• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಎಸ್ ಎಂ ಕೃಷ್ಣ?

|
   Lok Sabha Election 2019 : ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಎಸ್ ಎಂ ಕೃಷ್ಣ? | Oneindia Kannada

   ಬೆಂಗಳೂರು, ಫೆಬ್ರವರಿ 05: ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರ ಇಬ್ಬರು ದಿಗ್ಗಜರ ಸೆಣಸಾಟಕ್ಕೆ ಸಾಕ್ಷಿಯಾಗಲಿದೆಯಾ?

   ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಮತ್ತು ಮಾಜಿ ಪ್ರಧಾನಿ, ಮುಖ್ಯಮಂತ್ರಿ ಎಚ್ ಡಿ ದೇವೇಗೌಡ ಅವರು ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಾಗಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು 'ದಿ ಹಿಂದು' ಪತ್ರಿಕೆ ವರದಿ ಮಾಡಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ.

   ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿವೆ ಎಂಬುದು ಕುತೂಹಲದ ವಿಷಯವಾಗಿದ್ದು, ದಿನ ದಿನವೂ ಒಬ್ಬೊಬ್ಬರ ಹೆಸರು ಕೇಳಿಬರುತ್ತಿದೆ. ಆದರೆ ಬಿಜೆಪಿಯು ಸಾಕಷ್ಟು ಕಾರ್ಯತಂತ್ರ ರೂಪಿಸಿ ದೇವೇಗೌಡರನ್ನು ಎದುರಿಸಬಲ್ಲ ಸಮರ್ಥ ಅಭ್ಯರ್ಥಿ ಎಂದು ಎಸ್ ಎಂ ಕೃಷ್ಣ ಅವರನ್ನೇ ಕಣಕ್ಕಿಳಿಸಿದರೆ ಅಚ್ಚರಿಯಿಲ್ಲ ಎಂದು ಕೆಲವು ಬಲ್ಲ ಮೂಲಗಳು ತಿಳಿಸಿರುವುದಾಗಿ ಈ ವರದಿಯಲ್ಲಿ ಬರೆಯಲಾಗಿದೆ.

   ಲೋಕಸಭೆ ಚುನಾವಣೆ: ದೇವೇಗೌಡರ ವಿರುದ್ಧ ಸೆಣೆಸಲು ಸಿದ್ಧ: ಡಿವಿಎಸ್

   ಒಕ್ಕಲಿಗೆ ಸಮುದಾಯದ ಪ್ರತಿನಿಧಿಗಳು, ಉನ್ನತ ಹುದ್ದೆಯಲ್ಲಿದ್ದ ಅನುಭವಗಳಿಂದಾಗಿ ಇಬ್ಬರು ನಾಯಕರೂ ತಕ್ಕಡಿಯಲ್ಲಿ ಸಮಾನ ತೂಕದಲ್ಲೇ ತೂಗುತ್ತಾರೆ. ದೇವೇಗೌಡರನ್ನು ಎದುರಿಸಲು ಎಸ್ ಎಂ ಕೃಷ್ಣ ಅವರೇ ಸಮರ್ಥ ವ್ಯಕ್ತಿ ಎಂದು ಬಿಜೆಪಿಯೂ ನಿರ್ಧರಿಸಿದರೆ ಅಚ್ಚರಿಯಿಲ್ಲ.

   ಇಬ್ಬರೂ ಒಕ್ಕಲಿಗರು

   ಇಬ್ಬರೂ ಒಕ್ಕಲಿಗರು

   ಎಸ್ ಎಂ ಕೃಷ್ಣ ಮತ್ತು ದೇವೇಗೌಡ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅವರಿಬ್ಬರೂ ಎದುರಾಳಿಗಳಾಗಲು ಅದೂ ಒಂದು ಮುಖ್ಯ ಕಾರಣ. ಇಬ್ಬರೂ ಕರ್ನಾಟಕದ ಮುಖ್ಯಮಂತ್ರಿಗಳು. ಆದ್ದರಿಂದ ಇಬ್ಬರಲ್ಲಿ ಯಾರು ಯೋಗ್ಯರು, ಯಾರು ಕಡಿಮೆ ಯೋಗ್ಯರು ಎಂದು ನಿರ್ದರಿಸುವುದು ಮತದಾರರಿಗೂ ಕಷ್ಟದ ವಿಚಾರ. ಇದುವರೆಗೂ ಎಂದಿಗೂ ಉಭಯ ನಾಯಕರು ಎದುರಾಳಿಗಳಾಗಿಲ್ಲ.

   ಬಿಜೆಪಿಗೆ ತಲೆನೋವಾದ ಬೆಂಗಳೂರು ಉತ್ತರ ಲೋಕಸಭಾ ಟಿಕೆಟ್ ಹಂಚಿಕೆ

   ಅವರಿಗೆ ಅವರೇ ಸಾಟಿ!

   ಅವರಿಗೆ ಅವರೇ ಸಾಟಿ!

   ಬಿಜೆಪಿಯಲ್ಲಿ ದೇವೇಗೌಡರಿಗೆ ಸವಾಲೆಸೆಯಬಲ್ಲ ನಾಯಕರಿದ್ದರೆ ಅದು ಎಸ್ ಎಂ ಕೃಷ್ಣ. ಹಾಗೆಯೇ ಜೆಡಿಎಸ್ ನಲ್ಲಿ ಎಸ್ ಎಂ ಕೃಷ್ಣ ಅವರನ್ನು ಎದುರಿಸುವ ತಾಕತ್ತಿದ್ದರೆ ಅದು ದೇವೇಗೌಡ ಅವರಿಗೆ! ಅಲ್ಲದೆ ಬೆಂಗಳೂರನ್ನು ಐಟಿ ಹಬ್ ಆಗಿ ಮಾಡುವಲ್ಲಿ ಎಸ್ ಎಂ ಕ್ಶೃಹ್ನ ಅವರ ಕೊಡುಗೆ ಅಪಾರ. ಬೆಂಗಳೂರಿಗರಲ್ಲಿ ಕೃಷ್ಣ ಬಗೆಗೆ ಅಪಾರ ಅಭಿಮಾನವಿದೆ. ಬಿಜೆಪಿ ಈ ಎಲ್ಲ ಧನಾತ್ಮಕ ಅಂಶಗಳನ್ನೂ ಮನಗಂಡು ಅವರನ್ನು ಕಣಕ್ಕಿಳಿಸಲು ನಿರ್ಧರಿಸಬಹುದು.

   ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

   ಸದಾನಂದ ಗೌಡರ ಕತೆ ಏನು?

   ಸದಾನಂದ ಗೌಡರ ಕತೆ ಏನು?

   ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಸದಾನಂದ ಗೌಡರೇ ಈ ಕ್ಷೇತ್ರದಿಂದ ಸ್ಪರ್ಹದಿಸುತ್ತಾರೆ. ದೇವೇಗೌಡರು ಅವರ ಎದುರಾಳಿ ಎಂದು ಇತ್ತೀಚೆಗೆ ಕೆಲವೆಡೆ ವರದಿಯಾಗಿತ್ತು. ಸದಾನಂದ ಗೌಡರೂ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ, ಅದೂ ಅಲ್ಲದೆ, ಒಕ್ಕಲಿಗರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್.ಪುರಂ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ ಗಳಲ್ಲಿ ಸದಾನಂದ ಗೌಡರ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಅವರೂ ಇದೇ ಕ್ಷೇತ್ರ ಬೇಕೆಂದು ಒತ್ತಾಯಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

   ಶೋಭಾ ಕರಂದ್ಲಾಜೆ ಸ್ಪರ್ಧೆ?

   ಶೋಭಾ ಕರಂದ್ಲಾಜೆ ಸ್ಪರ್ಧೆ?

   ಕೆಲವು ಮೂಲಗಳ ಪ್ರಕಾರ, ಅಕಸ್ಮಾತ್ ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ದೇವೇಗೌಡರು ಸ್ಪರ್ಧಿಸಿದರೆ ಬಿಜೆಪಿ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ಸದಾನಂದಗೌಡರು ಬಿಗಿಹಿಡಿತ ಹೊಂದಿರುವುದರಿಂದ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಅನುಮಾನವೇ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   A report in The Hindu news paper quoted that, Former PM HD Devegowda from JDS and Former CM of Karnataka SM Krishna from BJP may contest opposite in Bengaluru North constituency in Lok Sabha elections 2019.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more