ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓರ್ವ ಶಂಕಿತ ಉಗ್ರನಿಗೆ ಜಾಮೀನು, ಮತೊಬ್ಬನಿಗೆ ನಿರಾಕರಣೆ..!

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಮೇ 19. ಕರ್ನಾಟಕದಲ್ಲಿ "ಐಎಸ್ ಬೆಂಗಳೂರು ಮಾದರಿ ಪ್ರಕರಣ'' ಎಂದು ಕರೆಯಲ್ಪಡುವ ಕೇಸ್ ನಲ್ಲಿ ಹೈಕೋರ್ಟ್ ಒರ್ವ ಶಂಕಿತ ಉಗ್ರನಿಗೆ ಜಾಮೀನು ನೀಡಿದ್ದರೆ, ಮತ್ತೊರ್ವನಿಗೆ ಜಾಮೀನು ನೀಡಲು ನಿರಾಕರಣೆ ಮಾಡಿದೆ.

ನ್ಯಾಯಾಲಯ ಅಲ್-ಹಿಂದ್ ಗುಂಪಿನ ಸದಸ್ಯನಿಗೆ ಜಾಮೀನು ಮಂಜೂರು ಮಾಡಿದೆ ಮತ್ತು ಎರಡು ವರ್ಷಗಳ ಹಿಂದಿನ ಪ್ರಕರಣದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್) ನೊಂದಿಗೆ ಸಂಪರ್ಕ ಹೊಂದಿದ್ದ ಎಂದು ಆರೋಪಿಲಾಗಿರುವ ಮತ್ತೊಬ್ಬ ಸದಸ್ಯನಿಗೆ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದೆ.

ಕೋಲಾರದ ರಹಮತ್ ನಗರದ ಸಲೀಂಖಾನ್ (27) ಮತ್ತು ಬೆಂಗಳೂರಿನ ಹೊಸಗುರಪ್ಪನಪಾಳ್ಯದ ಮೊಹಮ್ಮದ್ ಝೈದ್ (32) ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾ. ಎಸ್.ರಾಚಯ್ಯ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದೆ.

 IS Bangalore Module case: HC grants bail to one accused and rejected bail for another accused

"ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ)ಯಡಿ ಘೋಷಿಸಲಾದ ಶೆಡ್ಯೂಲ್ಡ್ ನಿಷೇಧಿತ ಸಂಘಟನೆಯಲ್ಲದ ಅಲ್-ಹಿಂದ್ ಗುಂಪಿನ ಸದಸ್ಯರಾಗುವುದು ಮತ್ತು ಅದರ ಸಭೆಗಳಿಗೆ ಹಾಜರಾಗುವುದು ಮತ್ತು ಜಿಹಾದಿ ಸಭೆಗಳಲ್ಲಿ ಭಾಗವಹಿಸುವುದು, ತರಬೇತಿ ಸಾಮಗ್ರಿಗಳನ್ನು ಖರೀದಿಸುವುದು ಮತ್ತು ಸಹ-ಸದಸ್ಯರಿಗೆ ಆಶ್ರಯ ಕಲ್ಪಿಸುವುದು ಯುಎಪಿಎ ಕಾಯಿದೆಯ ಸೆಕ್ಷನ್ 2(ಕೆ) ಅಥವಾ ಸೆಕ್ಷನ್ 2(ಎಂ)ನ ನಿಬಂಧನೆಗಳ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗದು'' ಎಂದು ನ್ಯಾಯಾಲಯ ಹೇಳಿದೆ.

ಹಾಗೂ ನ್ಯಾಯಾಲಯವು ಖಾನ್‌ಗೆ ಜಾಮೀನು ಮಂಜೂರು ಮಾಡಿದೆ. ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿರುವ ಅಂಶಗಳು ಯುಎಪಿಎ ಕಾಯ್ದೆಯಡಿಯಲ್ಲಿ ನಿಷೇಧಿಸಲಾಗಿರುವ ಯಾವುದೇ ಸಂಸ್ಥೆಗಳೊಂದಿಗೆ ಖಾನ್ ಸಂಪರ್ಕ ಹೊಂದಿದ್ದಾರೆಂಬುದನ್ನು ಸೂಚಿಸುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಆದರೂ ಸಹ ಝೈದ್ ಪ್ರಕರಣದಲ್ಲಿ ಆರೋಪಪಟ್ಟಿಯಂತೆ ಭಯೋತ್ಪಾದಕ ಗುಂಪಿನ ಸದಸ್ಯನಾಗಿ ಅಪರಾಧದಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಮತ್ತು ಅಪರಾಧ ಕೃತ್ಯಕ್ಕಾಗಿ ಇತರ ಆರೋಪಿಗಳೊಂದಿಗೆ ಪಿತೂರಿ ನಡೆಸುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ ಮತ್ತು ಅಪರಿಚಿತ ಐಎಸ್ ಭಾಗಿದಾರರನ್ನು ಸಂಪರ್ಕಿಸಲು ಆತ ಪ್ರಮುಖ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಾನೆ" ಎಂದು ನ್ಯಾಯಾಲಯ ಹೇಳಿದೆ.

ಜೊತೆಗೆ ಜೈದ್ ಇತರ ಕೆಲವು ಆರೋಪಿಗಳಿಗೆ ಡಾರ್ಕ್ ವೆಬ್ ಕಾರ್ಯಾಚರಣೆಗಳನ್ನು ಕಲಿಸಿದ್ದಾನೆ ಮತ್ತು ಅಲ್-ಹಿಂದ್ ಗುಂಪಿನ ಸದಸ್ಯರಿಗೆ ನಕಲಿ ಆಧಾರ್ ಅನ್ನು ಸಿದ್ಧಪಡಿಸಿದ್ದನು, ಭಾರತದಲ್ಲಿ ಐಎಸ್ ಚಟುವಟಿಕೆಗಳನ್ನು ಮುಂದುವರಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ಡಾರ್ಕ್ ವೆಬ್ ಮೂಲಕ ಐಎಸ್ ಭಾಗಿದಾರರೊಂದಿಗೆ ಸಂವಹನ ನಡೆಸಲು ಇನ್ನೊಬ್ಬ ಆರೋಪಿಗೆ ಸಹಾಯ ಮಾಡಿದ್ದನ್ನು ಸಹ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ದೆಹಲಿಯ ಎನ್‌ಐಎ ದಾಖಲಿಸಿದ ಇದೇ ರೀತಿಯ ಮತ್ತೊಂದು ಭಯೋತ್ಪಾದನಾ ಚಟುವಟಿಕೆ ಪ್ರಕರಣದಲ್ಲಿ ಜೈದ್ ಆರೋಪಿಯಾಗಿದ್ದಾನೆ ಎಂಬುದನ್ನೂ ಸಹ ಕೋರ್ಟ್ ಗಮನಿಸಿ, ಜಾಮೀನು ನಿರಾಕರಣೆಗೆ ಕಾರಣ ನೀಡಿದೆ.

Recommended Video

Rinku Singh ಆಟ ಕಡೆಗೆ ಯಾವ ರೀತಿ ಬದಲಾಯ್ತು | Oneindia Kannada

English summary
IS Bangalore Module case: HC grants bail to one accused and rejected bail for another accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X