ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ?

|
Google Oneindia Kannada News

ಬೆಂಗಳೂರು, ಮೇ 28: ಖಡಕ್ ಅಧಿಕಾರಿ, 'ಸಿಂಗಂ' ಎಂದೇ ಖ್ಯಾತರಾದ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.

ತಮ್ಮನ್ನು ಪ್ರೀತಿಸಿದ, ಮೆಚ್ಚಿದ ಜನರಿಗೆ ಅವರು ಕೃತಜ್ಞತೆ ಸಲ್ಲಿಸಿ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ರಾಜೀನಾಮೆಯ ಉದ್ದೇಶ, ಮುಂದಿನ ನಡೆಯ ಬಗ್ಗೆ ಸಹ ವಿವರಿಸಿದ್ದಾರೆ.

'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ 'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ

'ನನ್ನ ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳಿಗೆ
ನಿಮ್ಮೆಲ್ಲರಿಗೂ ಶುಭಾಶಯಗಳು. ನನ್ನ ರಾಜೀನಾಮೆ ಕುರಿತಾದ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ಈ ಪತ್ರ ಬರೆಯುತ್ತಿದ್ದೇನೆ. ಇಂದು ಮೇ 28, 2019ರಂದು ಭಾರತೀಯ ಪೊಲೀಸ್ ಸೇವೆಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಕಚೇರಿ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕೆಲವು ಸಮಯ ಬೇಕಾಗಬಹುದು. ಸುತ್ತಮುತ್ತಲೂ ಹರಡಿರುವ ಎಲ್ಲ ಊಹಾಪೋಹಗಳಿಗೆ ನೇರವಾಗಿ ಉತ್ತರ ನೀಡಲು ಬಯಸಿದ್ದೇನೆ ಎಂದು ಅವರು ಪತ್ರವನ್ನು ಆರಂಭಿಸಿದ್ದಾರೆ.

ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ

ಆರು ತಿಂಗಳ ಸುದೀರ್ಘ ಚಿಂತನೆಯ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಸೇವೆಯಲ್ಲಿ 9 ವರ್ಷ ಕಳೆದಿದ್ದು, ನನ್ನ ಖಾಕಿ ಬದುಕಿನ ಪ್ರತಿ ಗಳಿಕೆಯಲ್ಲಿಯೂ ಜೀವಿಸಿದ್ದೇನೆ. ನನ್ನ ಎಲ್ಲ ಸಹೋದ್ಯೋಗಿಗಳ ಜತೆಗೆ ಕಳೆದ ಖಾಕಿಯ ಹೆಮ್ಮೆಯ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪೊಲೀಸರ ಕೆಲಸ ದೇವರಿಗೆ ಸಮೀಪವಾದುದು ಎನ್ನುವುದು ನನ್ನ ನಂಬಿಕೆ. ಕೆಲವು ಮಿತಿಗಳ ನಡುವೆ ಇದು ಅತ್ಯಂತ ಒತ್ತಡ ಕೆಲಸ ಎನ್ನುವುದು ನಿಜ. ನನ್ನ ಜೀವನದ ಅಗತ್ಯ ಸಂದರ್ಭಗಳಲ್ಲಿ ನನ್ನೊಂದಿಗೆ ನಿಂತ ಜನರ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ. ಇದಕ್ಕಾಗಿ ತುಸು ಬೇಸರವಾಗಿದ್ದಿದೆ. ಅನೇಕ ವೇಳೆ ನಾನು ಬಯಸಿದಾಗ ಅದನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ಅವರು ಹೇಳಿದ್ದಾರೆ.

ತಮ್ಮ ರಾಜೀನಾಮೆ ಕುರಿತಂತೆ ಅಣ್ಣಾಮಲೈ ಬರೆದಿರುವ ಸುದೀರ್ಘ ಹಾಗೂ ಭಾವನಾತ್ಮಕ ಪತ್ರದ ಮುಂದುವರಿದ ಭಾಗದ ಸಾರಾಂಶ ಇಲ್ಲಿದೆ.

ಕಣ್ಣು ತೆರೆಸಿದ ಕೈಲಾಶ ಸರೋವರ

ಕಣ್ಣು ತೆರೆಸಿದ ಕೈಲಾಶ ಸರೋವರ

ಕಳೆದ ವರ್ಷ ಕೈಲಾಶ ಸರೋವರಕ್ಕೆ ನಾನು ನೀಡಿದ ಭೇಟಿ ನನ್ನ ಜೀವನದ ಆದ್ಯತೆಗಳನ್ನು ಉತ್ತಮಗೊಳಿಸಲು ನೆರವಾಗುವಂತೆ ಕಣ್ಣು ತೆರೆಸಿತು. ಮಧುಕರ್ ಶೆಟ್ಟಿ ಅವರ ಸಾವು ನನ್ನದೇ ಬದುಕನ್ನು ಮರು ಪರೀಕ್ಷೆಗೆ ಒಳಪಡಿಸುವಂತೆ ಮಾಡಿತು. ಎಲ್ಲ ಒಳ್ಳೆಯ ಸಂಗತಿಗಳೂ ಕೊನೆಗೊಳ್ಳಲೇಬೇಕು. ಹೀಗಾಗಿ ಖಾಕಿಯಲ್ಲಿ ನನ್ನ ದಿನಗಳು ಮುಗಿಯಿತು ಎಂದು ನಾನು ನಿರ್ಧರಿಸಿದ್ದೇನೆ.

ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ

ಮೊದಲೇ ರಾಜೀನಾಮೆಗೆ ನಿರ್ಧರಿಸಿದ್ದೆ

ಮೊದಲೇ ರಾಜೀನಾಮೆಗೆ ನಿರ್ಧರಿಸಿದ್ದೆ

ಲೋಕಸಭೆ ಚುನಾವಣೆಗೆ ಮುನ್ನವೇ ನಾನು ಈ ಹುದ್ದೆಯನ್ನು ತ್ಯಜಿಸಲು ಬಯಸಿದ್ದೆ. ಆದರೆ, ಚುನಾವಣೆಗೆ ಸ್ವಲ್ಪ ದಿನ ಇರುವಾಗಲೇ ರಾಜೀನಾಮೆ ನೀಡುವ ಮೂಲಕ ಸರ್ಕಾರಕ್ಕೆ ಅನನುಕೂಲ ಉಂಟುಮಾಡಲು ನಾನು ಬಯಸಿರಲಿಲ್ಲ. ನನ್ನ ರಾಜೀನಾಮೆ ನಿಮಗೆ ಒಂದು ವೇಳೆ ನೋವನ್ನುಂಟು ಮಾಡಿದ್ದರೆ ಅದಕ್ಕಾಗಿ ನನ್ನ ಕಳಕಳಿಯ ಕ್ಷಮೆ ಕೋರುತ್ತೇನೆ. ನಾನು ಇದನ್ನು ಈಗಲೇ ಮಾಡಬೇಕು ಎಂದು ಪ್ರಾಮಾಣಿಕವಾಗಿ ನಂಬಿದ್ದೇನೆ. ನನಗೆ ಇದು ಭಾವುಕತೆಯ ಸಮಯ. ಅದನ್ನು ಸಮಾಧಾನಗೊಳಿಸುವಲ್ಲಿ ನನ್ನ ಅತ್ಯುತ್ತಮ ಗೆಳತಿಯಾದ ನನ್ನ ಪತ್ನಿ ಸಹಾಯ ಮಾಡಿದ್ದಾರೆ.

ನಾನು ತೀರಾ ಚಿಕ್ಕ ಮನುಷ್ಯ

ನಾನು ತೀರಾ ಚಿಕ್ಕ ಮನುಷ್ಯ

ರಾಜೀನಾಮೆ ಬಳಿಕ ನನ್ನ ನಡೆ ಮುಂದೆ ಏನು ಎಂಬ ಬಗ್ಗೆ ಊಹಿಸುತ್ತಿರುವ ಜನರಿಗೆ, ಭಾರಿ ಮಹತ್ವಾಕಾಂಕ್ಷೆಗಳನ್ನು ಹೊಂದಲು ನಾನು ತೀರಾ ಚಿಕ್ಕ ಮನುಷ್ಯ. ನಾನು ಸದ್ಯ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳಲು ಬಯಸಿದ್ದೇನೆ ಮತ್ತು ಜೀವನದಲ್ಲಿ ಕಳೆದುಕೊಂಡಿದ್ದ ಆ ಚಿಕ್ಕ ಪುಟ್ಟ ಸಂಗತಿಗಳನ್ನು ಅನುಭವಿಸಲು ಉದ್ದೇಶಿಸಿದ್ದೇನೆ. ತನ್ನ ವೇಗದ ಬೆಳವಣಿಗೆಗೆ ನನ್ನ ಪ್ರತಿ ಸಮಯವನ್ನೂ ಪಡೆಯಲು ಅರ್ಹನಾಗಿರುವ ನನ್ನ ಮಗನಿಗೆ ಒಳ್ಳೆಯ ತಂದೆಯಾಗಿರಲು ಬಯಸಿದ್ದೇನೆ.

ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್

ಕುರಿಗಳು ಮಾತು ಕೇಳುತ್ತವೆಯೇ...

ಕುರಿಗಳು ಮಾತು ಕೇಳುತ್ತವೆಯೇ...

ಕೃಷಿ ಬದುಕಿನ ಮನೆಗೆ ಮರಳುತ್ತಿದ್ದೇನೆ. ನಾನೀನ ಪೊಲೀಸ್ ಅಲ್ಲದೆ ಇರುವುದರಿಂದ ನನ್ನ ಕುರಿಗಳು ಈಗಲೂ ನನ್ನ ಮಾತು ಕೇಳುತ್ತವೆಯೋ ಎಂಬುದನ್ನು ನೋಡಬೇಕಿದೆ. ಅಳಿದು ಹೋಗುವ ನನ್ನಂತಹವರಿಗೆ ಅವಕಾಶಗಳನ್ನು ಒದಗಿಸುವ ಬಗ್ಗೆ ಮಾತನಾಡುವಾಗ ನನಗೆ ಜೀವನವೇ ಬಹು ದೊಡ್ಡ ಅವಕಾಶವಾಗಿದೆ.

ಮಿಸ್ ಮಾಡಿಕೊಳ್ಳುತ್ತಿದ್ದೇನೆ

ಮಿಸ್ ಮಾಡಿಕೊಳ್ಳುತ್ತಿದ್ದೇನೆ

ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ನ್ಯಾಯದ ಹಾದಿಯಲ್ಲಿ ನನ್ನ ಜತೆ ನಡೆದ ಎಲ್ಲ ಅದ್ಭುತ ಜನರನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮಲ್ಲಿನ ಅನೇಕರು ನನ್ನಲ್ಲಿನ ಅಪರಿಪೂರ್ಣತೆಯನ್ನು ಸರಿಪಡಿಸಿ ಸ್ವೀಕಾರಾರ್ಹ ಆವೃತ್ತಿಯನ್ನಾಗಿ ಪರಿವರ್ತಿಸಿದ್ದೀರಿ. ನನಗೆ ಪ್ರತಿಯೊಂದನ್ನೂ ಕಲಿಸಿಕೊಟ್ಟ ನನ್ನ ಹಿರಿಯ ನಾಯಕರ ಮಾರ್ಗದರ್ಶನವನ್ನು ಮತ್ತು ನನಗಿಂತಲೂ ಹೆಚ್ಚು ಚಾಣಾಕ್ಷರು ಹಾಗೂ ತತ್ವಗಳನ್ನು ಹೊಂದಿದ ನನ್ನ ಕಿರಿಯ ಸಹೋದ್ಯೋಗಿಗಳ ಒಡನಾಟವನ್ನು ಕಳೆದುಕೊಳ್ಳುತ್ತಿದ್ದೇನೆ.

ನನ್ನ ಎಲ್ಲ ಕಾನ್‌ಸ್ಟೆಬಲ್‌ಗಳು ಮತ್ತು ಇತರೆ ಕಿರಿಯ ಶ್ರೇಣಿಯ ಸಿಬ್ಬಂದಿಯನ್ನು ಮಿಸ್ ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಅವರಿಗಾಗಿ ಜೀವಿಸಿದ್ದೆ. ಅವರು ಹೆಚ್ಚು ಯೋಗ್ಯವಾದ ರೀತಿಯಲ್ಲಿ ಉತ್ತಮ ಬದುಕು ನಡೆಸುವಂತೆ ಮಾಡಲು ಪ್ರಯತ್ನಿಸಿದ್ದೆ.

ನಾನೊಬ್ಬ ಕೇವಲ ಮನುಷ್ಯ

ನಾನೊಬ್ಬ ಕೇವಲ ಮನುಷ್ಯ

ಗೌರವ ಮತ್ತು ಹೆಮ್ಮೆಯಿಂದ ನಿಮ್ಮೆಲ್ಲರ ಸೇವೆ ಸಲ್ಲಿಸಿದ್ದೇನೆ ಎಂಬ ಭರವಸೆ ಇದೆ. ನಿಮ್ಮಲ್ಲಿ ಯಾರಿಗೇ ಆದರೂ, ಯಾವುದೇ ಕ್ಷಣದಲ್ಲಿ ನೋವನ್ನುಂಟು ಮಾಡಿದ್ದರೆ, ನಾನೊಬ್ಬ ಕೇವಲ ಮನುಷ್ಯನಾಗಿರುವುದರಿಂದ ಕ್ಷಮೆ ಕೋರುತ್ತೇನೆ.

ನಿಮ್ಮೆಲ್ಲರನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ಮುಖ್ಯವಾಗಿ ನಿಮ್ಮ ಪ್ರೀತಿಯನ್ನು. ಅದಂತೂ ಖಚಿತ.

ಅಪಾರ ಪ್ರೀತಿಯಿಂದ,
ಎಂದು ಅಣ್ಣಾಮಲೈ ಸಹಿ ಹಾಕಿದ್ದಾರೆ.

English summary
IPS officer Annamalai has resigned to his post on Tuesday. He wrote an emotional letter to the people who loves him and to his colleagues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X