ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಣ್ಣೆ ಪಾರ್ಟಿಗಳಿಗೆ ಗುಡ್ ನ್ಯೂಸ್ : ವ್ಯಾಕ್ಸಿನ್ ಹಾಕಿಸಿಕೊಂಡು ಎಣ್ಣೆ ಹೊಡೆದ್ರೂ ಏನಾಗಲ್ಲ !

|
Google Oneindia Kannada News

ಬೆಂಗಳೂರು, ಮೇ. 17: ಸರ್ಕಾರ ನಡೆಯೋದೇ ಕುಡುಕರು ಕಟ್ಟುವ ತೆರಿಗೆಯಿಂದ. ವ್ಯಾಕ್ಸಿನ್ ತಗೊಂಡ್ರೆ ಎಣ್ಣೆ ಹೊಡೋಯಕೆ ಆಗಲ್ಲ. ವ್ಯಾಕ್ಸಿನ್ ತಗೊಂಡು ಎಣ್ಣೆ ಕುಡಿದ್ರೆ ಲಿವರ್ ಡ್ಯಾಮೇಜ್ ಆಗಿಬಿಡುತ್ತೆ ಎನ್ನುವ ಗಾಳಿ ಮಾತು ನಂಬಿ ಬಹುತೇಕ ಎಣ್ಣೆ ಪ್ರಿಯರು ಕೊರೊನಾ ಲಸಿಕೆ ಹಾಕಿಸಿಕೊಳ್ಳದೇ ದೂರ ಉಳಿದಿದ್ದಾರೆ. ನಿಜವಾಗಿಯೂ ಎಣ್ಣೆ ಹೊಡೆಯುವರು ಲಸಿಕೆ ತಗೊಂಡ್ರೆ ಏನಾದರೂ ತೊಂದರೆ ಆಗುತ್ತಾ ? ವೈದ್ಯರೊಬ್ಬರು ಹೇಳಿದ ಅಸಲಿ ಸತ್ಯ ಇಲ್ಲಿದೆ ನೋಡಿ !

Recommended Video

Vaccination ಆದ ಬಳಿಕ ಎಣ್ಣೆ ಹೊಡೆದರೆ ತೊಂದರೆ ಇಲ್ಲ | Oneindia Kannada

ರಾಜ್ಯದಲ್ಲಿ ಕುಡುಕರದ್ದು ಹೇಳತೀರದ ಕಷ್ಟ. ಕೊರೊನಾ ಮೊದಲ ಅಲೆ ಬಂದಾಗ ಸರ್ಕಾರ ಸಂಪೂರ್ಣ ಲಾಕ್ ಡೌನ್ ಆಗಿತ್ತು. ಬಾರ್ ಮತ್ತು ವೈನ್ ಶಾಪ್ ಗಳು ಪೂರ್ತಿ ಬಂದ್ ಆಗಿದ್ದವು. ಹೀಗಾಗಿ 100 ರೂಪಾಯಿ ಮದ್ಯವನ್ನು 1 ಸಾವಿರ ರೂ. ಪಾವತಿಸಿ ಬ್ಲಾಕ್‌ನಲ್ಲಿ ಖರೀದಿ ಮಾಡಿದ್ದರು. ಸರ್ಕಾರ ಕುಡುಕರ ಕಷ್ಟ ನೋಡಲಾಗದೆ, ಈ ಸಲ ಸರ್ಕಾರ ಕೂಡ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದೆ. ಸರ್ಕಾರ ನಡೆಯಬೇಕಾದರೆ ರಾಜ್ಯದಿಂದ ಮದ್ಯ ಮಾರಾಟದ ಆದಾಯ ಕೂಡ ಮುಖ್ಯ. ಮದ್ಯದ ಆದಾಯ ನೆಚ್ಚಿಕೊಂಡಿರುವ ಕಾರಣ ಸರ್ಕಾರ ಲಾಕ್ ಡೌನ್ ನಡುವೆಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಈ ಸಲ ಬ್ಲಾಕ್ ಮಾರಾಟ ದಂಧೆಗೆ ಅವಕಾಶ ನೀಡದೆ ಪುಣ್ಯ ಕಟ್ಟಿಕೊಂಡಿದೆ.

ಇನ್ನು ಎಣ್ಣೆ ಪ್ರಿಯರು ಲಸಿಕೆ ತಗೊಂಡ್ರೆ ತುಂಬಾ ತೊಂದರೆ ಆಗುತ್ತಂತೆ. ಲಸಿಕೆ ತಗೊಂಡ್ರೆ ತಿಂಗಳಾನುಗಟ್ಟಲೇ ಎಣ್ಣೆ ಕುಡಿಯಬಾರದಂತೆ ಎಂಬ ಮಾತುಗಳಿಂದಲೇ ಶೇ. 90 ರಷ್ಟು ಕುಡುಕರು ಲಸಿಕೆ ಮೊರೆಯೇ ಹೋಗದೇ ನಿರ್ಲಕ್ಷ್ಯತೆ ವಹಿಸಿದ್ದಾರೆ. ವಿಚಿತ್ರವೆಂದರೆ ಎಣ್ಣೆ ಪ್ರಿಯ ಅಧಿಕಾರಿಗಳು ಕೂಡ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿಲ್ಲ. ಆದರೆ ಯಾವಾಗ ಕೊರೊನಾ ಎರಡನೇ ಅಲೆ ತನ್ನ ಶಕ್ತಿ ತೋರಿತೋ ಲಸಿಕೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇಷ್ಟಾಗಿಯೂ ಕುಡುಕರು ಮಾತ್ರ ಗೊಂದಲಕ್ಕೆ ಒಳಗಾಗಿದ್ದಾರೆ. ಇಷ್ಟು ದಿನ ಕುಡಿದಿದ್ದೀವಿ. ಲಸಿಕೆ ತಗೊಂಡ್ರೆ ಏನಾದರೂ ಸಮಸ್ಯೆ ಆಗಬಹುದಾ ಎಂಬ ಭಯದಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ.

Is Corona vaccine is safe for regular drinkers? Here is experts advice

ಆದರೆ, ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರು ಹೇಳಿದ ಪ್ರಕಾರ, ಎಣ್ಣೆಗೂ ಲಸಿಕೆಗೂ ಸಂಬಂಧವೇ ಇಲ್ಲ. ಎಣ್ಣೆ ಪ್ರಿಯರು ಲಸಿಕೆ ಹಾಕಿಸಿಕೊಂಡರೆ ತಿಂಗಳಾನುಗಟ್ಟಲೇ ಕುಡಿಯಬಾರದು, ಲಸಿಕೆ ಹಾಕಿಸಿಕೊಂಡು ಕುಡಿದು ಬಿಟ್ಟರೆ ಆರೋಗ್ಯ ಕೆಡುತ್ತೆ ಎಂಬೆಲ್ಲಾ ಮಾತುಗಳು ಹುಟ್ಟುಕೊಂಡಿವೆ. ವೈಜ್ಞಾನಿಕವಾಗಿ ಲಸಿಕೆ ಹಾಕಿಸಿಕೊಳ್ಳುವುದರಿಂದ ಕುಡುಕರಿಗೆ ಏನೂ ಸಮಸ್ಯೆ ಆಗುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ಲಸಿಕೆ ಹಾಕಿಸಿಕೊಂಡು ಹೋಗಿ ಕುಡಿದು ಬಂದಿದ್ದಾರೆ. ಅವರೆಲ್ಲರೂ ಚೆನ್ನಾಗಿಯೇ ಇದ್ದಾರೆ. ವದಂತಿಗಳನ್ನು ನಂಬಿ ಲಸಿಕೆ ಹಾಕಿಸಿಕೊಳ್ಳದೇ ಇರುವುದು ತಪ್ಪು ಎಂದು ಸಲಹೆ ಮಾಡಿದ್ದಾರೆ ಈ ಮೂಲಕ ಕುಡುಕರು ತಪ್ಪದೇ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಕುಡುಕರ ದೇಹದಲ್ಲಿ ಶಕ್ತಿ ಕಡಿಮೆ ಇರುತ್ತದೆ. ಮೊದಲು ಆದ್ಯತೆಯಾಗಿ ಅವರು ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದಾರೆ.

Is Corona vaccine is safe for regular drinkers? Here is experts advice

ಇನ್ನು ಜೀವಕ್ಕಿಂತಲೂ ದೊಡ್ಡದು ಮದ್ಯವಲ್ಲ. ಆದರೆ ವ್ಯಾಕ್ಸಿನ್ ಹಾಕಿಸಿಕೊಂಡು ಮೂರ್ನಾಲ್ಕು ದಿನ ಕುಡಿತದಿಂದ ದೂರ ಇರುವುದು ಅತಿ ಉತ್ತಮ. ಆಕಸ್ಮಿಕ ಚಟಕ್ಕೆ ಬಿದ್ದು ಕುಡಿದರೂ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗಲ್ಲ. ಅಪ ಪ್ರಚಾರದಿಂದಲೇ ಬಹುತೇಕರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿಲ್ಲ. ಇದೀಗ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಸುಳ್ಳು ಮಾತು ನಂಬಿ ಯಾರೂ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ದೂರ ಉಳಿಯಬಾರದು. ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಒಳಿತು ಎಂದು ತಜ್ಞ ವೈದ್ಯರು ಸಲಹೆ ಮಾಡಿದ್ದಾರೆ.

English summary
Can drunkers take the corona vaccine know more?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X