ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ಹೊಸ ತಂತ್ರಗಾರಿಕೆ: ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಕಣಕ್ಕೆ?

|
Google Oneindia Kannada News

ಹೈಕಮಾಂಡ್ ಮಟ್ಟದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಳ್ಳಬೇಕಾದರೆ ಕಾಂಗ್ರೆಸ್ಸಿನಲ್ಲಿ ಗಾಂಧಿ/ ನೆಹರೂ ಕುಟುಂಬದ ಜೊತೆಗೆ ಉತ್ತಮ ನಂಟಿರಬೇಕು. ಇದು ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್‌ನಲ್ಲಿರುವ ಅಲಿಖಿತ ಕಾನೂನು.

ಇದೇ ವಾರಾಂತ್ಯದಲ್ಲಿ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಚಿಂತನಾ ಸಭೆ ಆಯೋಜಿಸಲಾಗಿದೆ. ಮುಂಬರುವ ಚುನಾವಣೆಗಳು, ರಾಷ್ಟ್ರಾಧ್ಯಕ್ಷರ ನೇಮಕ ಮತ್ತು ಪಕ್ಷದ ಮುಂದಿನ ಕಾರ್ಯಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ.

ಅಶ್ವತ್ಥ ನಾರಾಯಣ-ಎಂಬಿ ಪಾಟೀಲ್ ಭೇಟಿ: ಬಳಿಕ ಮಾತಿನ ಚಾಟಿ! ಅಶ್ವತ್ಥ ನಾರಾಯಣ-ಎಂಬಿ ಪಾಟೀಲ್ ಭೇಟಿ: ಬಳಿಕ ಮಾತಿನ ಚಾಟಿ!

ರಾಜ್ಯದಿಂದಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದಕ್ಕೂ ಮುನ್ನ, ಮಹತ್ವದ ಯೋಜನೆಯೊಂದನ್ನು ಡಿಕೆಶಿ ಹೊತ್ತುಕೊಂಡು ಹೋಗಲಿದ್ದಾರೆ ಎಂದು ಸುದ್ದಿಯಾಗುತ್ತಿದೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ನಂತರ ಅಷ್ಟಾಗಿ ರಾಜಕೀಯದಲ್ಲಿ ಸಕ್ರಿಯವಾಗಿರದ ಪ್ರಿಯಾಂಕಾ ವಾದ್ರಾರನ್ನು ಕರ್ನಾಟಕದಿಂದ ಗೆಲ್ಲಿಸಿ, ರಾಜ್ಯಸಭೆಗೆ ಕಳುಹಿಸುವ ಪ್ರಸ್ತಾವನೆಯನ್ನು ಡಿ. ಕೆ. ಶಿವಕುಮಾರ್ ಇಡುವ ಸಾಧ್ಯತೆಯಿದೆ ಎಂದು ಕನ್ನಡ ಮಾಧ್ಯಮವೊಂದು ವರದಿ ಮಾಡಿದೆ.

ಬಿಜೆಪಿಯಿಂದ ದೊಡ್ಡ ಹಗರಣಗಳನ್ನು ಗೌಪ್ಯವಾಗಿ ಮುಚ್ಚಿಹಾಕುವ ಪ್ರಯತ್ನ: ಡಿಕೆ ಶಿವಕುಮಾರ್ಬಿಜೆಪಿಯಿಂದ ದೊಡ್ಡ ಹಗರಣಗಳನ್ನು ಗೌಪ್ಯವಾಗಿ ಮುಚ್ಚಿಹಾಕುವ ಪ್ರಯತ್ನ: ಡಿಕೆ ಶಿವಕುಮಾರ್

 ಸುಪ್ರೀಂಕೋರ್ಟ್ ಆದೇಶದ ನಂತರ ಮಹತ್ವದ ಬಿಬಿಎಂಪಿ ಚುನಾವಣೆ

ಸುಪ್ರೀಂಕೋರ್ಟ್ ಆದೇಶದ ನಂತರ ಮಹತ್ವದ ಬಿಬಿಎಂಪಿ ಚುನಾವಣೆ

ಚುನಾವಣಾ ವರ್ಷವಾಗಿರುವುದರಿಂದ ಜೊತೆಗೆ, ಸುಪ್ರೀಂಕೋರ್ಟ್ ಆದೇಶದ ನಂತರ ಮಹತ್ವದ ಬಿಬಿಎಂಪಿ ಚುನಾವಣೆಯೂ ಎದುರಾಗುವ ಸಾಧ್ಯತೆಯಿರುವುದರಿಂದ ದೆಹಲಿ ಮಟ್ಟದಲ್ಲಿ ತಮ್ಮ ವರ್ಚಸ್ಸನ್ನು ತೋರಿಸುವುದು ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್‌ಗೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ, ಪ್ರಿಯಾಂಕಾ ಗಾಂಧಿಯನ್ನು ರಾಜ್ಯದಿಂದ ತೆರವಾಗುವ ರಾಜ್ಯಸಭಾ ಸ್ಥಾನದ ಮೂಲಕ ಗೆಲ್ಲಿಸಿ ಕಳುಹಿಸುವ ಪ್ರಸ್ತಾವನೆಯನ್ನು ಸೋನಿಯಾ ಗಾಂಧಿಯ ಮುಂದೆ ಇಡುವ ಸಾಧ್ಯತೆಯಿದೆ.

 ಪ್ರಿಯಾಂಕ ಅವರನ್ನು ರಾಜ್ಯದಿಂದ ಕಣಕ್ಕಿಳಿಸುವ ಯೋಜನೆ, ಡಿಕೆಶಿ ಹಾಕಿಕೊಂಡಿದ್ದಾರೆ?

ಪ್ರಿಯಾಂಕ ಅವರನ್ನು ರಾಜ್ಯದಿಂದ ಕಣಕ್ಕಿಳಿಸುವ ಯೋಜನೆ, ಡಿಕೆಶಿ ಹಾಕಿಕೊಂಡಿದ್ದಾರೆ?

ರಾಜ್ಯ ಸರಕಾರದ ಸಾಲುಸಾಲು ಭ್ರಷ್ಟಾಚಾರದ ಆರೋಪದ ವಿರುದ್ದ ಹೋರಾಡುತ್ತಿರುವ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆಯಲ್ಲಿನ ಪ್ರಚಾರಕ್ಕೆ ವರ್ಚಸ್ವೀ ಮುಖಂಡರ ಅವಶ್ಯಕತೆಯನ್ನು ಅರಿತಿರುವ ಡಿ. ಕೆ. ಶಿವಕುಮಾರ್ ಪ್ರಿಯಾಂಕಾ ಅವರನ್ನು ರಾಜ್ಯದಿಂದ ಕಣಕ್ಕಿಳಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದು ಸುದ್ದಿಯಾಗುತ್ತಿದೆ. ರಾಜ್ಯದಲ್ಲಿನ ಸೀಟುಗಳ ಪೈಕಿ ಒಂದು ಸೀಟನ್ನಂತೂ ಕಾಂಗ್ರೆಸ್, ತನ್ನ ಸಂಖ್ಯಾಬಲದಿಂದಲೇ ನಿರಾಯಾಸವಾಗಿ ಗೆಲ್ಲಬಹುದಾಗಿದೆ.

 ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ. ಬಿ. ಪಾಟೀಲ್

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ. ಬಿ. ಪಾಟೀಲ್

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ. ಬಿ. ಪಾಟೀಲ್ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣರನ್ನು ಭೇಟಿಯಾಗಿದ್ದಾರೆ ಎನ್ನುವ ಸುದ್ದಿಯೂ ರಾಜ್ಯ ಕಾಂಗ್ರೆಸ್ಸಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಪಾಟೀಲರ ಮತ್ತು ಸಚಿವರ ಭೇಟಿಯ ಬಗ್ಗೆ ಕೆಪಿಸಿಸಿ ಬೇಸರದಿಂದಲೇ ಪ್ರತಿಕ್ರಿಯೆ ನೀಡಿದ್ದು ಗೊತ್ತೇ ಇದೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರೂ ಹೇಳಿಕೆಯನ್ನು ನೀಡುತ್ತಿಲ್ಲ.

 ಡಿಕೆಶಿ ಹೊಸ ತಂತ್ರಗಾರಿಕೆ: ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಕಣಕ್ಕೆ?

ಡಿಕೆಶಿ ಹೊಸ ತಂತ್ರಗಾರಿಕೆ: ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಕಣಕ್ಕೆ?

ನಿರ್ಮಲಾ ಸೀತಾರಾಮನ್, ಕೆ. ಸಿ. ರಾಮಮೂರ್ತಿ, ಜೈರಾಂ ರಮೇಶ್ ರಾಜ್ಯಸಭೆಯ ಸದಸ್ಯ ಅವಧಿ ಇದೇ ವರ್ಷದ ಜೂನ್ 30ಕ್ಕೆ ಮುಕ್ತಾಯಗೊಳ್ಳಲಿದೆ. ಇದರ ಜೊತೆಗೆ, ಒಂದು ಸ್ಥಾನ ಸೆಪ್ಟಂಬರ್ 2021ರಿಂದ ಖಾಲಿಯಿದೆ. ಈ ಪೈಕಿ ಇಬ್ಬರು ಬಿಜೆಪಿ, ಒಬ್ಬರು ಕಾಂಗ್ರೆಸ್ಸಿಗರು. ಕಾಂಗ್ರೆಸ್ ತನ್ನ ಸಂಖ್ಯಾಬಲದಿಂದ ಒಬ್ಬರನ್ನು ಗೆಲ್ಲಿಸಲು ಯಾರ ಮೈತ್ರಿಯೂ ಬೇಕಾಗುವುದಿಲ್ಲ. ಹಾಗಾಗಿ, ಡಿ. ಕೆ. ಶಿವಕುಮಾರ್ ಪ್ರಿಯಾಂಕಾರನ್ನು ಕಣಕ್ಕಿಳಿಸುವ ಪ್ರಸ್ತಾವನೆಯನ್ನು ಸಲ್ಲಿಸಲೂಬಹುದು ಎಂದು ಹೇಳಲಾಗುತ್ತಿದೆ.

English summary
KPCC president D. K. Shivakumar ready with proposal of Priyanka Gandhi to contest from Karnataka to Rajya Sabha seat. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X