ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸೋಂಕಿತರ ಆಸ್ಪತ್ರೆ ಶುಲ್ಕ ಹೆಚ್ಚಾಗುತ್ತಿರುವುದು ಏಕೆ?

|
Google Oneindia Kannada News

ಬೆಂಗಳೂರು, ಆಗಸ್ಟ್.17: ರಾಜ್ಯದಲ್ಲಿ ನಗದು ರಹಿತ ವಿಮೆ ಲಭ್ಯವಿರುವ ಆಸ್ಪತ್ರೆಗಳಲ್ಲಿ ಕೊರೊನಾವೈರಸ್ ಸೋಂಕಿತರಿಗೆ ನೀಡುವ ಚಿಕಿತ್ಸಾ ವೆಚ್ಚವನ್ನು ಮತ್ತು ಆಸ್ಪತ್ರೆಯ ಬಿಲ್ ನ್ನು ಹೆಚ್ಚಿಸುತ್ತಿವೆ ಎಂದು ಜನರಲ್ ಇನ್ಸುರೆನ್ಸ್ ಕೌನ್ಸಿಲ್ ಆರೋಪಿಸಿದೆ.

Recommended Video

Americaಗೆ ಹೊಟ್ಟೆ ಉರಿಸಲು #Russia ಮಾಡಿದ ಪ್ಲಾನ್ ಇದು | Oneindia Kannada

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ನಗದು ರಹಿತ ವಿಮೆ ಶುಲ್ಕವನ್ನು ಹೆಚ್ಚಿಸುತ್ತಿರುವ ಕ್ರಮವನ್ನು ನಿಯಂತ್ರಿಸುವಂತೆ ಜನರಲ್ ಇನ್ಸುರೆನ್ಸ್ ಕೌನ್ಸಿಲ್ ಸುಪ್ರೀಂಕೋರ್ಟ್ ನಲ್ಲಿ ಮನವಿ ಸಲ್ಲಿಸಿದೆ. ವೈದ್ಯಕೀಯ ಹಣದುಬ್ಬರ ಕಣ್ಣೆದುರಿಗೆ ಕಾಣುತ್ತಿದ್ದು, ಆಸ್ಪತ್ರೆಗಳು ಕೃತಕವಾಗಿ ಶುಲ್ಕ ಹೆಚ್ಚಿಸುತ್ತಿವೆ ಎಂದು ಜನರಲ್ ಇನ್ಸುರೆನ್ಸ್ ಕೌನ್ಸಿಲ್ ಮುಖ್ಯಸ್ಥ ಎಂ.ಎನ್.ಶರ್ಮಾ ದೂಷಿಸಿದ್ದಾರೆ.

ಕೋವಿಡ್ ಸೋಂಕಿತರಿಗೆ ವಿಮೆ ಬಗ್ಗೆ ಸಿಹಿ ಸುದ್ದಿಕೋವಿಡ್ ಸೋಂಕಿತರಿಗೆ ವಿಮೆ ಬಗ್ಗೆ ಸಿಹಿ ಸುದ್ದಿ

ಆಸ್ಪತ್ರೆಗಳು ಹೆಚ್ಚಿಸುತ್ತಿರುವ ಶುಲ್ಕವನ್ನು ಅನುಸರಿಸುವುದಕ್ಕೆ ಈಗ ಸಾಧ್ಯವಾಗುವುದಿಲ್ಲ. ಏಕೆಂದರೆ ಐಆರ್ ಡಿಎಐ ನಿಯಂತ್ರಣದಲ್ಲಿದ್ದು, ಪ್ರತಿಯೊಂದು ನೀತಿ ಮತ್ತು ದರಗಳು ಐಆರ್ ‌ಡಿಎಐ ಅನುಮೋದನೆಗೆ ಒಳಪಡುತ್ತದೆ. ಹೀಗಾಗಿ ಆಸ್ಪತ್ರೆಗಳು ನಮ್ಮ ಉತ್ಪನ್ನಗಳಿಗೆ ಅನ್ಯಾಯವಾಗಿ ಬೆಲೆ ನಿಗದಿಪಡಿಸಲು ಸಾಧ್ಯವಿಲ್ಲ ಎಂದರು.

ಸೋಂಕಿತರ ಚಿಕಿತ್ಸೆ ನೀಡುವಲ್ಲಿ ನಡೆಯುತ್ತಿದೆಯಾ ಹಗರಣ?

ಸೋಂಕಿತರ ಚಿಕಿತ್ಸೆ ನೀಡುವಲ್ಲಿ ನಡೆಯುತ್ತಿದೆಯಾ ಹಗರಣ?

ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ವೆಂಟಿಲೇಟರ್, ಹೀಗೆ ಸಾಮಗ್ರಿಗಳ ಖರೀದಿಯಲ್ಲಿ ಹಗರಣಗಳ ಆರೋಪ ಮುಗಿಯಿತು. ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ನೀಡುವ ಚಿಕಿತ್ಸೆಯಲ್ಲೂ ಹಣ ಹೊಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಜನರಲ್ ಇನ್ಸುರೆನ್ಸ್ ಕೌನ್ಸಿಲ್ ಆರೋಪ ಮಾಡುತ್ತಿದೆ.

ದರ ನಿಗದಿಗೊಳಿಸುವಂತೆ ಸರ್ಕಾರಕ್ಕೆ ಮನವಿ

ದರ ನಿಗದಿಗೊಳಿಸುವಂತೆ ಸರ್ಕಾರಕ್ಕೆ ಮನವಿ

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಸರ್ಕಾರವು ಒಂದು ನಿರ್ದಿಷ್ಟ ದರವನ್ನು ನಿಗದಿಗೊಳಿಸಬೇಕು ಎಂದು ಜನರಲ್ ಇನ್ಸುರೆನ್ಸ್ ಕಂಪನಿಯು ಬೇಡಿಕೆಯಿಟ್ಟಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ವಿಮೆ ಹೊಂದಿರುವ ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಒಂದು ರೀತಿಯ ದರ ನಿಗದಿಗೊಳಿಸಿವೆ. ಆರೋಗ್ಯವಿಮೆ ಇಲ್ಲದ ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಮತ್ತೊಂದು ರೀತಿಯ ಶುಲ್ಕವನ್ನು ವಿಧಿಸಲಾಗುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಕೌನ್ಸಿಲ್ ತಿಳಿಸಿದೆ.

ಅವಿಷೇಕ್ ಗುವಾಂಕ್ ರಿಂದ ಪಿಐಎಲ್ ಸಲ್ಲಿಕೆ

ಅವಿಷೇಕ್ ಗುವಾಂಕ್ ರಿಂದ ಪಿಐಎಲ್ ಸಲ್ಲಿಕೆ

ಕೋಲ್ಕತ್ತಾ ಮೂಲದ ಅವಿಷೇಕ್ ಗುವಾಂಕ್ ಈ ಬಗ್ಗೆ ಮೊದಲಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು. ಸಾಮಾನ್ಯ ಜನರು ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಆರೋಗ್ಯವಿಮೆ ಹೊಂದಿರುವ ಕೊವಿಡ್-19 ಸೋಂಕಿತ ಮತ್ತು ವಿಮೆ ಇಲ್ಲದ ಕೊವಿಡ್-19 ಸೋಂಕಿತನಿಗೆ ನಿಗದಿಗೊಳಿಸಿದ ಚಿಕಿತ್ಸಾ ಶುಲ್ಕದಲ್ಲಿನ ವ್ಯತ್ಯಾಸದ ಬಗ್ಗೆಯೂ ಅರ್ಜಿಯಲ್ಲಿ ಹೇಳಲಾಗಿತ್ತು.

ಆರೋಗ್ಯ ವಿಮೆ ಆಧರಿಸಿ ಚಿಕಿತ್ಸೆ ವಿಧಾನ ತೀರ್ಮಾನ

ಆರೋಗ್ಯ ವಿಮೆ ಆಧರಿಸಿ ಚಿಕಿತ್ಸೆ ವಿಧಾನ ತೀರ್ಮಾನ

ಆರೋಗ್ಯ ವಿಮೆಯ ಮೊತ್ತವನ್ನು ಗಮನದಲ್ಲಿಟ್ಟುಕೊಂಡು ಕೆಲವು ಖಾಸಗಿ ಆಸ್ಪತ್ರೆಗಳು ಕೊವಿಡ್-19 ಸೋಂಕಿತರಿಗೆ ನೀಡುವ ಚಿಕಿತ್ಸಾ ವಿಧಾನವನ್ನು ನಿರ್ಧರಿಸುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಉದಾಹರಣೆಗೆ ಚಿಕಿತ್ಸೆಗೆ ಒಳಗಾದ ವ್ಯಕ್ತಿಯ ವಿಮಾ ಮೊತ್ತ 5 ಲಕ್ಷವಾಗಿದ್ದಲ್ಲಿ ಆಸ್ಪತ್ರೆಯ ಶುಲ್ಕವನ್ನು 4.9 ಲಕ್ಷ ಆಗುವಂತೆ ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಸೋಂಕಿತನಿಗೆ ಆರೋಗ್ಯವಿಮೆ ಇಲ್ಲ ಎನ್ನುವುದಾದರೆ ಇದರಲ್ಲಿ ಅರ್ಧದಷ್ಟು ಅಥವಾ ಕಾಲು ಭಾಗದಷ್ಟು ಶುಲ್ಕದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

English summary
Insurers' Body Accuses Hospitals Of Inflating Bills For Coronavirus Treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X