ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ-ಬೆಳಗಾವಿ, ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರಕ್ಕೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಮೇ 20 : ಕರ್ನಾಟಕದಲ್ಲಿ ಅಂತರ ಜಿಲ್ಲೆಗಳ ನಡುವೆ ರೈಲು ಸಂಚಾರ ನಡೆಸಲು ಒಪ್ಪಿಗೆ ನೀಡಲಾಗಿದೆ. ಲಾಕ್ ಡೌನ್ ಘೋಷಣೆ ಬಳಿಕ ರೈಲು ಸಂಚಾರ ರದ್ದುಗೊಂಡಿದ್ದು, ಸರ್ಕಾರಿ ಬಸ್‌ಗಳು ಮಾತ್ರ ಮಂಗಳವಾರದಿಂದ ಸಂಚಾರ ನಡೆಸುತ್ತಿವೆ.

ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅಂತರ ಜಿಲ್ಲೆಗಳ ನಡುವೆ ವಿಶೇಷ ರೈಲು ಸಂಚಾರಕ್ಕೆ ಒಪ್ಪಿಗೆ ಕೊಡಲಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಬಹುದು ಎಂದು ಹೇಳಿದ್ದಾರೆ.

ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ

ಬೆಂಗಳೂರು-ಬೆಳಗಾವಿ ಮತ್ತು ಬೆಂಗಳೂರು-ಮೈಸೂರು ನಡುವೆ ಅಂತರ ಜಿಲ್ಲಾ ರೈಲು ಸಂಚಾರ ಆರಂಭವಾಗಲಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಕರ್ನಾಟಕದಲ್ಲಿ ಪ್ರಯಾಣಿಕ ರೈಲು ಸಂಚಾರ ಸಂಪೂರ್ಣ ರದ್ದುಗೊಂಡಿದೆ.

ಪ್ರಯಾಣಿಕರೇ ಗಮನಿಸಿ; ದೆಹಲಿ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸೂಚನೆ ಪ್ರಯಾಣಿಕರೇ ಗಮನಿಸಿ; ದೆಹಲಿ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸೂಚನೆ

ಕಳೆದ ವಾರ ಭಾರತೀಯ ರೈಲ್ವೆ ದೇಶದ ಆಯ್ದ ಮಾರ್ಗದಲ್ಲಿ ರೈಲುಗ ಸಂಚಾರಕ್ಕೆ ಒಪ್ಪಿಗೆ ನೀಡಿತ್ತು. ಬೆಂಗಳೂರು-ದೆಹಲಿ ಮತ್ತು ದೆಹಲಿ-ಬೆಂಗಳೂರು ನಡುವೆ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿತ್ತು. ಈಗ ಅಂತರ ಜಿಲ್ಲಾ ಸಂಚಾರ ಆರಂಭವಾಗುತ್ತಿದೆ.

ಕೋವಿಡ್ - 19 ಚಿಕಿತ್ಸೆಗಾಗಿ 215 ರೈಲ್ವೆ ನಿಲ್ದಾಣ ಗುರುತಿಸಿದ ಕೇಂದ್ರ ಕೋವಿಡ್ - 19 ಚಿಕಿತ್ಸೆಗಾಗಿ 215 ರೈಲ್ವೆ ನಿಲ್ದಾಣ ಗುರುತಿಸಿದ ಕೇಂದ್ರ

ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕ್ ಮಾಡಬೇಕು

ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕ್ ಮಾಡಬೇಕು

ಬೆಂಗಳೂರು-ಬೆಳಗಾವಿ ಮತ್ತು ಬೆಂಗಳೂರು-ಮೈಸೂರು ನಡುವೆ ಅಂತರ ಜಿಲ್ಲಾ ರೈಲು ಸಂಚಾರ ಆರಂಭವಾಗಲಿದೆ. ಆದರೆ, ರೈಲು ನಿಲ್ದಾಣದಲ್ಲಿ ಟಿಕೆಟ್ ನೀಡುವುದಿಲ್ಲ. ಆನ್ ಲೈನ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಜನರಿಗೆ ನೆರವಾಗಲಿದೆ

ಜನರಿಗೆ ನೆರವಾಗಲಿದೆ

ಕರ್ನಾಟಕದಲ್ಲಿ ಅಂತರ ಜಿಲ್ಲಾ ರೈಲು ಸಂಚಾರಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. "ರೈಲು ಸಂಚಾರ ಆರಂಭವಾದರೆ ವಿವಿಧ ನಗರದಲ್ಲಿ ಸಿಲುಕಿರುವ ಜನರಿಗೆ ಸಹಾಯಕವಾಗಲಿದೆ" ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ನಿಲ್ದಾಣದ ವಿವರಗಳು

ನಿಲ್ದಾಣದ ವಿವರಗಳು

* ಕೆಎಸ್ಆರ್‌ ಬೆಂಗಳೂರು-ಬೆಳಗಾವಿ ವಿಶೇಷ ರೈಲು ಬೆಂಗಳೂರಿನ ರೈಲು ನಿಲ್ದಾಣ, ಹುಬ್ಬಳ್ಳಿ ಮೂಲಕ ಬೆಳಗಾವಿಗೆ ತಲುಪಲಿದೆ. ರೈಲು ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲ್ಲಲಿದೆ.

* ಕೆಎಸ್ಆರ್‌-ಬೆಂಗಳೂರಿನಿಂದ ಹೊರಟುವ ರೈಲು ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿ ಮತ್ತು ಮೈಸೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

ಮೂರು ದಿನ ಮಾತ್ರ ಸಂಚಾರ

ಬೆಂಗಳೂರು-ಬೆಳಗಾವಿ ವಿಶೇಷ ರೈಲು ವಾರದ ಎಲ್ಲಾ ದಿನ ಸಂಚಾರ ನಡೆಸುವುದಿಲ್ಲ. ಬೆಂಗಳೂರು ನಗರದಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಹೊರಡಲಿದೆ. ಬೆಳಗಾವಿಯಿಂದ ಮಂಗಳವಾರ, ಗುರುವಾರ ಮತ್ತು ಶನಿವಾರ ಹೊರಡಲಿದೆ.

English summary
Union Minister of State for Railways Suresh Angadi said that inter state special trains will start in Karnataka. Train will run between Bengaluru-Belagavi and Bengaluru-Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X