ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ ನಮ್ಮ ಹಕ್ಕೋ ಅಥವಾ ಮಾತೆ ಮಹಾದೇವಿಯರದ್ದೋ?

|
Google Oneindia Kannada News

Recommended Video

Karnataka Elections 2018 : ಕಾಂಗ್ರೆಸ್ ಗೆ ವೋಟ್ ಹಾಕುವಂತೆ ಲಿಂಗಾಯತರಿಗೆ ಆದೇಶ ಹೊರಡಿಸಿದ ಮಾತೆ ಮಹಾದೇವಿ

ಪ್ರತೀ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ದೇಶದ ಸಮಸ್ತ ಮುಸ್ಲಿಂ ಬಾಂಧವರಿಗೆ ಇಂತದ್ದೇ ಪಕ್ಷಕ್ಕೆ ಮತಹಾಕಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಇಮಾಂ ಸೂಚನೆ ನೀಡುವ ಪದ್ದತಿಯಿದೆ. ಇಮಾಂ ಹೊರಡಿಸುವ ಫರ್ಮಾನ್ ಅನ್ನು ಆ ಸಮುದಾಯದವರು ಕಟ್ಟುನಿಟ್ಟಾಗಿ ಪಾಲಿಸುತ್ತಾರಾ, ಅಲ್ಲಾನೇ ಬಲ್ಲ..

ಈಗ ಇದೇ ರೀತಿಯ ಫರ್ಮಾನನ್ನು ಬಸವಧರ್ಮದ ಪೀಠಾಧ್ಯಕ್ಷೆ ಮತ್ತು ಭಕ್ತಕೋಟಿಗಳಿಂದ "ಪ್ರಥಮ ಮಹಿಳಾ ಜಗದ್ಗುರು" ಎಂದು ಗುರುತಿಸಲ್ಪಡುವ ಮಾತೆ ಮಹಾದೇವಿ, ಸಮಸ್ತ ಲಿಂಗಾಯತ ಸಮುದಾಯದವರಿಗೆ ಕಾಂಗ್ರೆಸ್ಸಿಗೆ ಬೆಂಬಲ ನೀಡಿ ಎಂದು ಬಹಿರಂಗವಾಗಿ 'ಧಾರ್ಮಿಕ' ಆದೇಶ ಹೊರಡಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಕಾಂಗ್ರೆಸ್ಸಿಗೆ ಮತ ಹಾಕುವಂತೆ ಮಾತೆ ಮಹಾದೇವಿ ಕರೆಕಾಂಗ್ರೆಸ್ಸಿಗೆ ಮತ ಹಾಕುವಂತೆ ಮಾತೆ ಮಹಾದೇವಿ ಕರೆ

ಭಾರತದ ಸಂವಿಧಾನದಲ್ಲಿ ಮತದಾನ ಎನ್ನುವುದು ಗೌಪ್ಯವಾಗಿ ಇರತಕ್ಕದ್ದಂತದ್ದು ಮತ್ತು ಯಾರಿಗೆ ಮತ ನೀಡಬೇಕು ಎನ್ನುವುದು ಮತದಾರರ ವಿವೇಚನೆಗೆ ಬಿಟ್ಟದ್ದು. ಹೀಗಿದ್ದರೂ, ಮಾತೆ ಮಹಾದೇವಿಯವರ ಒಂದು ಪಕ್ಷದ ಪರವಾಗಿನ 'ಧರ್ಮ ರಾಜಕಾರಣ' ದಿಂದಾಗಿ ಚುನಾವಣೆಯ ವೇಳೆ ಇದಕ್ಕೆ ರಾಜಕೀಯ ಬಣ್ಣ ಬರದೇ ಇರುತ್ತಾ?

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಅಸಲಿಗೆ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಿದ್ದ ಕೆಲವು ಪೀಠಾಧಿಪತಿಗಳೇ ಮಾತೆ ಮಹಾದೇವಿಯವರ ಕಾಂಗ್ರೆಸ್ ಪರ ನಿಲುವಿಗೆ ಅಪಸ್ವರ ಎತ್ತಿ, ಇದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ. ರಾಜ್ಯ ಸರಕಾರ ಅನುಮೋದಿಸಿದ ಕೂಡಲೇ ಕೇಂದ್ರಕ್ಕೆ ಇದರ ಬಗ್ಗೆ ನಿರ್ಧಾರ ತೆಗೆದೆಕೊಳ್ಳಲು, ಅಧ್ಯಯನ ನಡೆಸುವುವ ಅವಶ್ಯಕತೆ ಇರುವುದಿಲ್ಲವೇ? ಇದೇನು ಸಣ್ಣ ವಿಷಯವೇ ಎನ್ನುವ ಮಾತೂ ಕೇಳಿಬರುತ್ತಿದೆ.

ಸಿದ್ದು ಪ್ರತ್ಯೇಕ ಲಿಂಗಾಯತ ತಂತ್ರಕ್ಕೆ ಅಮಿತ್ ಶಾ ವೀರಶೈವ ಪ್ರತಿತಂತ್ರ?ಸಿದ್ದು ಪ್ರತ್ಯೇಕ ಲಿಂಗಾಯತ ತಂತ್ರಕ್ಕೆ ಅಮಿತ್ ಶಾ ವೀರಶೈವ ಪ್ರತಿತಂತ್ರ?

ಕೇಂದ್ರಕ್ಕೆ ಯಾವುದೇ ಶಿಫಾರಸು ಬಂದಿಲ್ಲ ಎಂದು ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ, ಬಿಜೆಪಿ ಇದರಲ್ಲಿ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ, ಯಡಿಯೂರಪ್ಪ ಮೌನವಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರನ್ನು ಬೆಂಬಲಿಸುವುದಕ್ಕೆ ಕರೆ ನೀಡಿದ್ದೇವೆ ಎಂದು ಲಿಂಗಾಯತ ಜಾಗತಿಕ ಮಹಾಸಭಾದಲ್ಲಿ ಮಾತೆ ಮಹಾದೇವಿಯವರು ಹೇಳಿದ್ದಾರೆ. ಮುಂದೆ ಓದಿ..

ಸರಕಾರದ ಸ್ಪಂದನೆಗೆ ಚುನಾವಣಾ ಸಮಯವೇ ಆಗಬೇಕಿತ್ತೇ?

ಸರಕಾರದ ಸ್ಪಂದನೆಗೆ ಚುನಾವಣಾ ಸಮಯವೇ ಆಗಬೇಕಿತ್ತೇ?

ಪ್ರತ್ಯೇಕ ಧರ್ಮ ಎನ್ನುವ ವಿಚಾರ ದಶಕಗಳಿಂದ ಇರುವ ಕೂಗು ಎನ್ನುವುದನ್ನು ಒಪ್ಪಿಕೊಳ್ಳಬಹುದಾದರೂ, ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎನ್ನುವ ಹಳೆಯ ಮನವಿಗೆ ನಾವು ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಸರಕಾರದ ಸ್ಪಂದನೆಗೆ ಚುನಾವಣಾ ಸಮಯವೇ ಆಗಬೇಕಿತ್ತೇ? ಇದು ರಾಜಕೀಯ ನಡೆಯಲ್ಲವೇ ಎನ್ನುವ ತಮ್ಮದೇ ಸಮುದಾಯದವರ ಪ್ರಶ್ನೆಗೆ ಮಾತೆ ಮಹಾದೇವಿ ಉತ್ತರಿಸಬೇಕಿದೆ.

ಒಂದು ಪಕ್ಷಕ್ಕೆ ಮತನೀಡಿ ಎನ್ನುವ ಹಕ್ಕನ್ನು ಮಾತೆಗೆ ನೀಡಿದವರಾರು

ಒಂದು ಪಕ್ಷಕ್ಕೆ ಮತನೀಡಿ ಎನ್ನುವ ಹಕ್ಕನ್ನು ಮಾತೆಗೆ ನೀಡಿದವರಾರು

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಒಲವು, ವಿರೋಧ ಎರಡೂ ಇರುವುದರಿಂದ ಒಂದು ಪಕ್ಷಕ್ಕೆ ಮತನೀಡಿ ಎನ್ನುವ ಹಕ್ಕನ್ನು ಮಾತೆ ಮಹಾದೇವಿಯವರಿಗೆ ನೀಡಿದವರಾರು ಎನ್ನುವುದೇ ಆ ಸಮುದಾಯದಲ್ಲಿ ಗಾಢವಾಗಿ ಕೇಳಿ ಬರುತ್ತಿರುವ ಪ್ರಶ್ನೆ. ಏಕೆಂದರೆ ಪ್ರತ್ಯೇಕ ಧರ್ಮದ ಪರ, ವಿರೋಧ ಹೋರಾಟಗಳು ಇದುವರೆಗೆ ಪಕ್ಷಾತೀತವಾಗಿ ನಡೆದುಕೊಂಡು ಬಂದಿರುವಂತದ್ದು.

ಅಳಿಯ ಅಲ್ಲ ಮಗಳ ಗಂಡ ಎನ್ನುವ ಹಾಗೆ

ಅಳಿಯ ಅಲ್ಲ ಮಗಳ ಗಂಡ ಎನ್ನುವ ಹಾಗೆ

ಲಿಂಗಾಯತ ಮಹಾಸಭಾದಲ್ಲಿ ಕಾಂಗ್ರೆಸ್‌ ಬೆಂಬಲಿಸಬೇಕು ಎನ್ನುವ ನಿರ್ಧಾರ ತೆಗೆದುಕೊಂಡಿಲ್ಲ. ಯಾರು ಪ್ರತ್ಯೇಕ ಧರ್ಮ ರಚನೆಗೆ ಬೆಂಬಲ ನೀಡುತ್ತಾರೋ, ಅವರಿಗೆ ಬೆಂಬಲ ಕೊಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿದ್ದ ಎಸ್‌.ಎಂ. ಜಾಮದಾರ ಹೇಳಿದ್ದಾರೆ. ಇದೊಂದು ರೀತಿ ಅಳಿಯ ಅಲ್ಲ ಮಗಳ ಗಂಡ ಎನ್ನುವ ಹಾಗಾಯಿತು.

ಗಂಡಸು ಅಂದರೆ ಗಂಡಸು, ಅದು ನಮ್ಮ ಸಿದ್ದರಾಮಯ್ಯ

ಗಂಡಸು ಅಂದರೆ ಗಂಡಸು, ಅದು ನಮ್ಮ ಸಿದ್ದರಾಮಯ್ಯ

ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ತುರ್ತಾಗಿ ಕರೆದ ಸಭೆಯಲ್ಲಿ ಭಾಗವಹಿಸಿದ್ದ ಸಾರಂಗ ಮಠದ ಪೀಠಾಧಿಪತಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗಂಡಸು ಅಂದರೆ ಗಂಡಸು, ಅದು ನಮ್ಮ ಸಿದ್ದರಾಮಯ್ಯನವರು ಎನ್ನುವ ಹೇಳಿಕೆಯನ್ನು ನೀಡಿದ್ದರು. ಮಾತೆ ಮಹಾದೇವಿಯವರ ಮತ್ತು ಇತರ ಸ್ವಾಮೀಜಿಗಳ ಕಾಂಗ್ರೆಸ್ ಪರ ನಿಲುವು ಚುನಾವಣಾ 'ಕೋಡ್ ಆಫ್ ಕಂಡಕ್ಟ್' ಅಡಿಯಲ್ಲಿ ಬರುವುದಿಲ್ಲವೇ ಎನ್ನುವುದಿಲ್ಲಿ ಪ್ರಶ್ನೆ.

ಧಾರ್ಮಿಕ ಮುಖಂಡರು ಇಂತಹ ಪಕ್ಷಕ್ಕೆ ಮತನೀಡಿ ಎಂದು ಫರ್ಮಾನು

ಧಾರ್ಮಿಕ ಮುಖಂಡರು ಇಂತಹ ಪಕ್ಷಕ್ಕೆ ಮತನೀಡಿ ಎಂದು ಫರ್ಮಾನು

ಮತದಾನ ನಮ್ಮ ಹಕ್ಕು, ಯಾರಿಗೆ ಮತನೀಡಬೇಕು ಎನ್ನುವುದೂ ನಮ್ಮ ಹಕ್ಕು. ಹೀಗಿರುವಾಗ ಧಾರ್ಮಿಕ ಮುಖಂಡರು ಇಂತಹ ಪಕ್ಷಕ್ಕೆ ಮತನೀಡಿ ಎಂದು ಫರ್ಮಾನು ಹೊರಡಿಸುವುದಕ್ಕೂ, ಮತದಾನದ ಹಿಂದಿನ ದಿನ ಹಣಹೆಂಡ ಹಂಚಿ ವೋಟು ಹಾಕಿಸಿಕೊಳ್ಳುವ ರಾಜಕಾರಣಿಗಳಿಗೂ ಏನೂ ವ್ಯತ್ಯಾಸಕಾಣದು.

English summary
Is casting of votes is our rights or Mate Mahadevi of Basava Dharma Peetha? This question is raised after Mate Mahadevi openly announced that, "Siddaramaiah has supported our demand, we will support him and asked all the people to support Congress"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X