ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮತ್ತೆ ಪ್ರಧಾನಿಯಾದರೆ ರೇವಣ್ಣ ರಾಜಕೀಯ ನಿವೃತ್ತಿ ಪಡೆಯುತ್ತಾರಾ?

|
Google Oneindia Kannada News

ಬೆಂಗಳೂರು, ಮೇ 22: ನರೇಂದ್ರಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದ ಸಚಿವ ಎಚ್‌ಡಿ ರೇವಣ್ಣ ನಡೆ ಈಗ ಕುತೂಹಲ ಹುಟ್ಟಿಸಿದೆ.

ಬಹುತೇಕ ಚುನಾವಣೋತ್ತರ ಸಮೀಕ್ಷೆ ಪ್ರಕಾರ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ನಾಳೆ ಫಲಿತಾಂಶ ಬರಲಿದ್ದು ಒಂದೊಮ್ಮೆ ಮೋದಿ ಪ್ರಧಾನಿಯಾದರೆ ಸಚಿವ ರೇವಣ್ಣ ಮಂತ್ರಿಗಿರಿಗೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸ ತೆಗೆದುಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಮೋದಿ ಮತ್ತೆ ಪಿಎಂ ಆದರೆ ರಾಜಕೀಯ ಸನ್ಯಾಸ: ಗೌಡ್ರ ನಂತರ ರೇವಣ್ಣಮೋದಿ ಮತ್ತೆ ಪಿಎಂ ಆದರೆ ರಾಜಕೀಯ ಸನ್ಯಾಸ: ಗೌಡ್ರ ನಂತರ ರೇವಣ್ಣ

ಜೆಡಿಎಸ್ ನಾಯಕರ ಮನೆಗಳ ಮೇಲೆ ಹಾಗೂ ಗುತ್ತಿಗೆದಾರರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಗಳು ನಡೆದ ಸಂದರ್ಭದಲ್ಲಿ ಆವೇಶದಲ್ಲಿ ಹೇಳಿಕೆ ನೀಡಿದ್ದ ರೇವಣ್ಣ, 'ಮೋದಿಗೆ ಇದು ಕೊನೆಯ ಕಾಲ ಮೋದಿ ಮತ್ತೆ ಪ್ರಧಾನಿಯಾಗಲಾರರು,ಒಂದೊಮ್ಮೆ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ' ಎಂದು ಘೋಷಿಸಿದ್ದರು.

ಈಗ ನಾಳೆ ಮತ್ತೆ ಮೋದಿ ಪ್ರಧಾನಿಯಾಗಿ ಆಯ್ಕೆಯಾದರೆ ಬಿಜೆಪಿ ನಾಯಕರು ಖಡಾಖಂಡಿತವಾಗಿ ರೇವಣ್ಣ ಅವರ ರಾಜಕೀಯ ನಿವೃತ್ತಿಯನ್ನು ಕೇಳಿ ಲೇವಡಿ ಮಾಡುವುದಂತೂ ಸತ್ಯವಾಗಿದೆ. ಅದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾರ್ವಜನಿಕರೂ ಕೂಡ ಈ ಬಗ್ಗೆ ಚರ್ಚೆ ನಡೆಸಬಹುದು.

ರೇವಣ್ಣ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಇದೇ ರೀತಿ ರೇವಣ್ಣ ಅವರ ತಂದೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಹೇಳಿಕೆ ನೀಡಿದ್ದರು.

ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?

ಒಂದೊಮ್ಮೆ ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆದು ದೇಶಬಿಡುತ್ತೇನೆ ಎಂದು ದೇವೇಗೌಡರು ಘೋಷಿಸಿದ್ದರು. ಆದರೆ ಮೋದಿ ಭೇಟಿ ಸಂದರ್ಭದಲ್ಲಿ ಈ ವಿಚಾರವೂ ಕೂಡ ಚರ್ಚೆಗೆ ಬಂದಿತ್ತು ಎನ್ನಲಾಗಿದೆ.

ನಿಮ್ಮಂಥ ಹಿರಿಯ ಸಂಸದೀಯರು ರಾಜಕೀಯ ನಿವೃತ್ತಿ ಪಡೆಯುವುದು ಸರಿಯಲ್ಲ, ಸಂತಸ್‌ನಲ್ಲಿ ನಿಮ್ಮಂಥ ಹಿರಿಯ ಸಂಸದರ ಅಗತ್ಯವಿದೆ ಎಂದು ಮೋದಿ ಹೇಳಿದ್ದ ಹಿನ್ನೆಲೆಯಲ್ಲಿ ನಿಲುವು ಬದಲಿಸಿದ್ದಾಗಿ ದೇವೇಗೌಡರು ಹೇಳಿಕೊಂಡಿದ್ದರು. ಈಗ ರೇವಣ್ಣ ಯಾವ ರೀತಿ ಸಬೂಬು ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಲೋಕಸಭೆಯಲ್ಲಿ 22 ಸೀಟು ಗೆಲ್ಲುವುದು ಪಕ್ಕಾ

ಲೋಕಸಭೆಯಲ್ಲಿ 22 ಸೀಟು ಗೆಲ್ಲುವುದು ಪಕ್ಕಾ

ಲೋಕೋಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 22 ಕ್ಷೇತ್ರಗಳನ್ನು ಗೆದ್ದೆ ಗೆಲ್ಲುತ್ತೆ. 22 ನನಗೆ ಲಕ್ಕಿ ನಂಬರ್ ಎಂದು ರೇವಣ್ಣ ಹೇಳಿದ್ದರು. ನನ್ನ ಜೀವನದಲ್ಲೇ ಎಚ್.ಡಿ.ಕುಮಾರಸ್ವಾಮಿ ಜತೆ ಹೊಡೆದಾಡಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಯಾರು ಸಚಿವರಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಪಕ್ಷದ 7 ಅಭ್ಯರ್ಥಿಗಳ ಪೈಕಿ ಒಬ್ಬರು ಸಚಿವರಾಗುತ್ತಾರೆ ಎಂದು ಹೇಳಿದ್ದರು.

ರೇವಣ್ಣ ಕೂಡ ಸಿಎಂ ಆಗಬಹುದು ಎಂದಿದ್ದರು ಸಿದ್ದರಾಮಯ್ಯ

ರೇವಣ್ಣ ಕೂಡ ಸಿಎಂ ಆಗಬಹುದು ಎಂದಿದ್ದರು ಸಿದ್ದರಾಮಯ್ಯ

ಎಚ್‌ಡಿ ರೇವಣ್ಣ ಕೂಡ ಮುಖ್ಯಮಂತ್ರಿಯಾಗಬಹುದು ಅವರಿಗೂ ಅರ್ಹತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ವಿರುದ್ಧವಾಗಿ ಈ ಹೇಳಿಕೆ ನೀಡಿದ್ದರು.

ಸಿಎಂ ಸ್ಥಾನಕ್ಕೆ ಅರ್ಹ ಎಂದ ಸಿದ್ದರಾಮಯ್ಯಗೆ ರೇವಣ್ಣ ಕೃತಜ್ಞತೆಸಿಎಂ ಸ್ಥಾನಕ್ಕೆ ಅರ್ಹ ಎಂದ ಸಿದ್ದರಾಮಯ್ಯಗೆ ರೇವಣ್ಣ ಕೃತಜ್ಞತೆ

ರೇವಣ್ಣ ಮುಖ್ಯಮಂತ್ರಿಯಾಗುವುದು ಭಗವಂತನ ಇಚ್ಛೆ

ರೇವಣ್ಣ ಮುಖ್ಯಮಂತ್ರಿಯಾಗುವುದು ಭಗವಂತನ ಇಚ್ಛೆ

ಎಚ್‌ಡಿ ರೇವಣ್ಣ ಮುಖ್ಯಮಂತ್ರಿ ಹುದ್ದೆಗೇರುವುದು ಭಗವಂತನ ಇಚ್ಛೆ, ಈಗ ನಮ್ಮ ಕುಟುಂಬದವರೇ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಪಕ್ಕಕ್ಕೆ ಸರಿಸಿ ರೇವಣ್ಣ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಇಚ್ಛೆ ನಮ್ಮದಲ್ಲ. ಇವತ್ತಿನ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೇ ಸಿಎಂ. ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದರೆ ಒಳ್ಳೆಯದು. ನಮ್ಮ ಮನೆಯವರೇ ಸಿಎಂ ಆಗಿರುವುದರಿಂದ ಅವರೇ ಇರಲಿ ಎನ್ನುವುದು ಬಯಕೆ ಎಂದು ರೇವಣ್ಣ ಪತ್ನಿ ಭವಾನಿ ರೇವಣ್ಣ ಹೇಳಿದ್ದರು.

ರೇವಣ್ಣ ಸಿಎಂ ಆಗೋದು ಭಗವಂತನ ಇಚ್ಛೆ: ಭವಾನಿ ರೇವಣ್ಣರೇವಣ್ಣ ಸಿಎಂ ಆಗೋದು ಭಗವಂತನ ಇಚ್ಛೆ: ಭವಾನಿ ರೇವಣ್ಣ

ಸಿದ್ದರಾಮಯ್ಯಗೆ ರೇವಣ್ಣ ಕೃತಜ್ಞತೆ

ಸಿದ್ದರಾಮಯ್ಯಗೆ ರೇವಣ್ಣ ಕೃತಜ್ಞತೆ

ಎಚ್‌.ಡಿ.ರೇವಣ್ಣ ಅವರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹ ವ್ಯಕ್ತಿ' ಎಂದಿದ್ದ ಸಿದ್ದರಾಮಯ್ಯ ಅವರಿಗೆ ಎಚ್‌.ಡಿ.ರೇವಣ್ಣ ಕೃತಜ್ಞತೆ ತಿಳಿಸಿದ್ದರು. ನಾನು ಸಿದ್ದರಾಮಯ್ಯ 25 ವರ್ಷದ ಗೆಳೆಯರು, 96 ರಿಂದಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ, ಅವರು ನನ್ನ ಕೆಲಸ ನೋಡಿ ಅಭಿಮಾನದಿಂದ ಆ ಮಾತು ಹೇಳಿದ್ದಾರೆ ಎಂದಿದ್ದಾರೆ. ಹೀಗಿರುವವರು ರಾಜಕೀಯ ನಿವೃತ್ತಿ ಪಡೆಯುತ್ತಾರಾ ತಾವು ಹೇಳಿದ ಮಾತನ್ನು ಉಳಿಸಿಕೊಳ್ಳುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ.

English summary
Is Karnataka minister HD Revanna going to retire from Political life if Narendra Modi re-elected as Prime minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X