ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಸೇರುವ ಸುದ್ದಿಗೆ ಸ್ಪಷ್ಟನೆ ಕೊಟ್ಟ ರವಿ ಡಿ. ಚನ್ನಣ್ಣನವರ್

|
Google Oneindia Kannada News

ಬೆಂಗಳೂರು, ಆಗಸ್ಟ್ 06; ಐಪಿಎಸ್ ಅಧಿಕಾರಿ ಮತ್ತು ಸಿಐಡಿ ಎಸ್ಪಿ ರವಿ ಡಿ. ಚನ್ನಣ್ಣನವರ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಶುಕ್ರವಾರ ರವಿ ಡಿ. ಚನ್ನಣ್ಣನವರ್ ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. 'ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿವಿ ಡಿಜಿಟಲ್ ಮೀಡಿಯಾದಲ್ಲಿ ಬಂದಿರುವ ವಿಚಾರ ಸತ್ಯಕ್ಕೆ ದೂರವಾಗಿರುತ್ತದೆ. ನಾನು ರಾಜಕೀಯ ಸೇರುವ ಬಗ್ಗೆ ಯಾವುದೇ ಆಸಕ್ತಿಯನ್ನು ಹೊಂದಿಲ್ಲ' ಎಂದು ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

ರಾಜಕೀಯಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ: ಬಿಜೆಪಿ ಸೇರಲಿದ್ದಾರಾ ರವಿ ಚನ್ನಣ್ಣನವರ್?ರಾಜಕೀಯಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ: ಬಿಜೆಪಿ ಸೇರಲಿದ್ದಾರಾ ರವಿ ಚನ್ನಣ್ಣನವರ್?

'ನಾನು ಇತ್ತೀಚಿಗೆ ರಜಾದಿನಗಳಲ್ಲಿ ಮಠಗಳು-ದೇವಸ್ಥಾನಗಳು ಹಾಗೂ ಹಿರಿಯರನ್ನು ಭೇಟಿಯಾಗಿದ್ದನ್ನು ಅಪಾರ್ಥ ಕಲ್ಪಿಸುವುದು ಬೇಡ. ರಾಜಕೀಯಕ್ಕೆ ಸೇರುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ' ಎಂದು ರವಿ ಡಿ. ಚನ್ನಣ್ಣನವರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 IPS ಅಧಿಕಾರಿ ರವಿ ಚನ್ನಣ್ಣನವರ್ ತಮ್ಮ ಎಂದು ನಂಬಿಸಿ ಅರ್ಚಕನಿಂದ ಮೋಸ IPS ಅಧಿಕಾರಿ ರವಿ ಚನ್ನಣ್ಣನವರ್ ತಮ್ಮ ಎಂದು ನಂಬಿಸಿ ಅರ್ಚಕನಿಂದ ಮೋಸ

ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗಲೇ ಕೆ. ಅಣ್ಣಾಮಲೈ ರಾಜೀನಾಮೆ ನೀಡಿದ್ದರು. ಬಳಿಕ ಅವರು ಬಿಜೆಪಿ ಸೇರಿ ರಾಜಕೀಯ ಪ್ರವೇಶ ಮಾಡಿದ್ದರು. ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಕೆ. ಅಣ್ಣಾಮಲೈ ಪ್ರಸ್ತುತ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರು. ರವಿ ಡಿ. ಚನ್ನಣ್ಣನವರ್ ಸಹ ಅಣ್ಣಾಮಲೈ ಹಾದಿ ಹಿಡಿಯಲಿದ್ದಾರೆ, ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ರವಿ ಡಿ. ಚನ್ನಣ್ಣನವರ್ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆರವಿ ಡಿ. ಚನ್ನಣ್ಣನವರ್ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರವಿ ಡಿ. ಚನ್ನಣ್ಣನವರ್ ಸ್ಪಷ್ಟನೆ

ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. 'ನಾನು ಭರವಸೆ ಎಂಬ ಪುಸ್ತಕವನ್ನು ಬರೆಯುತ್ತಿದ್ದು, ಇದರ ಪ್ರಯುಕ್ತ ಇತ್ತೇಚಿಗೆ ನನ್ನ ರಜೆ ದಿನಗಳಲ್ಲಿ ನನ್ನ ಹಳೆಯ ಸ್ನೇಹಿತರ ಮನೆಗಳನ್ನು, ದೇವಸ್ಥಾನಗಳನ್ನು, ಶ್ರೀಮಠಗಳನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕುತ್ತಿದ್ದೇನೆ. ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿ ಹಬ್ಬಿದ್ದು ಏಕೆ?

ಈ ಸುದ್ದಿ ಹಬ್ಬಿದ್ದು ಏಕೆ?

ಕಳೆದ ಮಂಗಳವಾರ ರವಿ ಡಿ. ಚನ್ನಣ್ಣನವರ್ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭೇಟಿಯಾಗಿದ್ದರು. ಕೆಲವು ದಿನಗಳಿಂದ ಕರ್ನಾಟಕದಲ್ಲಿ ವಿವಿಧ ಮಠಗಳಿಗೆ ಭೇಟಿಯನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಅವರು ರಾಜಕೀಯಕ್ಕೆ ಬರಲಿದ್ದು, ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರವಿ ಡಿ. ಚನ್ನಣ್ಣನವರ್ ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಈ ಸುದ್ದಿಗಳಿಗೆ ಈಗ ಅವರೇ ಸ್ಪಷ್ಟನೆ ನೀಡಿದ್ದಾರೆ.

ಎರಡು ಪೋಸ್ಟ್ ಹಾಕಿದ್ದಾರೆ

ರಾಜಕೀಯಕ್ಕೆ ಬರುವ ಕುರಿತು ರವಿ ಡಿ. ಚನ್ನಣ್ಣನವರ್ ಎರಡು ಪೋಸ್ಟ್ ಹಾಕಿದ್ದಾರೆ, 'ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿವಿ ಡಿಜಿಟಲ್ ಮೀಡಿಯಾದಲ್ಲಿ ಬಂದಿರುವ ವಿಚಾರ ಸತ್ಯಕ್ಕೆ ದೂರವಾಗಿರುತ್ತದೆ. ನಾನು ರಾಜಕೀಯ ಸೇರುವ ಬಗ್ಗೆ ಯಾವುದೇ ಆಸಕ್ತಿಯನ್ನು ಹೊಂದಿಲ್ಲ. ನಾನು ಇತ್ತೀಚಿಗೆ ರಜಾದಿನಗಳಲ್ಲಿ ಮಠಗಳು-ದೇವಸ್ಥಾನಗಳು ಹಾಗೂ ಹಿರಿಯರನ್ನು ಭೇಟಿಯಾಗಿದ್ದನ್ನು ಅಪಾರ್ಥ ಕಲ್ಪಿಸುವುದು ಬೇಡ. ರಾಜಕೀಯಕ್ಕೆ ಸೇರುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Recommended Video

ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ್ ರಾಜಕೀಯ ಪ್ರವೇಶ | Oneindia Kannada
ರವಿ ಡಿ. ಚನ್ನಣ್ಣನವರ್

ರವಿ ಡಿ. ಚನ್ನಣ್ಣನವರ್

ರವಿ. ಡಿ. ಚನ್ನಣ್ಣನವರ್ 2008ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಗದಗ ಜಿಲ್ಲೆಯ ನೀಲಗುಂದ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಅವರು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಐಪಿಎಸ್ ಪದವಿ ಪಡೆದಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳ ಹೆಸರಿನಲ್ಲಿ ಹಲವು ಖಾತೆಗಳಿವೆ. ಅವರ ಭಾಷಣದ ವಿಡಿಯೋ ತುಣುಕುಗಳು ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.

English summary
In a face book post IPS officer Ravi D Channannavar clarified that he will not come to politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X