ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಜಾನುವಾರುಗಳಿಗೂ ವಿಮೆ ಸೌಲಭ್ಯಕ್ಕೆ ಸೂಚನೆ: ಸಿದ್ದರಾಮಯ್ಯ

|
Google Oneindia Kannada News

ಹಾವೇರಿ, ಫೆಬ್ರವರಿ. 20 : ತೀವ್ರ ಬರ ಹಿನ್ನೆಲೆಯಲ್ಲಿ ಕುರಿ ಆಡು ಸೇರಿದಂತೆ ಎಲ್ಲ ಜಾನುವಾರುಗಳಿಗೂ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲ ಜಾನುವಾರುಗಳಿಗೆ ವಿಮಾ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಬ್ಯಾಡಗಿ ಮೆಣಸಿನ ಕಾಯಿ ವಹಿವಾಟಿಗೆ ಪ್ರಸಿದ್ಧವಾದ ವ್ಯಾಪಾರ ಕೇಂದ್ರ ಈ ಪಟ್ಟಣದ ಅಭಿವೃದ್ಧಿಗೆ ಎಲ್ಲ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

Insurance benefit to all cattles CM Siddaramaiah instruction gives to officers

ಕೆರೆ ತುಂಬಿಸಲು ಕ್ರಮ: 600 ಎಕರೆ ಪ್ರದೇಶ ವಿಸ್ತೀಣ೯ದ ಅಸುಂಡಿ ಕೆರೆ ತುಂಬಿಸಲು ಕ್ರಮ ಹಾಗೂ ರಾಜ್ಯದ ಎಲ್ಲ ಕೆರೆಗಳ ತುಂಬಿಸಲು ನೀರಾವರಿ ಇಲಾಖೆ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕುಡಿವ ನೀರಿನ ಉದ್ದೇಶಕ್ಕಾಗಿ ರಾಣೇಬೇನ್ನೂರು ತಾಲೂಕಿನ ಮುದೇನೂರು ಬಳಿ ತಂಗಾ ಭದ್ರಾ ನದಿಗೆ ಭ್ಯಾರೆಜ್ ನಿಮಾ೯ಣ ಆಗುತ್ತಿದೆ. ಕುಡಿವ ನೀರಿಗಾಗಿ ರಾಜ್ಯ ಸಕಾ೯ರ 144 ಕೋಟಿ ರೂ ಖಚು೯ ಮಾಡಿದೆ ಕೇಂದ್ರದಿಂದ ಯಾವುದೇ ಹಣ ಬಂದಿಲ್ಲ,

ಮುಂಗಾರು ಪರಿಹಾರಕ್ಕೆ 4207 ಕೋಟಿ ರೂಪಾಯಿ, ಹಿಂಗಾರು ಹಂಗಾಮಿಗಾಗಿ 3310 ಕೋಟಿ ರೂಪಾಯಿ ಹಾಗೂ ಪ್ರವಾಹ ಪರಿಹಾರಕ್ಕಾಗಿ 386 ಕೋಟಿ ರೂಪಾಯಿ ಯೋಜನೆ ತಯಾರಿಸಿ ಕೇಂದ್ರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಏಕ ಕಂತಿನಲ್ಲಿ ಹಣ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು.

English summary
Insurance benefit to all cattles, chief minister Siddaramaiah instruction gives to officers on February at Haveri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X