• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಾಯುಕ್ತರನ್ನು ಬಂಧಿಸಿ, ವಿಚಾರಿಸಲು ಸಕಾಲ: ನ್ಯಾ. ಸಂತೋಷ್ ಹೆಗ್ಡೆ

By ವಿಕಾಸ್ ನಂಜಪ್ಪ
|

ಬೆಂಗಳೂರು, ಸೆ.22: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಪರಿಹಾರ ಸಿಗುವ ಹಾಗೆ ಕಾಣುತ್ತಿಲ್ಲ. ಭಾಸ್ಕರ್ ರಾವ್ ಅವರ ಎರಡು ತಿಂಗಳ ರಜೆ ಮುಗಿಯುವ ಲಕ್ಷಣಗಳಿಲ್ಲ. ಆರೋಪಿ ಪುತ್ರ ಭಾಸ್ಕರ್ ರಾವ್ ಅವ್ಯವಹಾರದ ಸಂಪೂರ್ಣ ಚಿತ್ರಣ ಸಿಗಬೇಕಾದರೆ ಲೋಕಾಯುಕ್ತ ಭಾಸ್ಕರ್ ರಾವ್ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಗಿದ್ದ ಘನತೆ, ಗೌರವ ಮಣ್ಣುಪಾಲಾಗುತ್ತಿದೆ. ಎರಡು ತಿಂಗಳ ರಜೆ ಮೇಲೆ ಹೋಗಿರುವ ಭಾಸ್ಕರ್ ರಾವ್ ಅವರು ಕರ್ತವ್ಯ ಮರೆತು ಆರಾಮಾಗಿರುವುದು ಎಷ್ಟು ಸರಿ? ಸಂಸ್ಥೆಯಲ್ಲಿ ಬಾಕಿ ಇರುವ ಕಡತಗಳು ರಾಶಿಗಟ್ಟಲೇ ತುಂಬಿಕೊಂಡಿವೆ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ಒನ್ ಇಂಡಿಯಾಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.[ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು(ಮಾಜಿ ಪಿಆರ್‌ಒ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್ ಕುಮಾರ್) ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.[ವಿವರ ಇಲ್ಲಿದೆ]

ನ್ಯಾ. ಭಾಸ್ಕರ್ ರಾವ್ ಅವರನ್ನು ಬಂಧಿಸಬೇಕೆ?

ನ್ಯಾ. ಭಾಸ್ಕರ್ ರಾವ್ ಅವರನ್ನು ಬಂಧಿಸಬೇಕೆ?

ಹೌದು, ಈ ಸಮಯಕ್ಕೆ ಭಾಸ್ಕರ್ ರಾವ್ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸುವುದು ಒಳ್ಳೆಯದು. ಭಾರತೀಯ ದಂಡ ಸಂಹಿತೆ ಸೆಕ್ಷನ್ 109 ಅನ್ವಯ ಕ್ರೈಂಗೆ ನೆರವಾಗುವ ಅಥವಾ ಗೊತ್ತಿದ್ದು ಸುಮ್ಮನಿರುವುದು ಕೂಡಾ ಅಪರಾಧ ಎನಿಸುತ್ತದೆ. ಅಪರಾಧಕ್ಕೆ ಪ್ರಚೋದನೆ ನೀಡಿದ್ದಂತಾಗುತ್ತದೆ. ಈ ಸೆಕ್ಷನ್ ಬಡವರಿಗಷ್ಟೇ ಅಲ್ಲ ಹೈ ಫ್ರೊಫೈಲ್ ವ್ಯಕ್ತಿಗಳಿಗೂ ಅನ್ವಯವಾಗುತ್ತದೆ ಎಂಬುದನ್ನು ನಿರೂಪಿಸಲು ಇದು ಸಕಾಲ.

ಭಾಸ್ಕರ್ ರಾವ್ ಅವರ ಪಾತ್ರವೇನು?

ಭಾಸ್ಕರ್ ರಾವ್ ಅವರ ಪಾತ್ರವೇನು?

ಅಶ್ವಿನ್ ರಾವ್ ಅವರ ಅವ್ಯವಹಾರದ ಬಗ್ಗೆ ನನಗೆ ಅರಿವಿಲ್ಲ ಎಂದು ಭಾಸ್ಕರ್ ರಾವ್ ಹೇಳಲು ಸಾಧ್ಯವೇ? ಭಾಸ್ಕರ್ ರಾವ್ ಅವರ ಕಚೇರಿ ಹಾಗೂ ಮನೆಯಲ್ಲೇ ಅವ್ಯವಹಾರಗಳು ನಡೆದಿವೆ. ಫೋನ್ ಕರೆಗಳು, ಬೆದರಿಕೆ ಕರೆಗಳು ಎಲ್ಲವೂ ಮನೆಯ ಫೋನ್ ನಂಬರ್ ನಿಂದ ಮಾಡಲಾಗಿದೆ. ಈ ಬಗ್ಗೆ ಗೊತ್ತಿದ್ದರೂ ಭಾಸ್ಕರ್ ರಾವ್ ಅವರು ಬಾಯ್ಬಿಟ್ಟಿಲ್ಲ. ಎರಡು ತಿಂಗಳಿನಿಂದ ರಜೆ ಹೋಗುವ ತುರ್ತು ಪರಿಸ್ಥಿತಿ ಏನಿದೆಯೋ ಗೊತ್ತಿಲ್ಲ.

ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಬೇಕೆ?

ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಬೇಕೆ?

ಕೆಲವು ವ್ಯಕ್ತಿಗಳ ವಿರುದ್ಧ ಆರೋಪ ಕೇಳಿಬಂದ ತಕ್ಷಣ ಸಂಸ್ಥೆಯನ್ನೇ ಮುಚ್ಚುವ ಬಗ್ಗೆ ಮಾತನಾಡಬಾರದು. ಸಂಸ್ಥೆಯಲ್ಲಿ ಕೇಳಿಬಂದಿರುವ ಆರೋಪಗಳನ್ನು ಅದು ಬಗೆಹರಿಸಿಕೊಳ್ಳಬೇಕು. ಸಂಸ್ಥೆಯ ಮೇಲೆ ನಂಬಿಕೆ ಇಟ್ಟುಕೊಂಡಿರುವ ಇತರ ವ್ಯಕ್ತಿಗಳ ಬಗ್ಗೆಯೂ ಆಲೋಚನೆ ನಡೆಸಬೇಕು.

ಲೋಕಾಯುಕ್ತ ಸಂಸ್ಥೆ ನಿಷ್ಕ್ರಿಯಗೊಂಡಿದೆಯೇ?

ಲೋಕಾಯುಕ್ತ ಸಂಸ್ಥೆ ನಿಷ್ಕ್ರಿಯಗೊಂಡಿದೆಯೇ?

ಲೋಕಾಯುಕ್ತ ಎಂದರೆ ಒಬ್ಬ ವ್ಯಕ್ತಿಯಲ್ಲ. ಒಂದು ಸಂಸ್ಥೆ. ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ವ್ಯಕ್ತಿಯಾಗಿದ್ದವರು ಈ ಪ್ರಕರಣದಲ್ಲಿ ಸರಿಯಾದ ಹೆಜ್ಜೆ ಇಟ್ಟು ಮಾದರಿಯಾಗಬೇಕಿತ್ತು. ಲೋಕಾಯುಕ್ತರಾಗಿ ಭಾಸ್ಕರ್ ರಾವ್ ನೇಮಕವಾಗುವ ಸಂದರ್ಭದಲ್ಲಿ ಹೈಕೋರ್ಟಿನ ಬಾರ್ ಅಸೋಸಿಯೇಷನ್ಸ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಸುತ್ತೋಲೆ ಹೊರಡಿಸಿದ್ದನ್ನು ಮರೆಯುವಂತಿಲ್ಲ.

ಲೋಕಾಯುಕ್ತರ ರಜೆಯಿಂದ ತೊಂದರೆ ಏನು?

ಲೋಕಾಯುಕ್ತರ ರಜೆಯಿಂದ ತೊಂದರೆ ಏನು?

ಮುಖ್ಯವಾಗಿ ಪ್ರಕರಣಗಳ ತನಿಖೆ ವಿಳಂಬವಾಗುತ್ತದೆ. ಲೋಕಾಯುಕ್ತರು ರಜೆ ಮೇಲೆ ಹೋದಾಗ, ಉಪ ಲೋಕಾಯುಕ್ತರು ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಆದರೆ, ಅನೇಕ ಕೇಸ್ ಗಳಲ್ಲಿ ಲೋಕಾಯುಕ್ತರ ಸಹಿ ಇಲ್ಲದೆ ಪ್ರಗತಿ ಕಾಣಲು ಸಾಧ್ಯವಿಲ್ಲ. ಆಡಳಿತ ಯಂತ್ರ ಸ್ಥಗಿತಗೊಳ್ಳುತ್ತದೆ. ಒಟ್ಟಾರೆ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಲೋಕಾಯುಕ್ತರು ರಜೆ ಹೋದರೆ, ಅವರ ಮುಂದಿನ ಕಾರ್ಯಗಳನ್ನು ಬೇರೆಯೊಬ್ಬರಿಗೆ ವಹಿಸಿಕೊಡಬೇಕು. ಅದರೆ, ಇಲ್ಲಿ ಎಲ್ಲವೂ ಸರಿ ಇಲ್ಲ.

English summary
The Lokayukta’s office is facing corruption charges and to add to it the son of Justice Rao has been accused of making extortion calls using his father’s name. Former Lokayukta of Karnataka, Justice Santhosh Hegde says, “enough is enough.” In this interview with OneIndia he says that the time has come to arrest the Lokyaukta for permitting his son to indulge in illegal activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X