• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಕರೆದಿದ್ದ ಡಿನ್ನರ್ ಪಾರ್ಟಿಯಲ್ಲಿ, ಅಮಿತ್ ಶಾ ಕಡೆಯ ಜಾಸೂಸ್ ಯಾರು?

|

ಬೆಂಗಳೂರು, ಸೆ 26: ವಿರೋಧ ಪಕ್ಷ ಕಾಂಗ್ರೆಸ್, ಯಡಿಯೂರಪ್ಪ ನೇತೃತ್ವದ ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಿದ ನಂತರ, ಸಿಎಂ, ಬಿಜೆಪಿ ಶಾಸಕರಿಗೆ ಶುಕ್ರವಾರ (ಸೆ 25) ಡಿನ್ನರ್ ಪಾರ್ಟಿ ಆಯೋಜಿಸಿದ್ದರು.

ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆ ಶನಿವಾರ ನಡೆಯುವುದರಿಂದ, ಒಗ್ಗಟ್ಟಿನ ಮಂತ್ರವಾಗಿ ಯಡಿಯೂರಪ್ಪ ಕರೆದಿದ್ದ ಪಾರ್ಟಿಯಲ್ಲಿ ಬಿಜೆಪಿಯ ನೂರಕ್ಕೂ ಹೆಚ್ಚು ಶಾಸಕರು ಹಾಜರಿದ್ದರು. ವಿಶೇಷ ಆಹ್ವಾನಿತರಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದರು.

ರಾತ್ರೋರಾತ್ರಿ ಬದಲಾದ ತಂತ್ರಗಾರಿಕೆ: ಅವಿಶ್ವಾಸ ನಿರ್ಣಯದ ಹಿಂದೆ ಕಾಂಗ್ರೆಸ್ಸಿನ ಅಸಲಿಯತ್ತೇ ಬೇರೆ

ಮುಖ್ಯಮಂತ್ರಿಗಳು ಕರೆದಿದ್ದ ಡಿನ್ನರ್ ಪಾರ್ಟಿಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಅರಿಯಲು, ಪಕ್ಷದ ವರಿಷ್ಠರು, ತಮಗೆ ಬೇಕಾದವರು ಒಬ್ಬರನ್ನು ಕಳುಹಿಸಿದ್ದರು ಎನ್ನುವ ಸುದ್ದಿ, ಬಿಜೆಪಿ ಪಡಶಾಲೆಯಲ್ಲಿ ಹರಿದಾಡುತ್ತಿದೆ.

ಗೊತ್ತುವಳಿಯಲ್ಲಿ ಸರಕಾರಕ್ಕೆ ಧ್ವನಿಮತದಲ್ಲಿ ಗೆಲುವು ಸಿಗುತ್ತದೆ ಎನ್ನುವುದು ಸದ್ಯದ ಲೆಕ್ಕಾಚಾರವಾದರೂ, ಕೊರೊನಾ ಇರಲಿ, ಬಿಡಲಿ, ಬೆಂಗಳೂರು ಬಿಟ್ಟು ಹೋಗಬಾರದೆಂದು, ಬಿಜೆಪಿ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ!

ಕಳೆದ ಲೋಕಸಭಾ ಚುನಾವಣೆ

ಕಳೆದ ಲೋಕಸಭಾ ಚುನಾವಣೆ

ಚುನಾವಣೆಯ ವೇಳೆ, ಹೆಚ್ಚಾಗಿ ಯಾವುದೇ ಪಕ್ಷಗಳಿರಲಿ, ಆಂತರಿಕ ಸಮೀಕ್ಷೆಯನ್ನು ನಡೆಸುವ ಪದ್ದತಿಯಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆಯೂ, ಕರ್ನಾಟಕ ಬಿಜೆಪಿ ಘಟಕ ಸಮೀಕ್ಷೆ ನಡೆಸಿದ್ದರೆ, ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾ, ತಮ್ಮದೇ ಮೂಲದಿಂದ ಸಮೀಕ್ಷೆ ನಡೆಸಿ, ವರದಿಯನ್ನು ತರೆಸಿಕೊಂಡಿದ್ದರು.

ರಾಜ್ಯ ಬಿಜೆಪಿ ಘಟಕ

ರಾಜ್ಯ ಬಿಜೆಪಿ ಘಟಕ

ರಾಜ್ಯ ಬಿಜೆಪಿ ಘಟಕದ ಮುಖಂಡರ ಮೇಲೆ, ಯಡಿಯೂರಪ್ಪನವರ ಮೇಲೆ, ಅಮಿತ್ ಶಾಗೆ ನಂಬಿಕೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಶುಕ್ರವಾರ ನಡೆದ, ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಿದ್ದ ಡಿನ್ನರ್ ಪಾರ್ಟಿಯಲ್ಲೂ ಅಮಿತ್ ಶಾ ಕಡೆಯವರು ಒಬ್ಬರಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ.

ಬಿಜೆಪಿಯ ಡಿನ್ನರ್ ಪಾರ್ಟಿ

ಬಿಜೆಪಿಯ ಡಿನ್ನರ್ ಪಾರ್ಟಿ

ಬಿಜೆಪಿಯ ಈ ಡಿನ್ನರ್ ಪಾರ್ಟಿಯಲ್ಲಿ ನಡೆಯುವ ಬೆಳವಣಿಗೆಯ ಬಗ್ಗೆ ಬಿಜೆಪಿ ವರಿಷ್ಠರು ನಿಗಾ ವಹಿಸಲು ತಮ್ಮಾಪ್ತರಿಗೊಬ್ಬರಿಗೆ ಸೂಚಿಸಿದ್ದರು. ಜೊತೆಗೆ, ಶಾಸಕರನ್ನೆಲ್ಲಾ ಒಂದು ಕಡೆ ಕರೆಸಿ, ಸಭೆ ನಡೆಸುವ ಬಗ್ಗೆ, ಕೇಂದ್ರದಿಂದಲೇ, ಯಡಿಯೂರಪ್ಪನವರಿಗೆ ಸೂಚನೆ ಬಂದಿತ್ತು ಎನ್ನುವ ಮಾತು ಕೇಳಿಬರುತ್ತಿದೆ.

  ಇದೆ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಗೆ ಮುಜುಗರ ಆಗಿದು | Oneindia Kannada
  ಎಲ್ಲರನ್ನೂ ಸದ್ಯಕ್ಕೆ ಸಮಾಧಾನ ಪಡಿಸುವಲ್ಲಿ ಬಿಎಸ್ವೈ ಯಶಸ್ವಿ

  ಎಲ್ಲರನ್ನೂ ಸದ್ಯಕ್ಕೆ ಸಮಾಧಾನ ಪಡಿಸುವಲ್ಲಿ ಬಿಎಸ್ವೈ ಯಶಸ್ವಿ

  ಡಿನ್ನರ್ ಪಾರ್ಟಿಯಲ್ಲಿ ಕೆಲವು ಬಿಜೆಪಿ ಶಾಸಕರು ಅನುದಾನ ಬಿಡುಗಡೆ ಮತ್ತು ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ನೇರವಾಗಿ ಯಡಿಯೂರಪ್ಪನವರ ಬಳಿ ಅವಲತ್ತು ತೋಡಿಕೊಂಡರು ಎಂದು ಹೇಳಲಾಗುತ್ತಿದೆ. ಆದರೆ, ಎಲ್ಲರನ್ನೂ ಸದ್ಯಕ್ಕೆ ಸಮಾಧಾನ ಪಡಿಸುವಲ್ಲಿ ಬಿಎಸ್ವೈ ಯಶಸ್ವಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  English summary
  Is Amit Shah Has Sent His Loyalist To Watch Development In Karnataka BJP Meeting,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X