ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಶಿವಮೊಗ್ಗಕ್ಕೆ ಹೊಸ ಎಸ್‌ಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02; ಕರ್ನಾಟಕ ಸರ್ಕಾರ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬಳ್ಳಾರಿ, ಶಿವಮೊಗ್ಗಕ್ಕೆ ಹೊಸ ಎಸ್‌ಪಿಗಳ ನೇಮಕವಾಗಿದೆ.

ಸೋಮವಾರ ಸರ್ಕಾರ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಶಿವಮೊಗ್ಗ ಎಸ್‌ಪಿ ಬಿ. ಎಂ. ಲಕ್ಷ್ಮೀ ಪ್ರಸಾದ್, ಬಳ್ಳಾರಿ ಎಸ್‌ಪಿ ಸೈದುಲು ಅಡಾವತ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

Breaking: ಐಪಿಎಸ್ ವರ್ಗಾವಣೆ: ಬೆಂಗಳೂರು ಇಂಟಲಿಜೆನ್ಸ್ ಎಸ್‌ಪಿಯಾಗಿ ಎನ್‌. ವಿಷ್ಣುವರ್ಧನBreaking: ಐಪಿಎಸ್ ವರ್ಗಾವಣೆ: ಬೆಂಗಳೂರು ಇಂಟಲಿಜೆನ್ಸ್ ಎಸ್‌ಪಿಯಾಗಿ ಎನ್‌. ವಿಷ್ಣುವರ್ಧನ

IPS Officers Transfer New SP For Ballari Shivamogga

ಬೆಂಗಳೂರು ಸಿಐಡಿ ಎಸ್‌ಪಿಯಾಗಿದ್ದ 2016ನೇ ಬ್ಯಾಚ್ ಐಪಿಎಸ್ ಅಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಶಿವಮೊಗ್ಗ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಶಿವಮೊಗ್ಗ ಎಸ್‌ಪಿಯಾಗಿದ್ದ ಬಿ. ಎಂ. ಲಕ್ಷ್ಮೀ ಪ್ರಸಾದ್ ವರ್ಗಾವಣೆಗೊಂಡಿದ್ದಾರೆ.

 ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ಐಪಿಎಸ್ ಐಎಎಸ್ ಅಧಿಕಾರಿ ಹೇಗಿದ್ದಾರೆ? ಹೊಸ ನಿಯಮವೇನು? ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ಐಪಿಎಸ್ ಐಎಎಸ್ ಅಧಿಕಾರಿ ಹೇಗಿದ್ದಾರೆ? ಹೊಸ ನಿಯಮವೇನು?

ಬಳ್ಳಾರಿ ಎಸ್‌ಪಿಯಾಗಿದ್ದ ಸೈದುಲು ಅಡಾವತ್‌ರನ್ನು ಬೆಂಗಳೂರಿನ ಐಎಸ್‌ಡಿ ವಿಭಾಗದ ಎಸ್‌ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಈ ಹುದ್ದೆಯಲ್ಲಿದ್ದ 2017ನೇ ಬ್ಯಾಚ್ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರನ್ನು ಬಳ್ಳಾರಿಯ ನೂತನ ಎಸ್‌ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಬಿ. ಎಂ. ಲಕ್ಷ್ಮೀ ಪ್ರಸಾದ್ ದಕ್ಷಿಣ ಕನ್ನಡ ಎಸ್‌ಪಿಯಾಗಿದ್ದರು. 2021ರಲ್ಲಿ ಅವರನ್ನು ಶಿವಮೊಗ್ಗ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಸೈದುಲು ಅಡಾವತ್‌ 2020ರಲ್ಲಿ ಬಳ್ಳಾರಿ ಎಸ್‌ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

ಬಳ್ಳಾರಿ ಜಿಲ್ಲೆಗೆ ನೂತನ ಎಸ್ಪಿ ನೇಮಕವಾಗಿದೆ. ರಂಜಿತ್‌ಕುಮಾರ್ ಬಂಡಾರು ಬಳ್ಳಾರಿ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಅವರು ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದನಾ ನಿಗ್ರಹ ದಳದ ಎಸ್ಪಿಯಾಗಿದ್ದರು.

ರಂಜಿತ್‌ಕುಮಾರ್ ಬಂಡಾರು ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2017ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಅಧಿಕಾರಿಯಾಗಿದ್ದಾರೆ. ಇವರು ಮೂಲತಃ ಆಂಧ್ರಪ್ರದೇಶದವರು.

ಶಿವಮೊಗ್ಗ ಎಸ್‌ಪಿ ಬಿ. ಎಂ. ಲಕ್ಷ್ಮೀ ಪ್ರಸಾದ್‌ರನ್ನು ವರ್ಗಾವಣೆ ಮಾಡಿದ್ದು, ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ.

English summary
Karnataka government on Monday transferred IPS officers. Shivamogga, Ballari district get new police superintendent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X