ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ

|
Google Oneindia Kannada News

Recommended Video

Home Department approved the resignation of Annamalai | Oneindia Kannada

ಬೆಂಗಳೂರು, ಅಕ್ಟೋಬರ್ 17: ಐಪಿಎಸ್ ಅಧಿಕಾರಿ ಅಣ್ಣಾಮಲೈ ಐದು ತಿಂಗಳ ಹಿಂದೆ ನೀಡಿದ್ದ ರಾಜೀನಾಮೆ ಇಂದು ಅಂಗೀಕಾರವಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಅಣ್ಣಮಲೈ ಮೇ 28 ರಂದು ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದರು. ಆ ರಾಜೀನಾಮೆಯನ್ನು ಕೇಂದ್ರ ಗೃಹ ಇಲಾಖೆ ಇಂದು ಅಂಗೀಕಾರ ಮಾಡಿದೆ.

ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ

ಇಷ್ಟು ದಿನ ಸೇವೆಯಲ್ಲಿದ್ದರೂ ರಜೆಯಲ್ಲಿದ್ದ ಅಣ್ಣಾಮಲೈ ನಾಳೆಯಿಂದ ಪೊಲೀಸ್ ಎಸ್‌ಪಿ ಬದಲಿಗೆ ಸಾಮಾನ್ಯ ವ್ಯಕ್ತಿ ಆಗಿರಲಿದ್ದಾರೆ. ರಾಜೀನಾಮೆ ವೇಳೆ ನೀಡಿದ್ದ ಕಾರಣದಂತೆ ಅವರೂ ಸಹ ಇದನ್ನೇ ಬಯಸಿದ್ದರು.

IPS Officer Annamalai Resignation Approved By Home Ministry

ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದ ಅಣ್ಣಾಮಲೈ, ಕರ್ತವ್ಯದಿಂದಾಗಿ ವೈಯಕ್ತಿಕ ಬದುಕು ಕಳೆದುಕೊಳ್ಳುತ್ತಿರುವ ಭಾವ ಆವರಿಸಿದ್ದು, ವೈಯಕ್ತಿಕ ಬದುಕಿಗೆ ಹೆಚ್ಚಿನ ಆದ್ಯತೆ ನೀಡುವ ಕಾರಣ ನೀಡುವ ಕಾರಣ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಾವು ಬರೆದಿದ್ದ ಸುದೀರ್ಘ ಪತ್ರದಲ್ಲಿ ಹೇಳಿದ್ದರು.

'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ

ಅಣ್ಣಾಮಲೈ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಅವರು ನೀಡಿರುವ ಹೇಳಿಕೆ. ಕಾಣಿಸಿಕೊಂಡ ಕಾರ್ಯಕ್ರಮಗಳು ಈ ಬಗ್ಗೆ ಅನುಮಾನ ಮೂಡಿಸಿವೆ.

English summary
IPS Officer Annamalai resignation approved by home ministry of India. He resigned to his job on May 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X