿಯಮ ಜಾರಿಗೆ ಬಂದ ನಂತರ ಬೆಂಗಳೂರಿನಲ್ಲಿ ಅತೀ ಹೆಚ್ಚು ದಂಡ ಕಟ್ಟಿದವರು ವರ್ತೂರಿನ ಆಕಾಶ್ ಎಂಬ ವ್ಯಕ್ತಿ. ಡ್ರಿಂಕ್ ಅಂಡ್ ಡ್ರೈವ್(ರೂ.10,000/-), ಡಿಎಲ್ ಇಲ್ಲದೆ ವಾಹನ ಚಲಾವಣೆ(ರೂ.5000/-), ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ(ರೂ.2000/-) ಸೇರಿ ಮೂರು ಪ್ರಕರಣಗಳಲ್ಲಿ ಒಟ್ಟು 17000 ರೂ ದಂಡ ವಿಧಿಸಲಾಗಿದೆ.

   English summary
   Is Original Copy Of DL and RC Mandatory for vehicle riders after New Motor Vehicle amendment act?,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X