ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಕೇಸ್: ನೂತನ ಎಸ್‌ಪಿಪಿ ಬಿವಿ ಆಚಾರ್ಯ ಸಂದರ್ಶನ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ. 29: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನು ನೇಮಕ ಮಾಡಿದೆ. ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಬಹುದು ಎಂದು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.

ಹಿಂದೊಮ್ಮೆ ಜಯಲಲಿತಾ ಪ್ರಕರಣದಿಂದ ಹೊರಹೋಗಿದ್ದ ಆಚಾರ್ಯ ಅವರಿಗೆ ಮತ್ತೊಮ್ಮೆ ಜವಾಬ್ದಾರಿ ಒಲಿದು ಬಂದಿದೆ. ಅಭಿಯೋಜಕರಾಗಿ ನೇಮಕವಾದ ನಂತರ ಬಿ.ವಿ. ಆಚಾರ್ಯ ಒನ್ಇಂಡಿಯಾದೊಂದಿಗೆ ಮಾತನಾಡಿದ್ದು ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಮುಂದೆ ಪ್ರಕರಣ ಯಾವ ಹಂತದಲ್ಲಿ ಸಾಗಲಿದೆ? ಅದರಲ್ಲಿ ಆಚಾರ್ಯ ಪಾತ್ರವೇನು? ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.[ಜಯಲಲಿತಾ ಪ್ರಕರಣ : ಬಿವಿ ಆಚಾರ್ಯ ನೂತನ ಎಸ್ ಪಿಪಿ]

 jayalalithaa

* ಹಿಂದೊಮ್ಮೆ ರಾಜೀನಾಮೆ ನೀಡಿದ್ದವರು ಮತ್ತೆ ಏಕೆ ಪ್ರಕರಣವನ್ನು ಕೈಗೆತ್ತುಕೊಂಡಿರಿ?
ರಾಜ್ಯ ಸರ್ಕಾರ ನನಗೆ ಅಭಿಯೋಜಕರಾಗಿ ಕೆಲಸ ಮಾಡುವಂತೆ ಮತ್ತೊಮ್ಮೆ ಕೇಳಿಕೊಂಡಿತು. ನನಗೆ ಈ ಪ್ರಕರಣದ ಬಗ್ಗೆ ಸಂಪೂರ್ಣ ತಿಳಿವಳಿಕೆಯಿದ್ದು ಕಡಿಮೆ ಸಮಯದಲ್ಲಿ ಎಲ್ಲ ವಿವರ ಕಲೆಹಾಕಲು ಮತ್ತು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಸರ್ಕಾರ ತಿಳಿದುಕೊಂಡಿರಬೇಕು.

* ಪ್ರಕರಣದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ಪ್ರಕರಣದಲ್ಲಿ ನನ್ನ ಪಾತ್ರ ನಿರ್ಬಂಧಿತವಾಗಿದೆ. ಸುಪ್ರೀಂ ಕೋರ್ಟ್ ಹೇಳಿದಂತೆ ಲಿಖಿತ ದಾಖಲೆಗಳನ್ನು ಸಲ್ಲಿಕೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನ್ಯಾಯಾಲಯದ ಆದೇಶದಂತೆ ಮುಂದಿನ ಹೆಜ್ಜೆ ಇಡಲಾಗುವುದು.[ಆಚಾರ್ಯ ಹಿಂದೆಯೂ ಮಾತನಾಡಿದ್ದರು]

* ಹೆಚ್ಚಿನ ಒತ್ತಡದಿಂದ ಹಿಂದೆ ರಾಜೀನಾಮೆ ನೀಡಿದ್ರಾ?
ಮೊದಲೇ ಹೇಳಿದಂತೆ ನನಗೆ ಇಲ್ಲಿ ಯಾವುದೇ ವಿಶೇಷ ಅಧಿಕಾರಗಳಿಲ್ಲ. ಅಂದ ಮೇಲೆ ಒತ್ತಡದ ಮಾತು ಎಲ್ಲಿಂದ ಬಂತು? ನ್ಯಾಯಾಲಯ ಮತ್ತು ಸರ್ಕಾರದ ಸೂಚನೆಯಂತೆ ಕೆಲಸ ಮಾಡುತ್ತೇನೆ. ಇದೇ ನನ್ನ ಜವಾಬ್ದಾರಿಯೂ ಆಗಿದೆ.

* ಯಾವಾಗ ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳಬಹುದು?
ಇದರ ಬಗ್ಗೆ ನಾನು ಯಾವ ಹೇಳಿಕೆ ನೀಡಲು ಬಯಸುವುದಿಲ್ಲ. ನ್ಯಾಯಾಲಯ ಪ್ರಕರಣದ ಕುರಿತಾಗಿ ಎಲ್ಲ ವಿಭಾಗಗಳಲ್ಲೂ ವಿಚಾರಣೆ ಮಾಡಿದೆ. ನಿಗದಿಯಂತೆಯಾದರೆ ಮೇ. 12ಕ್ಕೆ ಅಂತಿಮ ತೀರ್ಪು ಘೋಷಣೆಯಾಗಬಹುದು. ಆದರೆ ನ್ಯಾಯಾಲಯಕ್ಕೆ ತಿಂಗಳ ಕಾಲ ರಜೆ ಇದೆ.[ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

* ನ್ಯಾಯಾಧೀಶರು ಅಂತಿಮ ತೀರ್ಪು ಘೊಷಣೆಗೆ ಹಿಂದೇಟು ಹಾಕಿದರೆ?
ತೀರ್ಮಾನ ಘೋಷಣೆಗೆ ನ್ಯಾಯಾಧೀಶರು ಹಿಂದೇಟು ಹಾಕಿದರೆ, ಈ ಬಗ್ಗೆ ನ್ಯಾಯಾಲಯಕ್ಕೆ ಅವರೊಂದು ಲಿಖಿತ ಮನವಿ ಸಲ್ಲಿಕೆ ಮಾಡಬೇಕಾಗುತ್ತದೆ. ಅಲ್ಲದೇ ಸಮಯಾವಕಾಶ ಕೋರಿಕೆ ಸಲ್ಲಿಕೆ ಮಾಡಬೇಕಾಗುತ್ತದೆ.[ಜಯಾ ಕೇಸ್ ಬಗ್ಗೆ ಭವಾನಿ ಸಿಂಗ್ ಹೇಳಿದ್ದೇನು]

* ಪ್ರಕರಣದಿಂದ ಹೊರಗೆ ನಿಂತು ಏನನ್ನು ಹೇಳುತ್ತೀರಿ?
ಈ ಬಗ್ಗೆ ಏನೂ ಹೇಳಲಾರೆ. ನ್ಯಾಯಾಲಯದ ಸ್ಪಷ್ಟ ತೀರ್ಮಾನ ಹೊರಬರುವ ಮುನ್ನ ಕಮೆಂಟ್ ಮಾಡುವುದು ಸರಿಯಲ್ಲ. ನನ್ನ ಹೊಣೆಗಾರಿಕೆ ನಿಭಾಯಿಸಲು ನಾನು ಬದ್ಧನಾಗಿದ್ದೇನೆ.

English summary
The appointment of senior counsel B V Acharya in the J Jayalalithaa disproportionate assets came as no surprise. If anyone could file the written submissions in just one day it was only him as he is well versed with the case and was in fact the first special public prosecutor of the case. Interview with Oneindia, Acharya says that his role is very limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X