ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರಪ್ಪ ಚಡ್ಡಿ ಹಾಕೋಳಕ್ಕೆ ಶುರು ಮಾಡ್ಕೊಂಡಿದ್ದು ಯಾವತ್ತಿಂದ?

|
Google Oneindia Kannada News

ಉತ್ತಮ ವಾಗ್ಮಿ ಮತ್ತು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ವಿ ಎಸ್ ಉಗ್ರಪ್ಪ ಮಾತಿಗೆ ನಿಂತರೆ ವಿರೋಧಿಗಳ ಬಾಯಿ ಮುಚ್ಚಿಸುವಲ್ಲಿ ಬಹಳಾನೇ ಹೆಸರುವಾಸಿ.

ಶುಕ್ರವಾರ (ಫೆ 13) ಮೇಲ್ಮನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಹಾಸ್ಯ ಭರಿತ ಮಾತಿನ ಭರಾಟೆಯಲ್ಲಿ ಉಗ್ರಪ್ಪ ಮತ್ತು ಈಶ್ವರಪ್ಪ ಆಡಿದ ಒಂದು ಮಾತು ಸದನವನ್ನು ನಗೆಗಡಲಲ್ಲಿ ತೇಲಿಸಿತು. ಇದಕ್ಕೆ ಕಾರಣವಾಗಿದ್ದು ಸಂಸ್ಕೃತ ಶ್ಲೋಕವೊಂದು.

ವಿಧಾನ ಪರಿಷತ್ತಿನಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿತ್ತು. ಬಿಜೆಪಿ ಮುಖಂಡ ಗೋ. ಮಧುಸೂಧನ್ ಅವರು ಸಂಸ್ಕೃತ ಶ್ಲೋಕದ ಮೂಲಕ ಭಾಷಣ ಮಾಡಲಾರಂಭಿಸಿದರು. (ಮಠಗಳಿಗೆ ನಿಯಂತ್ರಣ ಹಾಕುವ ವಿಧೇಯಕ ವಾಪಸ್)

Interesting debate in Karnataka state Upper House between Congress and BJP leaders

ಮಧುಸೂಧನ್ ಅವರ ಭಾಷಣ ಆರಂಭವಾಗುತ್ತಿದ್ದಂತೇ ಎದ್ದು ನಿಂತ ಉಗ್ರಪ್ಪ, ಸಂಸ್ಕೃತದಲ್ಲೇ ಒಂದೆರಡು ಮಾತನಾಡುವ ಮೂಲಕ ಮಧುಸೂಧನ್ ಅವರ ಕಾಲೆಳೆದರು.

ಇದಕ್ಕೆ ಹಾಸ್ಯಧಾಟಿಯಲ್ಲಿ ಉತ್ತರಿಸಿದ ಮಧುಸೂಧನ್, ಹಾಗಾದರೆ ಉಗ್ರಪ್ಪನವರು ಚಡ್ಡಿ (RSS ಸಮವಸ್ತ್ರ ಎನ್ನುವ ಅರ್ಥದಲ್ಲಿ) ಹಾಕಿದ್ರೂಂತಾಯಿತು ಎಂದು ಕಿಚಾಯಿಸಿದರು. ಆಗ, ಸದನದಲ್ಲಿ ಹಾಜರಿದ್ದ ಈಶ್ವರಪ್ಪ, ಏನಿದು ಮಧುಸೂಧನ್ ಅವರ ಮಾತಿನ ಅರ್ಥ. ಹಾಗಾದ್ರೆ ಉಗ್ರಪ್ಪ ಚಡ್ಡಿ ಹಾಕಿಲ್ಲಾಂತ ನಿಮ್ಮತ್ರ ಹೇಳಿದ್ರಾ ಎಂದು ಮಧುಸೂಧನ್ ಅವರನ್ನು ಕೇಳಿದರು.

ತಕ್ಷಣ ಎದ್ದು ನಿಂತ ಉಗ್ರಪ್ಪ, ನಾನು ಚಡ್ಡಿ ಹಾಕುವ ಮೊದಲೇ ಸಂಸ್ಕೃತ ಕಲಿತಿದ್ದೆ ಎಂದು ಈಶ್ವರಪ್ಪ ಮತ್ತು ಮಧುಸೂಧನ್ ಅವರಿಗೆ ಪ್ರತ್ಯುತ್ತರ ನೀಡಿದ ಮೇಲೆ ಮಧುಸೂಧನ್ ಅವರ ಭಾಷಣ ಸಾಂಗವಾಗಿ ಮುಂದುವರಿಯಿತು.

ಹಾಗಾಗಿ, ವಿ ಎಸ್ ಉಗ್ರಪ್ಪ ಚಡ್ಡಿ ಹಾಕಿಕೊಳ್ಳಲು ಶುರು ಮಾಡ್ಕೊಂಡಿದ್ದು ಯಾವಾ ವಯಸ್ಸಿನಿಂದ ಎಂದು ತಿಳಿದುಕೊಳ್ಳುವ ಅಧಿಕಾರ ರಾಜ್ಯದ ಜನತೆಗೆ ಇಲ್ಲವೇ ಎನ್ನುವುದು ಇಲ್ಲಿ ತಮಾಷೆಯ ಪ್ರಶ್ನೆ?

English summary
Interesting debate in Karnataka state Upper House between Congress leader V S Ugrappa and Go Madhusudhan and K S Eshwarappa of BJP on Feb 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X