ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ಕಂಪನಿಗಳು ಜನರಿಗೆ ವಂಚನೆ ಮಾಡಿದ್ದು 5,685 ಕೋಟಿ ಹಣ!

|
Google Oneindia Kannada News

ಬೆಂಗಳೂರು, ಜೂನ್ 12 : ಐಎಂಎ ಸಮೂಹ ಸಂಸ್ಥೆ ಜನರಿಗೆ ಕೋಟ್ಯಾಂತರ ರೂ. ವಂಚನೆ ಮಾಡಿದೆ. ರಾಜ್ಯದಲ್ಲೇ ಇಂತಹ ಪ್ರಕರಣ ನಡೆದಿರುವುದು ಇದೇ ಮೊದಲಲ್ಲ. 18 ಕಂಪನಿಗಳು 5,685 ಕೋಟಿ ರೂ. ವಂಚನೆ ಮಾಡಿವೆ.

ಹೌದು, 2013 ರಿಂದ 2019ರ ಫೆಬ್ರವರಿ ತನಕ 18 ಕಂಪನಿಗಳಿಂದ 5,685 ಕೋಟಿ ವಂಚನೆ ನಡೆದಿದೆ. ಈ ಕುರಿತು 480 ಪ್ರಕರಣ ದಾಖಲಾಗಿವೆ. ಆದರೆ, ಕೆಲವು ಪ್ರಕರಣಗಳಲ್ಲಿ ಮಾತ್ರ ಜನರಿಗೆ ಹಣ ಮರುಪಾವತಿಯಾಗಿದೆ.

ಐಎಂಎ ವಂಚನೆ ಪ್ರಕರಣ : ಎಸ್‌ಐಟಿ ತಂಡದ ಅಧಿಕಾರಿಗಳ ಪಟ್ಟಿಐಎಂಎ ವಂಚನೆ ಪ್ರಕರಣ : ಎಸ್‌ಐಟಿ ತಂಡದ ಅಧಿಕಾರಿಗಳ ಪಟ್ಟಿ

ಇಂತಹ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದವರಲ್ಲಿ ಬಡವರು, ಮಧ್ಯಮ ವರ್ಗದ ಜನರೇ ಹೆಚ್ಚು. ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನು ಇಂತಹ ಕಂಪನಿಗಳಲ್ಲಿ ತೊಡಗಿಸಿ, ಕೊನೆಗೆ ಹಣ ಕಳೆದುಕೊಳ್ಳುತ್ತಾರೆ.

ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?

Investment firms cheated 5865 crore to people

ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಕಂಪನಿಗಳು ಆರಂಭವಾಗುತ್ತವೆ. ಆದರೆ, ಯಾವುದೇ ವ್ಯವಹಾರ ಕಾನೂನು ಬದ್ಧವಾಗಿರುವುದಿಲ್ಲ. ನಕಲಿ ರಶೀದಿಗಳನ್ನು ಜನರಿಗೆ ನೀಡುತ್ತವೆ. ಆದ್ದರಿಂದ, ಕಾನೂನು ಹೋರಾಟ ತಾರ್ಕಿಕ ಅಂತ್ಯವನ್ನು ಕಾಣುವುದಿಲ್ಲ.

ಯುವಕರೇ ಹುಷಾರ್, ಉದ್ಯೊಗದ ಆಮಿಷವೊಡ್ಡಿ ಹೀಗೂ ವಂಚಿಸುತ್ತಾರೆ!ಯುವಕರೇ ಹುಷಾರ್, ಉದ್ಯೊಗದ ಆಮಿಷವೊಡ್ಡಿ ಹೀಗೂ ವಂಚಿಸುತ್ತಾರೆ!

ಜನರ ಹಣವನ್ನು ಎತ್ತಿಕೊಂಡು ಪರಾರಿಯಾಗುವಾಗ ಸಾಕ್ಷ್ಯಗಳನ್ನು ನಾಶಪಡಿಸಿಯೇ ಹೋಗುತ್ತಾರೆ. ಹಣದಲ್ಲಿ ಖರೀದಿ ಮಾಡಿದ ಆಸ್ತಿಗಳನ್ನು ಮಾರಾಟ ಮಾಡಿರುತ್ತಾರೆ. ಆದ್ದರಿಂದ, ಆರೋಪಿಗಳು ಸಿಕ್ಕರೂ ಜನರ ಹಣ ವಾಪಸ್ ಬರುವುದು ಕಷ್ಟವಾಗಿದೆ.

ಜನರು ಹಣ ಹೂಡಿಕೆ ಮಾಡುವಾಗ ಠೇವಣಿಗಳು ಅಧಿಕೃತವೇ? ಎಂಬುದನ್ನು ಮೊದಲು ಪರಿಶೀಲಿಸಬೇಕು. ಆರ್‌ಬಿಐ, ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ, ರಿಜಿಸ್ಟ್ರಾರ್ ಆಫ್ ಇಂಡಿಯಾ ಕಂಪನೀಸ್‌ ಮತ್ತು ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿಯಿಂದ ಅನುಮತಿ ಪಡೆದುಕೊಂಡಿದೆಯೇ? ಎಂದು ಪರಿಶೀಲಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.

ಕಂಪನಿಗಳ ಹೆಸರು : ಅಗ್ರಿಗೋಲ್ಡ್ 1,640 ಕೋಟಿ, ಆಂಬಿಡೆಂಟ್ 954 ಕೋಟಿ, ವಿಕ್ರಂ ಇನ್ವೆಸ್ಟ್‌ಮೆಂಟ್ 400, ಡೀಮ್ಸ್‌ ಜಿ.ಕೆ. 375 ಕೋಟಿ, ಷಣ್ಮುಗಂ ಫೈನಾನ್ಸ್ 518 ಕೋಟಿ, ಗೃಹ ಕಲ್ಯಾಣ್ 277 ಕೋಟಿ, ವೃಕ್ಷ ಬಿಜಿನೆಸ್ ಸಲ್ಯೂಷನ್ 31 ಕೋಟಿ, ಅಜ್ಮೇರಾ ಗ್ರೂಪ್ 500 ಕೋಟಿ.

English summary
From 2013 to 2019 18 investment firms cheated 5,865 crore to people. People who lost money belongs to lower or middle class family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X