ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಚೀನಾ, ಪಾಕಿಸ್ತಾನ ಬೆಂಬಲ ಕೋರುವುದು ಕಾಂಗ್ರೆಸ್: ಒನ್ ಇಂಡಿಯಾ ಸಂದರ್ಶನದಲ್ಲಿ ಸಿ ಟಿ ರವಿ ಹೇಳಿದ್ದೇನು?

ಚುನಾವಣೆಗೆ ನಾವು ನಮ್ಮ ನಾಯಕರಾದ ಮೋದಿ, ಅಮಿತ್ ಶಾ, ನಡ್ಡಾ ಜೀ ಅವರ ಬೆಂಬಲವನ್ನ ಕೋರಿದ್ದೇವೆ. ನಾವು ಚೀನಾ, ಪಾಕಿಸ್ತಾನದ ನೆರವು ಕೋರಿ ರಾಜಕಾರಣ ಮಾಡುವವರಲ್ಲ ಎಂದು ಸಿ ಟಿ ರವಿ ಹೇಳಿದ್ದಾರೆ.

|
Google Oneindia Kannada News

ಬೆಂಗಳೂರು,ಫೆಬ್ರವರಿ3: ಚುನಾವಣಾ ಪ್ರಚಾರಕ್ಕಾಗಿ ನಾವು ಚೀನಾ, ಪಾಕಿಸ್ತಾನ ಬೆಂಬಲ ಕೋರಿಲ್ಲ, ಚೀನಾ, ಪಾಕಿಸ್ತಾನ ಬೆಂಬಲ ಕೋರುವವರು ಕಾಂಗ್ರೆಸ್ ಪಾರ್ಟಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ.ಟಿ ರವಿ ಹೇಳಿದ್ದಾರೆ.

ಚುನಾವಣೆಗೆ ನಾವು ನಮ್ಮ ನಾಯಕರಾದ ಮೋದಿ, ಅಮಿತ್ ಶಾ, ನಡ್ಡಾ ಜೀ ಅವರ ಬೆಂಬಲವನ್ನ ಕೋರಿದ್ದೇವೆ. ನಾವು ಚೀನಾ, ಪಾಕಿಸ್ತಾನದ ನೆರವು ಕೋರಿ ರಾಜಕಾರಣ ಮಾಡುವವರಲ್ಲಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದರು. ಇನ್ನೂ ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.

ಚಿಕ್ಕಮಗಳೂರು: ಬಿಜೆಪಿ ಟಿಕೆಟ್‌ಗಾಗಿ ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳ್ತಾರಾ ಗ್ರಂಥಪಾಲಕ ನರೇಂದ್ರಚಿಕ್ಕಮಗಳೂರು: ಬಿಜೆಪಿ ಟಿಕೆಟ್‌ಗಾಗಿ ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳ್ತಾರಾ ಗ್ರಂಥಪಾಲಕ ನರೇಂದ್ರ

1. ಬಿಜೆಪಿ ಪಕ್ಷ ಯಡಿಯೂರಪ್ಪನವರನ್ನ ಸರಿಯಾಗಿ ನಡೆಸಿಕೊಂಡಿಲ್ಲ, ಹೀಗಾಗಿ ಈ ಬಾರಿ ಚುನಾವಣೆ ಎದರಿಸುವುದು ಬಿಜೆಪಿ ಕಷ್ಟವಾಗುವ ಸಾಧ್ಯತೆ ಇದಿಯಾ.?

ಯಡಿಯೂರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಪಾರ್ಲಿಮೆಂಟ್ ಬೋರ್ಡ್ ಸದಸ್ಯರು, ಹಾಗೆಯೇ ನಾಲ್ಕು ಬಾರೀ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಪಾರ್ಟಿಯಿಂದ ಅಲ್ಲ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನ ಶುರು ಮಾಡಿದ್ದು ಜೆಡಿಎಸ್ ಪಾರ್ಟಿಯಿಂದ, ಅಮೇಲೆ ಕಾಂಗ್ರೆಸ್ ಪಕ್ಷಕ್ಕೆ ಬಂದರು.

ಆದರೆ ಯಡಿಯೂರಪ್ಪನವರು ರಾಜಕೀಯ ಜೀವನ ಪ್ರಾರಂಭ ಮಾಡಿದ್ದು ಬಿಜೆಪಿಯಲ್ಲಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದುಬಿಜೆಪಿ ಪಾರ್ಟಿಯಲ್ಲಿ, ವಿಪಕ್ಷ ನಾಯಕರಾಗಿದ್ದು ಬಿಜೆಪಿಯಲ್ಲಿ, ಸಂಸದರಾಗಿದ್ದು ಬಿಜೆಪಿ ಪಾರ್ಟಿಯಲ್ಲಿ. ಅವರ ನಾಯಕತ್ವದಲ್ಲಿ ಪಕ್ಷ ಬೆಳದಿದೆ. ಪಕ್ಷ ಅವರನ್ನಬೆಳಸಿದೆ. ಅವರನ್ನ ಕಡೆಗಣಿಸಿದ್ರೂ ಅಂತ ಯಾಕೆ ಹೇಳ್ತಿರಾ. ಯಾವತ್ತಾದ್ರೂ ಕಾಂಗ್ರೆಸ್ ನವರ ಬೆಂಬಲದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರಾ.?

ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದು, ಈಗ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನವರು ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗುವ ಕಾಲಕ್ಕೆ ಬೆಂಬಲ ಕೊಟ್ರಾ.? ಅವರನ್ನ ಕೆಳಗೆ ಇಳಿಸುವುದು ಹೇಗೆ ಎಂಬ ಷಡ್ಯಂತ್ರ ನಡೆಸಿದರು. ಯಡಿಯೂರಪ್ಪನವರೇ ಸಂತೃಪ್ತಿಯಿಂದ ಹೇಳಿದ್ದಾರೆ. ನಾನು ಸಕ್ರಿಯ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವಲ್ಲಿ ನಾನು ನಿವೃತ್ತಿಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಸಮರ್ಥ್ಯವನ್ನ ಉಪಯೋಗಿಸುವುದಾಗಿ ಹೇಳಿದ್ದಾರೆ. ಒಂದು ಪಕ್ಷ ಏನೆಲ್ಲಾ ಕೊಡಲು ಸಾಧ್ಯವಿದೆಯೋ ಅದನ್ನ ಯಡಿಯೂರಪ್ಪ ನವರಿಗೆ ಪಕ್ಷ ಕೊಟ್ಟಿದೆ. ಯಡಿಯೂರಪ್ಪನವರು ಹಾಗೂ ಬಿಜೆಪಿ ಒಂದು ನಾಣ್ಯದ ಎರಡು ಮುಖಗಳು. ಅವರನ್ನ ದೂರ ಇಡುವ ಪ್ರಶ್ನೆಯೇ ಇರಲ್ಲ. ಅವರ ಮಾರ್ಗದರ್ಶನ, ನೇತೃತ್ವ ಸದಾ ಕಾಲ ಇರುತ್ತದೆ ಎಂದು ಹೇಳಿದರು.

Interview With Chikmagalur MLA CT Ravi

2. ಬಿಜೆಪಿಯಲ್ಲಿ ಯಡಿಯೂರಪ್ಪನವರ ಬಳಿಕ ಬಿಜೆಪಿಯಲ್ಲಿ ಯಾರು ಮಾಸ್ ಲೀಡರ್ ಇಲ್ವಾ.?

ಲೀಡರ್ ಶಿಫ್ ಎಂಬುದು ಜನರಿಂದ ತಯಾರಾಗುವುದು. ಒಂದೊಂದು ಅವಕಾಶಗಳು ಒಬ್ಬಬ್ಬರ ನಾಯಕತ್ವದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. 2000 ಕ್ಕಿಂತ ಮುಂಚೆ ನರೇಂದ್ರ ಮೋದಿಯವರು, ಬಿಜೆಪಿಯ ಆರ್ಗನೈಸಿಂಗ್ ಸೆಕ್ರೆಟರಿಯಾಗಿದ್ದರು, ಆಗ ಮಾಸ್ ಲೀಡರ್ ಆಗಿರ್ಲಿಲ್ಲ, ಆದರೆ ಈಗ ಅವರೇ ಮಾಸ್ ಲೀಡರ್. ಒಂದೊಂದು ಅವಕಾಶಗಳು ಕೂಡ ಜನರಿಗೆ ನಾಯಕತ್ವವನ್ನ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ. ನಾಯಕತ್ವದ ಬೆಳವಣೆಗೆಗೆ ಇರುವ ದಾರಿ ಎರಡೇ..

ಯಾರು ಬಕೆಟ್ ಹಿಡಿದು ಲೀಡರ್ ಆಗೋಕೆ ಆಗಲ್ಲ. ಜನಪರ ಸೇವೆ ಮಾಡುವವರನ್ನ ಜನ ನಮ್ಮ ನಾಯಕರು ಎಂದು ಭಾವಿಸುತ್ತಾರೆ. ಅದಕ್ಕೆ ಇವತ್ತು ಜಗತ್ತಿನ ಜನ ಮೋದಿಯವರನ್ನ ಅಗ್ರಗಣ್ಯ ನಾಯಕ ಎಂದು ಭಾವಿಸುತ್ತಾರೆ. ಯಾರು ಜನರ ಪರವಾಗಿ ಹೋರಾಟ ಮಾಡುತ್ತಾರೆ ಅವರು ಜನ ನಾಯಕರಾಗುತ್ತಾರೆ. ಕಾಂದನಕ್ಕೆ ಸೇವೆ ಮಾಡುವವರು ಜನ ನಾಯಕರಾಗುವುದಿಲ್ಲ. ಸ್ವರ್ಥಿಗಳು ಜನ ನಾಯಕರಾಗಲು ಸಾಧ್ಯವಿಲ್ಲ. ಜನಪರ ಕಾರ್ಯ ಹಾಗೂ ಜನಪರ ಸೇವೆ ಮಾಡುವವರು ಜನ ನಾಯಕರಾಗುತ್ತಾರೆ. ಜನ ಒಪ್ಪಿಕೊಂಡಾಗ ಮಾತ್ರ ನಾಯಕ ಆಗೋದು ಎಂದು ಹೇಳಿದರು.

3. ಯಡಿಯೂರಪ್ಪ ನವರನ್ನ ನಂತರ ಬಸವರಾಜ ಬೊಮ್ಮಾಯಿ ಅವರನ್ನ ಮಾಸ್ ಲೀಡರ್ ಅಂತ ಒಪ್ಪಿಕೊಳ್ಳೋಕೆ ಆಗುತ್ತಾ,?

ಬಸವರಾಜ ಬೊಮ್ಮಾಯಿ ಅವರು ಜನರ ನಾಡಿ ಮಿಡಿತವನ್ನ ಅರ್ಥ ಮಾಡಿಕೊಂಡಿರುವಂತಹ, ರಾಜಕೀಯ ಅನುಭವ ಇರುವಂತಹ, ಯಾವ ಸಂದರ್ಭದಲ್ಲಿ ಏನ್ ಮಾಡ್ಬೇಕು ಅಂತ ಗೊತ್ತಿರುವಂತಹ ಒಬ್ಬ ಮುಖ್ಯಮಂತ್ರಿ. ಒಂದೊಂದು ಸಂದರ್ಭ, ಸಮಯ ತನ್ನದೇ ಆದ ಸಮಯವನ್ನ ತೆಗದುಕೊಳ್ಳುತ್ತದೆ. ಒಂದೇ ದಿನಕ್ಕೆ ಯಾರನ್ನ ನಾಯಕ ಎಂದು ಒಪ್ಪಿಳ್ಳಲಿಲ್ಲ. ಮಹಾತ್ಮ ಗಾಂಧಿಯವರು ಹುಟ್ಟುವಾಗ್ಲೇ ಲೀಡರ್ ಆಗಿರ್ಲಿಲ್ಲ. ಅಮೇಲೆ ಅವರು ದಕ್ಷಿಣ ಆಫ್ರಿಕಾದಲ್ಲಿ ಭಾರತದಲ್ಲಿ ಕೊಟ್ಟ ನೇತೃತ್ವ ಹಾಗೂ ಚಿಂತನೆ ಕಾರಣಕ್ಕೆ ಅವರು ನಾಯಕರಾದರೂ ಒಂದೇ ದಿನಕ್ಕೆ ಯಾರು ನಾಯಕರಾಗಲ್ಲ.

ತನ್ನ ನಾಯಕತ್ವದ ಸಮರ್ಥ್ಯವನ್ನ ಪ್ರಕಟಿಕರಣಗೊಳಿಸುವ ದಾರಿಯಲ್ಲಿ ಬೊಮ್ಮಾಯಿ ಅವರು ಇದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಗೆದ್ದಾಗ ನಾಯಕತ್ವದ ಅಧಿಕೃತ ಮುದ್ರೆಯನ್ನ ರಾಜ್ಯದ ಜನ ಒಪ್ಪುತ್ತಾರೆ. ಅವರ ನಾಯಕತ್ವದಲ್ಲಿ ಚುನವಾಣೆ ಗೆದ್ದರೆ ಪಕ್ಷದ ಹೊರಗೆ ಹಾಗೂ ಪಕ್ಷದ ಒಳಗೆ ನಾಯಕತ್ವದ ಅಧಿಕೃತ ಮುದ್ರೆ ಸಿಗುತ್ತದೆ. ಅಮಿತ್ ಶಾ ಅವರು ಈಗಾಗಲೇ ಹೇಳಿದ್ದಾರೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದರಿಸುತ್ತೇವೆ ಎಂದರು.

4. ಸಿದ್ದರಾಮಯ್ಯ ವಿರುದ್ದ ಸಿ ಟಿ ರವಿಯವರು ಯಾಕೆ ಸಿದ್ರಾಮುಲ್ಲಾ ಖಾನ್ಎಂಬ ಪದವನ್ನೇ ಯಾಕೆ ಅಸ್ತ್ರವನ್ನಾಗಿ ಮಾಡಿಕೊಂಡಿದಿರಾ. ?

ವೈಚಾರಿಕವಾಗಿ ರಾಜಕೀಯ ನಾಯಕರನ್ನ ವಿರೋಧಿಸುತ್ತೇವೆ ಹೊರೆತು ವೈಯಕ್ತಿಕವಾಗಿ ಅಲ್ಲ. ವೈಯಕ್ತಿಕವಾಗಿ ನಮ್ಮಮಿಬ್ಬರ ನಡುವೆ ಯಾವುದೇ ಜಗಳಗಳಿಲ್ಲ. ನಮ್ಮ ವೈಯಕ್ತಿಕವಾದ ಸಂಬಂದ ಕೆಟ್ಟಿಲ್ಲ ಎಂದರು. ರಾಜಕಾರಣವಾಗಿ ಎದರಿಸುವಾಗ ಅವರ ಮಾತಿಗೆ ನಾವು ಮಾತನಾಡುತ್ತೇವೆ. ನಮ್ಮ ನಡುವೆ ವೈಯಕ್ತಿಕವಾಗಿ ಏನು ಇಲ್ಲ. ನನ್ನ ಜನರು ಹಿಂದು ಹುಲಿ ಅಂತಾರೆ ಅವರನ್ನ ಹುಲಿಯಾ ಅಂತಾರೆ ಎಂದು ಹೇಳುತ್ತಾರೆ ಎಂದರು.

Interview With Chikmagalur MLA CT Ravi

5. ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೈಕಮಾಂಡ್ ನಾಯಕರನ್ನ ಹೆಚ್ಚಾಗಿ ಕರೆಸುತ್ತಿರುವುದು ಯಾಕೆ.? ರಾಜ್ಯ ನಾಯಕರಿಗೆ ಚುನಾವಣೆ ಗೆಲ್ಲವ ಶಕ್ತಿ ಇಲ್ಲವೇ.?

ಗುಜರಾತಿನಲ್ಲಿ ನಾನು ಚುನಾವಣಾ ಉಸ್ತುವಾಗಿ ನಮ್ಮ ಪಾರ್ಟಿ ನಾವು ಎಲ್ಲಾ ಕಡೆ ಹೋಗುತ್ತೇವೆ, ಅವರನ್ನ ಬರುತ್ತಾರೆ. ನಮ್ಮ ಪಾರ್ಟಿಯ ಗೆಲುವಿಗೆ ಪರಸ್ಪರ ತಂಡವವಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ನವರು ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಯವರನ್ನ ಕರೆಸುತ್ತಾರೆ ಆಗ ನಾವು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನ ದುರ್ಬಲ ಎನ್ನಲು ಆಗುತ್ತಾ.?

ಹೆಚ್. ಡಿ ಕುಮಾರಸ್ವಾಮಿ ಅವರು ಟಿ ಆರ್ ಎಸ್ ಬೆಂಬಲವನ್ನ ಯಾಚಿಸಿದರು ಆದಕ್ಕೆ ಅವರನ್ನ ದುರ್ಬಲ ಎನ್ನಲು ಆಗುತ್ತಾ.? ನಾವು ಚೀನಾ, ಪಾಕಿಸ್ತಾನ ಬೆಂಬಲ ಕೋರಿಲ್ಲ, ಚೀನಾ, ಪಾಕಿಸ್ತಾನ ಬೆಂಬಲ ಕೋರುವವರು ಕಾಂಗ್ರೆಸ್ ಪಾರ್ಟಿ. ನಾವು ನಮ್ಮ ನಾಯಕರಾದ ಮೋದಿ, ಅಮಿತ್ ಶಾ, ನಡ್ಡಾ ಜೀ ಅವರ ಬೆಂಬಲವನ್ನ ಕೋರಿದ್ದೇವೆ. ನಾವು ಚೀನಾ, ಪಾಕಿಸ್ತಾನದ ನೆರವು ಕೋರಿ ರಾಜಕಾರಣ ಮಾಡುವವರಲ್ಲಾ ಎಂದು ಹೇಳಿದರು.

6. ಎಷ್ಟೇ ಬಾರೀ ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದ್ರೂ ಬಿಜೆಪಿ ಗೆಲ್ಲಲ್ಲ ಎಂದು ಕಾಂಗ್ರೆಸ್ ಟೀಕೆಗೆ ಉತ್ತರಿಸಿ.?

2014 ಲೋಕಸಭಾ ಚುನಾವಣೆ ಪೂರ್ವದಲ್ಲಿ ಒಂದು ಸೀಟ್ ಬಿಜೆಪಿ ಬರಲ್ಲ ಅಂತ ಹೇಳಿದ್ರು, ಅತಿ ಹೆಚ್ಚು ಸ್ಥಾನ ಬಂದಿದ್ದು ಬಿಜೆಪಿಗೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪಕ್ಷವನ್ನ ಅವರಿಗೆ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಈಗ ಹೇಗೆ ಗೆಲ್ಲಿಸಲು ಆಗುತ್ತೇ.? ಗುಜರಾತ್, ಗೋವಾ, ಉತ್ತರ ಪ್ರದೇಶದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬಂದಿದ್ದೇವೆ. ನಮ್ಮ ಸಮರ್ಥ್ಯವನ್ನ ನಾವು ಸಾಭಿತು ಪಡಿಸಿದ್ದೇವೆ. ದುರ್ಬಲವಾಗಿರುವುದು ಕಾಂಗ್ರೆಸ್ ಪಾರ್ಟಿ, ಅವರಿಗೆ ಭಯ ಇದೆ. ಯಾವುದೇ ರಾಜ್ಯಕ್ಕೆ ಮೋದಿಯವರು ಹೋದ್ರೆ.

ಆ ರಾಜ್ಯದ ಚುನಾವಣಾ ಫಲಿತಾಂಶಕ್ಕೆ ಕನಿಷ್ಟ 5 % ಮೋದಿಯರ ಪ್ರಯತ್ನದಿಂದ ಆಗುತ್ತೆ ಅನೋ ಭಯ ಇದೆ. ಮೋದಿ ಬಂದ್ರೆ ಮತ್ತೆ ಅಧಿಕಾರಕ್ಕೆ ಬರುತ್ತೇ ಅನೋ ಭಯ ಇದೆ. ಕಲಬುರಗಿಗೆ ಮೋದಿ ಬಂದಾಗ ಹುಚ್ಚೆದ್ದು ಜನ ಬಂದಿದ್ರೂ. ಇದನ್ನ ನೋಡಿ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಹೀಗೆ ಮೋದಿ ಎಲ್ಲಾ ಜಿಲ್ಲೆಗೂ ಪ್ರವಾಸ ಮಾಡಿದ್ರೆ ಗೆಲ್ಲುವ ಅಭ್ಯರ್ಥಿಗಳು ಸೋಲುತ್ತಾರೆ ಎನ್ನವ ಭಯ ಕಾಂಗ್ರೆಸ್ ಗೆ ಶುರುವಾಗಿದೆ ಎಂದು ಹೇಳಿದರು.

7. ನರೇಂದ್ರ ಮೋದಿಯವರ ಎಲ್ಲಾ ಮಾತನ್ನ ಕೇಳುವ ಬಿಜೆಪಿ ನಾಯಕರು ಯಾಕೆ ಫ್ಯಾಮಿಲಿ ಪೊಲಿಟಿಕ್ಸ್ ಗೆ ಬ್ರೇಕ್ ಹಾಕ್ತಾ ಇಲ್ಲ.?

ಪ್ರಜಾಪ್ರಭುತ್ವದ ಆಶಯ ಇರುವುದು ನಾಯಕತ್ವ ಜನರ ನಡುವನಿಂದ ಬೆಳೆದು ಬರಬೇಕು ಎಂಬ ಆಶಯ. ನಮ್ಮ ಪಾರ್ಟಿ ಯಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶ ಇದೆ. ಜನರ ನಡುವೆ ಬೆಳೆಯಲು ಎಲ್ಲಾರಿಗೂ ಅವಕಾಶ ಇದೆ. ಕೆಳ ಹಂತದಿಂದಲೂ ಬೆಳೆಯಬೇಕು, ಹಾಗೇ ಬೆಳೆಸುವ ವ್ಯವಸ್ಥೆಯೂ ನಮ್ಮ ಪಾರ್ಟಿಯಲ್ಲಿ ಇದೆ. ಈ ವ್ಯವಸ್ಥೆ ಇಲ್ಲದೇ ಇದ್ರೆ ಮಂತ್ರಿ ಮಕ್ಕಳು ಮಂತ್ರಿಯಾಗುವುದು, ಶಾಸಕರ ಮಕ್ಕಳು ಶಾಸಕರಾಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಲಕ್ಷಣ ಅಲ್ಲ. ಜನರ ನಡುವೆ ಯಾರು ಬೇಕಾದ್ರೂ ಬೆಳೆಯಬಹುದು. ಜೆಡಿಎಸ್ ನಾಯಕರ ಪ್ರಜಾಪ್ರಭುತ್ವ ವ್ಯಾಕ್ಯವನ್ನ ನಾನು ಮಾಡಲ್ಲ. ದೇವೇಗೌಡರ ಕುಟುಂಬದಲ್ಲಿನ ಪ್ರಜಾಪ್ರಭುತ್ವದ ವ್ಯಾಕ್ಯಕ್ಕೂ ನಮ್ಮ ಪ್ರಜಾಪ್ರಭುತ್ವದ ವ್ಯಾಖ್ಯನಕ್ಕೂ ವ್ಯತ್ಯಾಸವಿದೆ ಎಂದು ಹೇಳಿದರು.

Interview With Chikmagalur MLA CT Ravi

8.ಚುನಾವಣಾ ಹೊತ್ತಲಿ ಬಿಜೆಪಿ ರೌಡಿ ಶೀಟರ್ ಗಳಿಗೆ ಮಣೆ ಹಾಕುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡ್ತಾ ಇದ್ರೂ ಯಾಕೆ ಸಮರ್ಥವಾದ ಉತ್ತರವನ್ನ ನೀಡುವಲ್ಲಿ ಬಿಜೆಪಿ ವಿಫವಾಗಿದೆ.?

ರೌಡಿ ಶೀಟರ್ ಮಣೆ ಹಾಕುತ್ತೇವೆ ಎಂಬ ಮಾತನ್ನ ಕಾಂಗ್ರೆಸ್ ಹೇಳೋಕೆ ಯಾವ ನೈತಿಕತೆಯನ್ನು ಕಾಂಗ್ರೆಸ್ ನಾಯಕರು ಉಳಿಸಿಕೊಂಡಿಲ್ಲ. ಜೈಲಿನಲ್ಲಿ, ಬೇಲ್ ಮೇಲೆ ಇರುವದನ್ನ ಅವರು ಮೆರಿಟ್ ಅಂತ ಅವರು ಪರಿಗಣಿಸುತ್ತಾರೆ. ಆದರೆ ನಾವು ಮೆರಿಟ್ ಅಂತ ಪರಿಗಣಿಸಿಲ್ಲ. ಸಾರ್ವಜನಿಕ ಚಳುವಳಿಯಲ್ಲಿ ಇರುವವರಿಗೆ ಪೊಲೀಸರು ರೌಡಿ ಪಟ್ಟ ಕಟ್ಟುವುದು ಬೇರೆ, ವೃತ್ತಿಪರ ರೌಡಿಗಳೇ ಬೇರೆ. ನಾವು ಯಾವುದೇ ವೃತ್ತಿಪರ ರೌಡಿಗಳನ್ನ ಬೆಳಸಿಲ್ಲ,ಬಳಸಿಲ್ಲ, ಕಾಂಗ್ರೆಸ್ ವೃತ್ತಿಪರ ರೌಡಿಗಳನ್ನ ಬೆಳಸಿದೆ,ಬಳಸಿದೆ ಎಂದು ಕಿಡಿಕಾಪರಿದರು.

9. ಪೇ ಸಿಎಂ ಅಭಿಯಾನಕ್ಕೆ ಸಮರ್ಥವಾದ ಉತ್ತರ ಕೊಡಲು ಬಿಜೆಪಿ ವಿಫಲವಾಗಿದೆಯೇ.?

ಒಂದು ಟೂಲ್ ಕಿಟ್ ರಾಜಕಾರಣದ ಭಾಗವಾಗಿ ಪೇ ಸಿಎಂ, 40% ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮವನ್ನ ಕೈಗೊಂಡಿದ್ದಾರೆ. ಆಧಾರ ಸಹಿತವಾಗಿ ಆರೋಪ ಮಾಡಿದರೇ ಅರ್ಥ ಇರುತ್ತದೆ. ಸುದ್ದಿಗಾಗಿ ಆರೋಪ ಮಾಡಿ ಕಾನೂನು ಕ್ರಮವನ್ನ ಎದರಿಸುತ್ತಿದ್ದಾರೆ. ಆಧಾರ ಇದ್ರೆ ಅಧಿವೇಶನದಲ್ಲಿ ಯಾಕೆ ಆಧಾರಗಳನ್ನ ನೀಡದೇ ಪಲಾಯನ ಮಾಡಿದರು ಎಂದರು.

10. ಬಿಜೆಪಿ ಈ ಬಾರೀ ಪೂರ್ಣ ಬಹುಮತವನ್ನ ಪಡೆದ ಸರ್ಕಾರ ರಚನೆ ಮಾಡಲಿದೆಯೇ.?

ನಾವು ಗೆಲ್ಲುವ ವಿಶ್ವಾಸವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿಗಳು ಸಾಕಷ್ಟು ಜನರಿದ್ದಾರೆ ಅದರ ಲಾಭ ಬಿಜೆಪಿಗೆ ಆಗಲಿದೆ. ರಾಜ್ಯ ಸರ್ಕಾರವೂ ಸಾಕಷ್ಟು ಕಾರ್ಯಕ್ರಮಗಳನ್ನ ನೀಡದೆ. ಹೀಗಾಗಿ ಎಲ್ಲಾ ಲಾಭ ಬಿಜೆಪಿ ಆಗಲಿದೆ. ಉಕ್ರೇನ್ ನಿಂದ 33 ಸಾವಿರ ಜನರನ್ನ ಸುರಕ್ಷಿತವಾಗಿ ಕರೆ ತಂದ್ವಿ ಅದರ ಲಾಭ ಬಿಜೆಪಿಗೆ ಆಗುತ್ತದೆ. ನಮ್ಮ ಯೋಜನೆಗಳ ಲಾಭ ನಮಗೆ ಆಗುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಹಗರಣಗಳೇ ಹೆಚ್ಚಾಗಿದ್ವು, ಜಾತಿ ರಾಜಕಾರಣ ಟ್ಯಾಗ್ ಕೊಟ್ಟಿದ್ದು ಕಾಂಗ್ರೆಸ್. ಜಾತಿಯ ಮೇಲೆ ರಾಜಕಾರಣ ಮಾಡುತ್ತದೆ ಅದೊಂದು ಕೆಟ್ಟ ನೀತಿ ಎಂದು ವಾಗ್ದಾಳಿ ನಡೆಸಿದರು.

Interview With Chikmagalur MLA CT Ravi

11 ಹೈಕಮಾಂಡ್ ನಾಯಕರು ಭಾಗವಹಿಸುವ ಕಾರ್ಯಕ್ರಮದಲ್ಲಿ ಬಿ ಎಸ್ ಯಡಿಯೂರಪ್ಪ ನವರು ಗೈರಾಗುತ್ತಿರುವುದು ಯಾಕೆ.?ಬಿಜೆಪಿ ಸರಿಯಾಗಿ ಯಡಿಯೂರಪ್ಪ ನವರನ್ನ ನಡೆಸಿಕೊಳ್ಳುತ್ತಿಲ್ಲವೇ.?

ಇದು ಕಾಂಗ್ರೆಸ್ ನಾಯಕರ ಸುಳ್ಳು ಆರೋಪ. ಯಡಿಯೂರಪ್ಪನವರಿಗೆ ಎಲ್ಲಿಯೂ ಗೌರವ ಕಡಿಮೆಯಾಗಿಲ್ಲ. ಯಡಿಯೂರಪ್ಪ್ನವರಿಗಿರುವ ಜನಪ್ರಿಯತೆ ಬಿಜೆಪಿಗೆ ದಕ್ಕಬಾರದು ಎಂದು ಬಿಜೆಪಿ ಷಡ್ಯಂತ ಮಾಡುತ್ತಿದ್ದಾರೆ. ಹಿಂದೆ ವೀರಶೈವ ಲಿಂಗಾಯತವನ್ನ ಹೊಡೆಯಲು ಪ್ರಯತ್ನ ಮಾಡಿದ್ರೂ ಯಾಕೆ ಅಂದ್ರೆ ಹಿಡಿಯಾಗಿ ಸಿಗುವ ಲಿಂಗಾಯತ ಮತಗಳು ಬಿಜೆಪಿಗೆ ಸಿಗಬಾರದು ಎಂಬ ಷಡ್ಯಂತ್ರ. ಜಾತಿ ಜಾತಿಗಳನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ನಮ್ಮದು ಜೋಡಿಸುವ ಕೆಲಸ ಎಂದು ಹೇಳಿದರು.

12. ಯತ್ನಾಳ್ ಅವರು ಪಕ್ಷದ ವಿರುದ್ದವಾಗಿ ಹಾಗೂ ಬಿಜೆಪಿ ನಾಯಕರ ವಿರುದ್ದವಾಗಿ ಹೇಳಿಕೆಯನ್ನ ನೀಡಿದ್ರು ಸಹ ಯಾಕೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿಲ್ಲ.ಯತ್ನಾಳ್ ಅಂದ್ರೆ ಭಯವೇ.?

ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಪಾರ್ಟಿಯ ಒಬ್ಬ ಲೀಡರ್, ಆ ಭಾಗದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಎಲ್ಲಿ ಹೇಗೆ ಹೇಳ್ಬೇಕು ಗೊತ್ತಿದೆ. ಯಾವುದನ್ನ ಎಲ್ಲಿ ಮಾತ್ನಾಡ್ಬೇಕು ಗೊತ್ತಿದೆ ಎಂದು ಹೇಳಿದ್ದಾರೆ.

13 ರಸ್ತೆ ಗುಂಡಿ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತ್ನಾಡಿ ಎಂದು ರಾಜ್ಯದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆ ನಿಮ್ಮ ಪಕ್ಷಕ್ಕೆ ಡ್ಯಾಮೇಜ್ ಆಗಲ್ವೇ. ?

ಯಾವ ಸಂದರ್ಭದಲ್ಲಿ ಆ ವಿಚಾರವನ್ನ ಅವರು ಹೇಳಿದ್ದಾರೆ ಎಂಬುದನ್ನ ಗಮನಿಸಬೇಕು. ಅಭಿವೃದ್ದಿಗೆ ನಮ್ಮ ಪಕ್ಷ ಆದ್ಯತೆಯನ್ನ ಕೊಟ್ಟಿದೆ, ಲವ್ ಜಿಹಾದ್ ಅಂತ ವಿಚಾರಗಳಿಗೆ ನಿರ್ಲಕ್ಷವೂ ಸಲ್ಲದು. ಅದರಿಂದ ದೇಶದ ಸುಭದ್ರತೆಗೆ ಅಪಾಯದ ಸ್ಥಿತಿ ಇದೆ. ಅಭಿವೃದ್ದಿಯನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

14. ಬಿಜೆಪಿಗೆ ಅಭಿವೃದ್ದಿ ಅಜೆಂಡಾವೋ ಅಥವಾ ಹಿಂದುತ್ವವೋ.?

ಅಭಿವೃದ್ದಿಯನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ, ಹಿಂದುತ್ವ ನಮ್ಮಐಡಿಯಾಲಜಿ. ಹಿಂದುತ್ವ ಇಲ್ಲದೆ ಭಾರತವನ್ನ ಕಲ್ಪನೆ ಮಾಡಲು ಸಾದ್ಯವಿಲ್ಲ. ಅಭಿವೃದ್ದಿಗೆ ಯಾವಾಗಲೂ ಆದ್ಯತೆ ಕೊಟ್ಟಿದ್ದೇವೆ. ನಾವು ಅಭಿವೃದ್ದಿಗೆ ಕೊಟ್ಟ ಆದ್ಯತೆಯನ್ನ ಯಾವ ಸರ್ಕಾರವೂ ಕೊಟ್ಟಿಲ್ಲ.

15. ಬಿಜೆಪಿಯಲ್ಲೂ ಬಣಗಳಿವೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತೇ. ಸಿ ಟಿ ರವಿ ಅವರು ಯಾವ ಬಣಕ್ಕೆ ಸೇರುತ್ತಾರೆ.?

ನಮ್ಮಲ್ಲಿ ಬಣ ಇಲ್ಲ. ಬಣಕ್ಕೊಂದು ಸಿಂಬಲ್ ಸಹ ಇಲ್ಲ, ನಾವೆಲ್ಲಾ ಬಿಜೆಪಿಯವರು. ಹಿಂದಿನಿಂದಲೂ ನಾವು ಬಿಜೆಪಿಯೇ..ನಾವೆಲ್ಲಾವೂ ಒಗ್ಗಟ್ಟಿನಲ್ಲೇ ಇದ್ದೇವೆ.

16. ಪ್ರಭಾವಿ ನಾಯಕರಾದ ಸಿದ್ದರಾಮಯ್ಯನವರಿಗೆ ಯಾಕೆ ಕ್ಷೇತ್ರ ಹುಡುಕಾಟ ಇಷ್ಟೊಂದು ಗೊಂದಲಕ್ಕೆ ಕಾರಣವಾಯ್ತು.?

ಸಿದ್ದರಾಮಯ್ಯ ಅವರನ್ನ ನಾವು ದುರ್ಬಲರು ಅಂತ ಪರಿಗಣಿಸುವುದಿಲ್ಲ. ವಾಸ್ತವಿಕ ಸತ್ಯ ಎಂದರೇ ಚಾಮುಂಡೇಶ್ವರಿಯಲ್ಲಿ ಸೋತರು. 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಇದ್ರೂ ಸಹ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ ಎಂಬುದು ವಾಸ್ತವಿಕವಾಗಿರುವ ಸತ್ಯ. ನಾವು ಕಾಂಗ್ರೆಸ್ ಪಾರ್ಟಿಯಲ್ಲಿ ಇರುವವರು ಎಲ್ಲಾರೂ ಸೋಲಬೇಕು ಎಂದು ಬಯಸುವವರು ಎಂದರು.

17. ಈ ಬಾರಿ ಚುನಾವಣಾ ಫಲಿತಾಂಶ ಅತಂತ್ರ ಆದರೆ ಜೆಡಿಎಸ್ ಜೊತೆಗಿನ ಮೈತ್ರಿ ಪಕ್ಕನಾ .?

ಆ ರೀತಿಯ ಪರಿಸ್ಥಿತಿಯೇ ಉದ್ಭವವಾಗಲ್ಲ. ನಾವೇ ಅಧಿಕಾರಕ್ಕೆ ಬರುತ್ತವೇ ಎಂದು ವಿಶ್ವಾಸ ವ್ಯಕ್ತಪಡಿಸಿರು. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಗೆ ಎಲ್ಲಿದೆ ಜಾಗ. ಬಂದ ಅಧಿಕಾರವನ್ನೇ ಅವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಮತ್ತೆ ಭ್ರಮೆ ಯಾಕೆ. ಬಂದಂತಹ ಮೈತ್ರಿ ಸರ್ಕಾರವನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ಒಂದು ವರ್ಷದ ಹಿಂದೆ ಗೋವಾ ಚುನಾವಣೆ ನಡೆಯಿತು. ಕರ್ನಾಟಕರಿಂದ ಒಬ್ಬ ಲೀಡರ್ ಸ್ಪಷಲ್ ಏರ್ ಕ್ರಪ್ಟ್ ತಗೊಂಡು ಬಂದಿದ್ರು ಅಲ್ಲಿನ ಶಾಸಕರನ್ನ ಕರೆತರಲು. ಗೆದ್ದ ಎಂ ಎಲ್ ಎ ಗಳು ಬಿಜೆಪಿಗೆ ಸೇರಿದ್ರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಲೋಕಸಭಾ ಚನಾವಣೆ ಹೊತ್ತಿಗೆ ಕಾಂಗ್ರೆಸ್ ಶಾಸಕರು ಬಹುತೇಕ ಜನ ಬಿಜೆಪಿ ಬರುತ್ತಾರೆ ಎಂದು ಹೇಳಿದರು.

English summary
Congress party wants support from China and Pakistan for elections said CT Ravi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X