ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಗ್ರಾಮೀಣ ಭಾಗದಲ್ಲಿ ಹೋಂ ಐಸೋಲೇಷನ್‌ ಇಲ್ಲ

|
Google Oneindia Kannada News

ಬೆಂಗಳೂರು, ಮೇ 16; ಕರ್ನಾಟಕದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದ ಕೊಳಗೇರಿ ಪ್ರದೇಶದಲ್ಲಿ ಕೋವಿಡ್ ಸೋಂಕು ದೃಢಪಟ್ಟ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲು ಶಿಫಾರಸು ಮಾಡಲಾಗಿದೆ.

ಶನಿವಾರ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ. ಸಿ. ಎನ್. ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಸಚಿವರು, ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆ ಬಗ್ಗೆ ಸಭೆ ನಡೆಯಿತು.

ಪ್ರಧಾನಿ ಮೋದಿಯಿಂದ ಕೋವಿಡ್ 19 ಪರಿಸ್ಥಿತಿ ಅವಲೋಕನ ಪ್ರಧಾನಿ ಮೋದಿಯಿಂದ ಕೋವಿಡ್ 19 ಪರಿಸ್ಥಿತಿ ಅವಲೋಕನ

ಗ್ರಾಮೀಣ ಭಾಗಗಳಲ್ಲಿ ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ಕೊಡುವ ಬದಲಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲೇ ಕೋವಿಡ್ ಕೇರ್ ಸೆಂಟರ್ ಮಾಡಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿ

Institutional Quarantine Mandatory For People In Rural Areas

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಪ್ರತಿದಿನ ಸುಮಾರು 40 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿದೆ. ಬೆಂಗಳೂರು ನಗರದಲ್ಲಿ 20 ಸಾವಿರದಿಂದ ಹೊಸ ಪ್ರಕರಣಗಳು 15 ಸಾವಿರಕ್ಕೆ ಕುಸಿದಿವೆ. ಆದರೆ ಜಿಲ್ಲೆಗಳಲ್ಲಿ ಹೊಸ ಪ್ರಕರಣ ಹೆಚ್ಚಾಗುತ್ತಿದೆ.

ಕೋವಿಡ್ ಪರಿಸ್ಥಿತಿ; ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಹೆಚ್ಚಳ ಕೋವಿಡ್ ಪರಿಸ್ಥಿತಿ; ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಹೆಚ್ಚಳ

ಸಭೆಯಲ್ಲಿ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ‌843 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಥವಾ ಆಸ್ಪತ್ರೆಗಳ ಬದಲಾಗಿ ಶಾಲಾ-ಕಾಲೇಜುಗಳಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಸಭೆಯ ಪ್ರಮುಖ ತೀರ್ಮಾನಗಳು

* ತಾಲೂಕು ಆಸ್ಪತ್ರೆಗಳನ್ನು ಶೇ.100ರಷ್ಟು ಆಕ್ಸಿಜನ್ ಬೆಡ್ ಆಸ್ಪತ್ರೆಗಳಾಗಿ ಪರಿವರ್ತನೆ. ಜಿಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ಕನಿಷ್ಟ 100 ಐಸಿಯು ಬೆಡ್ ಅಳವಡಿಕೆ.

* 44 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವಿಶೀಲ್ಡ್ ಮೊದಲ ಡೋಸ್ ಕೊಡಲು ಪ್ರಮುಖ ಆದ್ಯತೆ.
ಕೊವ್ಯಾಕ್ಸಿನ್ ಎರಡನೇ ಡೋಸ್ ಮಾತ್ರ ಪೂರೈಸಲು ಆದ್ಯತೆ.

* ಒಂದು ಬಾರಿ 50 ಲಕ್ಷದಂತೆ 4 ಬಾರಿಯಲ್ಲಿ 2 ಕೋಟಿ ಲಸಿಕೆ ತರಿಸಲು ಕ್ರಮ. ಚಿತಾಗಾರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವಿಮೆ ನೀಡಲು ನಿರ್ಧಾರ. ಪ್ರತಿ ಬೆಡ್ ಗೆ 10 ರೂ. ನಂತೆ ಬಿಲ್ ಮಾಡಿ ಕೋವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಬಳಕೆ.

* ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಜನರೇಟರ್, ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಅಳವಡಿಕೆಗೆ ನಿರ್ದೇಶನ. ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಳದ ಜತೆಗೆ ಮೂಲಭೂತ ಸೌಕರ್ಯ, ಸಿಬ್ಬಂದಿಗಳ ಶಾಶ್ವತ ನೇಮಕಕ್ಕೆ ಕ್ರಮ.

* ರಾಜ್ಯದಲ್ಲಿ ಪ್ರಸ್ತುತ ಒಟ್ಟು 60,000 ಆಕ್ಸಿಜನ್ ಬೆಡ್‌ಗಳಿವೆ. ಇವುಗಳ ಹೆಚ್ಚಳ ಹಾಗೂ ಸಮರ್ಪಕ ನಿರ್ವಹಣೆ. 2 ಲಕ್ಷ ಪಲ್ಸ್‌ ಆಕ್ಸಿಮೀಟರ್ ಖರೀದಿಗೆ ನಿರ್ಧಾರ. 1 ಕೋಟಿ RT-PCR ಕಿಟ್‌ ಖರೀದಿಗೆ ಅನುಮತಿ.

* 5 ಲಕ್ಷ ರೆಮ್ಡೆಸಿವಿರ್ ಇಂಜೆಕ್ಷನ್ ಖರೀದಿಗೆ‌ ಜಾಗತಿಕ ಟೆಂಡರ್. ಇದಕ್ಕೆ 75 ಕೋಟಿ ಮೀಸಲು.
ಮುಂದಿನ 90 ದಿನಗಳಿಗೆ ಅಗತ್ಯ ಇರುವ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ 260 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ.

Recommended Video

Tauktae ಚಂಡಮಾರುತದ ರಕ್ಕಸ ಅವತಾರ ನೋಡಿ | Oneindia Kannada

* ಆರು ಕಡೆ ಆಮ್ಲಜನಕ‌ ಬಾಟಲಿಂಗ್‌ ಪ್ಲ್ಯಾಂಟ್ಸ್‌ ವ್ಯವಸ್ಥೆ. ಆಮ್ಲಜನಕ ಬಳಕೆ ನಿಯಂತ್ರಿಸುವ ದೃಷ್ಟಿಯಿಂದ DRDO ಅಭಿವೃದ್ಧಿಪಡಿಸಿರುವ 1,000 ಯಂತ್ರಗಳನ್ನು ಖರೀದಿಸಲಾಗುವುದು. ಬಿಬಿಎಂಪಿಯಿಂದ ನಿರ್ವಹಣೆ ಆಗುತ್ತಿರುವ ಆರೋಗ್ಯ ಸೇವೆಯನ್ನು ಆರೋಗ್ಯ ಇಲಾಖೆಯಡಿ ತೆಗೆದುಕೊಂಡು ನಗರದಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಲು ನಿರ್ಧಾರ.

English summary
A ministerial task force on Covid-19 in Karnataka headed by deputy chief minister C. N. Ashwathnarayan has recommended making institutional quarantine mandatory for those testing positive in the rural areas and urban slums.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X