ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೊರೊನಾವೈರಸ್ ಎರಡನೇ ಅಲೆ: ಎಷ್ಟು ಸತ್ಯ?

|
Google Oneindia Kannada News

ಬೆಂಗಳೂರು, ಫೆ. 20: ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಎಂಬಂತಾಗಿದೆ ಕೊರೊನಾವೈರಸ್ ಹಾವಳಿ. ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಮತ್ತೆ ಕೊರೊನಾ ಆರ್ಭಟ ಶುರುವಾಗಲಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ಕೊಡುತ್ತಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೆಂಗಳೂರು ಮಹಾನಗರ ಹೊರತು ಪಡಿಸಿದರೆ, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಜನರು ನಿಧಾನವಾಗಿ ಕೊರೊನಾ ವೈರಸ್ ಆತಂಕದಿಂದ ಹೊರಗೆ ಬಂದಿದ್ದಾರೆ. ಯಾರಿಗಾದರೂ ಕೊರೊನಾ ವೈರಸ್ ಸೋಂಕಿದೆ ಎಂದರೆ ಭಯ ಬೀಳಬೇಡಿ ಎಂದು ಜನರೇ ಆತ್ಮವಿಶ್ವಾಸ ತುಂಬುತ್ತಿದ್ದಾರೆ.

ಕೊರೊನಾವೈರಸ್ ವಿರುದ್ಧ ಸೆಣಸಾಡಿ ಗೆದ್ದಿರುವ ಸಾಮಾನ್ಯ ಜನರಿಗೆ ಅದೊಂದು ಸಾಮಾನ್ಯ ಜ್ವರ ಎಂಬುದು ಮನವರಿಕೆಯಾಗಿದೆ. ಹೀಗಾಗಿ ಕೊರೊನಾ ವೈರಸ್ ಭಯದಿಂದ ಆಗುತ್ತಿದ್ದ ಅನಾಹುತಗಳು ಕಡಿಮೆಯಾಗಿವೆ. ಆದರೂ ಕೂಡ ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾವೈರಸ್ ಎರಡನೇ ಅಲೆ ಶುರುವಾಗಿದೆ ಎಂದು ಅಧಿಕೃತವಾಗಿ ರಾಜ್ಯ ಸರ್ಕಾರದ ಸಚಿವರು, ಆರೋಗ್ಯ ಇಲಾಖೆ ಹೇಳುತ್ತಿದೆ.

ಆದ್ದರಿಂದ ಎರಡೂ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ ಕೊರೊನಾವೈರಸ್ ಪರೀಕ್ಷೆ ಕಡ್ಡಾಯ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ಅವರು ಆದೇಶ ಮಾಡಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲೆಕ್ಕಾಚಾರ: 35 ದಿನಗಳ ಮಾಹಿತಿಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲೆಕ್ಕಾಚಾರ: 35 ದಿನಗಳ ಮಾಹಿತಿ

ಅಷ್ಟಕ್ಕೂ ಕೊರೊನಾವೈರಸ್ ಎರಡನೇ ಅಲೆ ಎಂದರೆ ಏನು? ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಹರಡುತ್ತಿರುವುದು ಎಷ್ಟು ಸತ್ಯ? ಎಂಬುದರ ಕುರಿತು ಕೊರೊನಾವೈರಸ್ ತಜ್ಞರು 'ಒನ್‌ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. ಅವರು ಹೇಳುತ್ತಿರುವುದೇನು?

ಕೊರೊನಾ ಎರಡನೇ ಅಲೆ ಎಂದರೇನು?

ಕೊರೊನಾ ಎರಡನೇ ಅಲೆ ಎಂದರೇನು?

ಕೊರೊನಾ ವೈರಸ್ ಎರಡನೇ ಅಲೆ ನಮ್ಮ ದೇಶದಲ್ಲಿ ಈಗ ಎದ್ದಿದೆ ಎಂದು ಆರೋಗ್ಯ ಇಲಾಖೆ ಹಾಗೂ ಸರ್ಕಾರ ಹೇಳುತ್ತಿದೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಹೆಚ್ಚಾಗಿದೆ. ಹೀಗಾಗಿ ಅಲ್ಲಿಂದ ನಮ್ಮ ರಾಜ್ಯಕ್ಕೆ ಬರುವವರಿಗೆ ಕೊರೊನಾ ವೈರಸ್ ಪರೀಕ್ಷೆ ಕಡ್ಡಾಯ ಮಾಡಿದ್ದಾರೆ. ಹಾಗಾದರೆ ಎರಡನೇ ಅಲೆ ಹೇಗೆ ಬರುತ್ತದೆ? ಅದು ಹೊರಗಿನಿಂದ ಬರುತ್ತದೆಯಾ? ಎಂಬುದಕ್ಕೆ ತಜ್ಞ ವೈದ್ಯರು ಸ್ಪಷ್ಟನೆ ಕೊಟ್ಟಿದ್ದಾರೆ.

ಎರಡನೇ ಅಲೆ ಬೇರೆ ಕಡೆಯಿಂದ ಬರುವುದಿಲ್ಲ. ಯಾಕೆಂದರೆ ಒಂದು ಬಾರಿ ಬಂದರೆ, ವೈರಸ್ ಎಲ್ಲೂ ಹೋಗುವುದಿಲ್ಲ. ವೈರಸ್ ಇದ್ದೆ ಇರುತ್ತದೆ. ಲಾಕ್‌ಡೌನ್ ಹಾಗೂ ಸೀಲ್‌ಡೌನ್‌ನಿಂದ ಬಹಳಷ್ಟು ಜನರಿಗೆ ಆರಂಭದಲ್ಲಿಯೇ ಸೋಂಕು ತಗುಲಿರುವುದಿಲ್ಲ. ಅಂಥವರಿಗೆ ನಂತರದ ದಿನಗಳಲ್ಲಿ ಸೋಂಕು ತಗಲುತ್ತದೆ. ಅದನ್ನು ಸೆಕೆಂಡ್ ವೇವ್ ಅಥವಾ ಎರಡನೇ ಅಲೆ ಎನ್ನುತ್ತಾರೆ. ಆದರೆ ಈಗಾಗಲೇ ನಮ್ಮ ದೇಶದಲ್ಲಿ ಶೇಕಡಾ ನೂರರಷ್ಟು ಜನರಿಗೆ ಸೋಂಕು ಬಂದು ಹೋಗಿದೆ. ಹೀಗಾಗಿ ಎರಡನೇ ಅಲೆ ಎಂಬುದು ಹಣ ಮಾಡಿಕೊಳ್ಳುವವರ ಹಬ್ಬ ಎನ್ನುತ್ತಾರೆ ಕೊರೊನಾವೈರಸ್ ಕುರಿತು ಅಧ್ಯಯನ ಮಾಡಿರುವ ಬೆಂಗಳೂರಿನ ರಾಜೂಸ್ ಹೆಲ್ದಿ ಇಂಡಿಯಾದ ಡಾ. ರಾಜು ಅವರು.

ಕೊರೊನಾ ವೈರಸ್‌ ಎಲ್ಲೂ ಹೋಗಿಲ್ಲ!

ಕೊರೊನಾ ವೈರಸ್‌ ಎಲ್ಲೂ ಹೋಗಿಲ್ಲ!

ಒಂದು ಬಾರಿ ಯಾವುದೇ ವೈರಸ್ ಬಂದರೂ ಕೂಡ ಅದು ಇಲ್ಲಿಯೇ ಉಳಿದು ಬಿಡುತ್ತದೆ. ಹೀಗಾಗಿ ಈಗ ಹೊರಗಿನಿಂದ ಎರಡನೇ ಅಲೆ ಬರುತ್ತದೆ ಎಂಬುದು ಶುದ್ಧ ಸುಳ್ಳು ಎನ್ನುತ್ತಾರೆ ತಜ್ಞ ವೈದ್ಯರು. ನಮ್ಮಲ್ಲಿ ಎಚ್‌ಐವಿ ವೈರಸ್ ಬಂದಿತ್ತು, ಅದು ಎಲ್ಲಿ ಹೋಯ್ತು? ಆಮೇಲೆ ಚಿಕನ್ ಗುನ್ಯಾ ಬಂತು ಅದು ನಮ್ಮೊಂದಿಗೆ ಇದೆ. ಡೆಂಗ್ಯೂ ವೈರಸ್‌ ಕೂಡ ಬಂತು, ಅದು ಎಲ್ಲಿ ಹೋಯ್ತು? ನಮ್ಮೊಂದಿಗೆ ಇದೆ.

ಪ್ರತಿ ಹೊಸ ವೈರಸ್ ಬಂದಾಗಲೂ ದುಡ್ಡು ಮಾಡುವಂಥವರು ಹಬ್ಬ ಮಾಡುತ್ತಾರೆ. ಡೆಂಗ್ಯೂ, ಚಿಕನ್ ಗುನ್ಯಾ ಹೆಸರಿನಲ್ಲಿ ಹಬ್ಬ ಆಯ್ತು. ಇದೀಗ ಕೊರೊನಾ ಹೆಸರಿನಲ್ಲಿ ದೊಡ್ಡ ಹಬ್ಬ ನಡೆಯುತ್ತಿದೆ, ಇದು 20 ವರ್ಷಗಳಿಗೊಮ್ಮೆ ಬರುವ ಊರ ಹಬ್ಬದಂತೆ ಆಗಿದೆ. ಎರಡನೇ ಅಲೆ ಅಥವಾ ಮೂರನೇ ಅಲೆ ಎಂಬುದು ತಾಂತ್ರಿಕವಾಗಿ ತುಂಬಾ ಮುಂದುವರೆದಿರುವ ಹಾಗೂ ದೈಹಿಕವಾಗಿ ತೀರಾ ದುರ್ಬಲವಾಗಿರುವವರ ದೇಶಗಳಲ್ಲಿ ಬರಬಹುದು. ಆದರೆ ನಮ್ಮಂತಹ ದೇಶಗಳಲ್ಲಿ ಎರಡನೇ ಹಾಗೂ ಮೂರನೇ ಅಲೆ ಬರುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಡಾ. ರಾಜು ಅವರು. ಅದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ.

ನಮ್ಮ ದೇಶದಲ್ಲಿ ಎರಡನೇ ಅಲೆ ಯಾಕಿಲ್ಲ?

ನಮ್ಮ ದೇಶದಲ್ಲಿ ಎರಡನೇ ಅಲೆ ಯಾಕಿಲ್ಲ?

ನಮ್ಮ ದೇಶದಲ್ಲಿ ಸುಮಾರು 135 ಕೋಟಿ ಜನಸಂಖ್ಯೆಯಿದೆ. ಹೀಗಾಗಿ ಮುಂದುವರೆದ ದೇಶಗಳಂತೆ ನಮ್ಮಲ್ಲಿ ಲಾಕ್‌ಡೌನ್‌ ಅಥವಾ ಸೀಲ್‌ಡೌನ್‌ ಮಾಡುವುದು ಸುಭವಲ್ಲ. ಹೀಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ, ಸುಮಾರು ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ನಮ್ಮೆಲ್ಲರಿಗೂ ಸೋಂಕು ತಗಲಿ ಆಗಿದೆ. ಆಮೇಲೆ ಎಲ್ಲರಲ್ಲಿಯೂ ರೋಗನಿರೋಧಕ ಶಕ್ತಿ ಬಂದಿದೆ.


ನಮ್ಮ ದೇಶದ ಶೇಕಡಾ 80ರಷ್ಟು ಜನರು ಅಂದರೆ ಸುಮಾರು 105 ಕೋಟಿ ಜನರು ಕಳೆದ ನವೆಂಬರ್ 2020ರ ವೇಳೆಗೆ ಸೋಂಕಿಗೆ ತುತ್ತಾಗಿ ರೋಗನಿರೋಧಕ ಶಕ್ತಿ ಪಡೆದುಕೊಂಡಿದ್ದಾರೆ. ನಂತರ ಲಾಕ್‌ಡೌನ್ ತೆರುವು ಆದಂತೆಲ್ಲ ಕಳೆದ ಜನೆವರಿ 2021ರ ಅಂತ್ಯದ ವೇಳೆಗೆ ನಮ್ಮ ದೇಶದಲ್ಲಿ ಎಲ್ಲರೂ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಪ್ರತಿಯೊಬ್ಬರು ಕೊರೊನಾವೈರಸ್‌ಗೆ ಎಕ್ಸಪೋಸ್ ಆಗಿದ್ದಾರೆ. ಹೀಗಾಗಿ ಎರಡನೇ ಅಲೆಗೆ ತುತ್ತಾಗಲು ಯಾರೂ ಉಳಿದಿಲ್ಲ ಎಂಬುದು ತಜ್ಞರ ಸ್ಪಷ್ಟನೆ.

ಇದು ಸೆಕೆಂಡ್ ವೇವ್ ಅಲ್ಲ, ಸೆಕೆಂಡ್ ಕ್ರೇವ್!

ಇದು ಸೆಕೆಂಡ್ ವೇವ್ ಅಲ್ಲ, ಸೆಕೆಂಡ್ ಕ್ರೇವ್!

ಕೊರೊನಾ ವೈರಸ್ ಎರಡನೇ ಅಲೆ ನಮ್ಮ ದೇಶದಲ್ಲಿ ಬರಲು ಸಾಧ್ಯವೇ ಇಲ್ಲ ಎನ್ನುವ ತಜ್ಞ ವೈದ್ಯರು. ಎರಡನೇ ಅಲೆ ಬರಲು ಸಾಧ್ಯತೆಯಿದೆ, ಆದರೆ ಅದನ್ನು ಸೆಕೆಂಡ್ ವೇವ್ ಅಂತಾ ಕರೆಯಬಾರದು ಸೆಕೆಂಡ್ ಕ್ರೇವ್ ಎಂದು ಕರೆಯಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಸೆಕೆಂಡ್ ಕ್ರೇವ್ ಅಂದರೆ ಕ್ರೇವಿಂಗ್ ಫಾರ್ ಮನಿ. ಕೊರೊನಾ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಮಾಡಿಕೊಂಡವರ ಆದಾಯ ಸೋಂಕಿತರು ಕಡಿಮೆ ಆಗುತ್ತಿದ್ದಂತೆಯೆ ಕಡಿಮೆ ಆಗಿದೆ.

ಈಗಂತೂ ಕೊರೊನಾದಿಂದ ಬರುತ್ತಿದ್ದ ಆದಾಯ ಶೂನ್ಯಕ್ಕೆ ಇಳಿದಿದೆ. ಹೀಗಾಗಿ ದುಡ್ಡು ಮಾಡುವವರು ಈ ಸೆಕೆಂಡ್ ವೇವ್ ಅಂತಾ ಭಯವನ್ನು ಸೃಷ್ಟಿ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ನಮ್ಮ ದೇಶದಲ್ಲಿ ಎರಡನೇ ಅಲೆ ಅಥವಾ ಮತ್ತೆ ಮರು ಸೋಂಕು ತಗಲುವುದು ಸಾಧ್ಯವೇ ಇಲ್ಲ. ಭಯ ಬಿದ್ದರೆ ಸಾವು ಖಂಡಿತ ಎನ್ನುತ್ತಾರೆ ಕೊರೊನಾ ತಜ್ಞ ವೈದ್ಯ ಡಾ. ರಾಜು ಅವರು.

ಕರ್ನಾಟಕದಲ್ಲಿ ಕಡಿಮೆಯಾಗಿದೆ ಸೋಂಕು

ಕರ್ನಾಟಕದಲ್ಲಿ ಕಡಿಮೆಯಾಗಿದೆ ಸೋಂಕು

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಗಳ ಸಂಖ್ಯೆ 400ಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 386 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಜೊತೆಗೆ ದಿನದಲ್ಲಿ 291 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಸರ್ಕಾರದ ಅಂಕಿ-ಅಂಶಗಳೇ ಈ ವಿಷಯವನ್ನು ಅಧಿಕೃತವಾಗಿ ಹೇಳುತ್ತಿವೆ. ಆದರೂ ಎರಡನೇ ಅಲೆಯ ಆತಂಕವನ್ನೂ ಸೃಷ್ಟಿಸಲಾಗುತ್ತಿದೆ.


ದೇಶದಲ್ಲಿ 24 ಗಂಟೆಗಳಲ್ಲಿ 13,193 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ ಶುಕ್ರವಾರ ಸಂಜೆಯವರೆಗೆ ಆಸ್ಪತ್ರೆಗಳಿಂದ 10,896 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ. ಪರಿಸ್ಥಿತಿ ಹೀಗಿರುವಾಗ ಎರಡನೇ ಹಣ ಮಾಡಿಕೊಳ್ಳುವ ಅಲೆಗೆ ಯಾರೂ ಕಿವಿಗೊಡಬಾರದು ಎಂಬುದು ತಜ್ಞರ ಸಲಹೆಯಾಗಿದೆ.

English summary
Second wave of coronavirus to hit Karnataka, after the Covid cases rise in Kerala and Maharashtra states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X