ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್ ಬೆಂಬಲಿಸುತ್ತೀರಾ? ಈ ಆಘಾತಕಾರಿ ಸತ್ಯಗಳನ್ನು ಒಮ್ಮೆ ನೋಡಿ

By ಅಜಯ್ ಕುಮಾರ್ ವರ್ಮಾ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕೂಡ ಕಾಂಗ್ರೆಸ್ ಕರೆ ನೀಡಿದ್ದ ಬಂದ್‌ಗೆ ದೇಶದಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಎಂದರೆ ನೆಮ್ಮದಿ. ಅಗತ್ಯ ವಸ್ತುಗಳು ಸಿಗದಿದ್ದರೂ, ಒಂದು ದಿನದ ರಜೆಯನ್ನು ಮನೆಯಲ್ಲಿ ಆರಾಮಾಗಿ ಕಳೆಯಬಹುದು ಎಂಬುದು ಅನೇಕರ ಲೆಕ್ಕಾಚಾರ. ಇನ್ನು ಅನೇಕರಿಗೆ ಪರದಾಟ. ಬಂದ್ ನೆಪದಲ್ಲಿ ಪುಂಡಾಟಿಕೆ ನಡೆಸುವವರಿಗೆ ಮಾತ್ರ ಮಜಾ.

ಆದರೆ, ಬಂದ್ ಎಂಬ ಪ್ರತಿಭಟನೆಯ ಮಾರ್ಗದ ಹಿಂದಿರುವ ಕರಾಳ, ಭಯಾನಕ ಸತ್ಯ ಎದೆನಡುಗಿಸುತ್ತದೆ. ರಾಷ್ಟ್ರಮಟ್ಟದ ಬಂದ್ ಸಾಮಾನ್ಯ ಮನುಷ್ಯನ ದೇಹದೊಳಗೆ ಭಾರಿ ಪ್ರಮಾಣದ ಸೈನೇಡ್ ಸೇರಿದಂತೆ ವಿಷಕಾರಿ ರಾಸಾಯನಿಕಗಳನ್ನು ಸೇರಿಸುತ್ತದೆ ಎನ್ನುವುದು ನಿಮಗೆ ಗೊತ್ತೇ?

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

ನಿಜ. ಅದು ನಿಮಗೆ ಗೊತ್ತಾಗಬೇಕೆಂದರೆ ಬಂದ್ ದಿನ ಮನೆ ಬಾಗಿಲು ತೆರೆದು ಬೀದಿಗೆ ಇಳಿಯಿರಿ. ರಸ್ತೆಯುದ್ದಕ್ಕೂ ಹೊತ್ತಿ ಉರಿಯುತ್ತಿರುವ ಸಾಕಷ್ಟು ಟೈರುಗಳು ಕಣ್ಣಿಗೆ ರಾಚುತ್ತವೆ. ಆ ದಟ್ಟವಾದ ಕಡುಕಪ್ಪನೆಯ ಹೊಗೆಯಿಂದ ಹೊರಬರುತ್ತಿರುವ ರಾಸಾಯನಿಕಗಳ ಬಗ್ಗೆ ಯೋಚಿಸಿ...

ಹೀಗೆ ಬಂದ್ ಬೆಂಬಲಿಸಿ ಟೈರ್‌ಗೆ ಬೆಂಕಿ ಹಚ್ಚುವವರಲ್ಲಿ ನೀವೂ ಒಬ್ಬರಾಗಿರಬಹುದು. ನಿಮ್ಮ, ನಿಮ್ಮ ಕುಟುಂಬದ ಮತ್ತು ನಿಮ್ಮಂತೆಯೇ ಸಾಮಾನ್ಯರಾಗಿ ಬದುಕುವ ಜನರ ಬಗ್ಗೆಯೂ ಒಮ್ಮೆ ಯೋಚಿಸಿ.

ವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರುವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರು

ಹೊತ್ತಿ ಉರಿಯುವ ಬೆಂಕಿಯ ಹೊಗೆಯಿಂದ ಬರುವ ಅಪಾಯಗಳು ಏನು ಎಂಬುದು ಗೊತ್ತೇ? ಮುಂದೆ ಓದಿ...

ಯಾವ ಯಾವ ರಾಸಾಯನಿಕಗಳು

ಯಾವ ಯಾವ ರಾಸಾಯನಿಕಗಳು

ವಿವಿಧ ರಾಸಾಯನಿಕಗಳ ಸಂಯೋಜನೆಯಿಂದ ಟೈರ್ ಗಳನ್ನು ತಯಾರಿಸಲಾಗುತ್ತದೆ. ಬೆಂಕಿಗೆ ತುತ್ತಾದ ಟೈರ್‌ಗಳಿಂದ ಹೊರಬರುವ ವಿಷಗಳು ಯಾವುವು?
1. ಸೈನೇಡ್
2. ಕಾರ್ಬನ್ ಮಾನಾಕ್ಸೈಡ್
3. ಸಲ್ಫರ್ ಡೈಯಾಕ್ಸೈಡ್
4. ಬುಟಾಡೈಯೀನ್ ಮತ್ತು ಸ್ಟೆರಿನ್‌ನ ಉತ್ಪನ್ನಗಳು

ಸೈನೇಡ್

ಸೈನೇಡ್

ಅತ್ಯಧಿಕ ವಿಷಕಾರಿ ಮತ್ತು ಆವಿಯಾಗುವ ಗುಣವಿರುವ ದ್ರವವಿದು. ಸೈನೇಡ್‌ಅನ್ನು ಉಸಿರಾಡುವುದೆಂದರೆ ಶ್ವಾಸಕೋಶ ಮತ್ತು ಹೃದಯಕ್ಕೆ ಅತ್ಯಂತ ಅಪಾಯಕಾರಿ. ಇದರಿಂದ ಉಸಿರಾಟ, ಕೇಂದ್ರ ನರಮಂಡಲ ವ್ಯವಸ್ಥೆ ಮತ್ತು ಹೃದಯವನ್ನು ಅವಲಂಬಿಸಿರುವ ಅಂಗಗಳಿಗೆ ತೀವ್ರ ಪ್ರಮಾಣದ ಅಪಾಯ ಉಂಟಾಗುತ್ತದೆ.

ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ!ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ!

ಕಾರ್ಬನ್ ಮಾನಾಕ್ಸೈಡ್

ಕಾರ್ಬನ್ ಮಾನಾಕ್ಸೈಡ್

ಇದು ಅತ್ಯಂತ ಮಾರಕ ವಾಯು ವಿಷ. ಈ ವಿಷವು ಹಿಮೋಗ್ಲೋಬಿನ್‌ ಜತೆ ಸಂಯೋಜನೆಗೊಂಡರೆ ಅದರಿಂದ ಕಾರ್ಬೊಕ್ಸಿ ಹಿಮೋಗ್ಲೋಬಿನ್ ಉತ್ಪಾದನೆಯಾಗುತ್ತದೆ. ಅಂದರೆ, ಆಮ್ಲಜನಕ ಸಾಗಿಸುವ ಹಿಮೋಗ್ಲೋಬಿನ್‌ನ ಸ್ಥಾನವನ್ನು ಆಕ್ರಮಿಸುತ್ತದೆ. ಕೊನೆಗೆ ದೇಹದ ಅಂಗಗಳಿಗೆ ರವಾನೆಯಾಗುವ ಆಮ್ಲಜನಕವನ್ನು ತಡೆಗಟ್ಟುತ್ತದೆ.

ಇದರಿಂದ ತಲೆನೋವು, ಆಯಾಸ, ತಲೆತಿರುಗುವಿಕೆ, ವಾಂತಿ ಮುಂತಾದ ಸಮಸ್ಯೆಗಖು ಎದುರಾಗುತ್ತವೆ. ಶಿಶುಗಳಿಗೆ ಅತಿಯಾದ ಸಮಸ್ಯೆಯುಂಟಾಗಿ ಹಾಲು ಕುಡಿಯುವುದಿಲ್ಲ. ಕಾರ್ಬನ್ ಮಾನಾಕ್ಸೈಡ್‌ಗೆ ತೆರೆದುಕೊಳ್ಳುವುದು ಹೃದಯ ಮತ್ತು ಕೇಂದ್ರ ನರಮಂಡಲ ವ್ಯವಸ್ಥೆಗೆ ಮೇಲೆ ತೀವ್ರವಾದ ಹಾನಿ ಉಂಟುಮಾಡಬಲ್ಲದು. ಗರ್ಭಿಣಿಯರು ಅಂತಹ ಸಂದರ್ಭದಲ್ಲಿ ಹೊರಗೆ ಹೋಗಲೇಬಾರದು. ಏಕೆಂದರೆ ವಿಷಕಾರಿ ಅನಿಲ ಅವರ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಅಪಾಯಕಾರಿಯಾಗಬಲ್ಲದು.

ಸಲ್ಫರ್ ಡಯಾಕ್ಸೈಡ್

ಸಲ್ಫರ್ ಡಯಾಕ್ಸೈಡ್

ಸಲ್ಫರ್ ಡಯಾಕ್ಸೈಡ್ ವಿವಿಧ ಉಸಿರಾಟದ ಸಮಸ್ಯೆಯ ಲಕ್ಷಣಗಳು ಮತ್ತು ಕಾಯಿಲೆಗಳಿಗೆ ಎಡೆಮಾಡಿಕೊಡುತ್ತವೆ. ಇದರಿಂದ ಉಸಿರಾಟದ ತೊಂದರೆ ಎದುರಾಗುವುದರ ಜತೆಗೆ ಅಕಾಲಿಕ ಸಾವಿಗೂ ಕಾರಣವಾಗುತ್ತದೆ. ಈ ಕಾರಣದಿಂದಲೂ ಗರ್ಭಿಣಿಯರು ಬಂದ್ ಸಂದರ್ಭದಲ್ಲಿ ಹೊರಗೆ ಹೋಗಬಾರದು.

ಬುಟಾಡಿಯೆನ್ ಮತ್ತು ಸ್ಟಿರೆನ್

ಬುಟಾಡಿಯೆನ್ ಮತ್ತು ಸ್ಟಿರೆನ್

ಬುಟಾಡಿಯೆನ್ ಮತ್ತು ಸ್ಟಿರೆನ್‌ನ ಉತ್ಪನ್ನಗಳು ಬಹುವಿಷಕಾರಿಯಾಗಿದ್ದು, ಸಣ್ಣ ಪ್ರಮಾಣದ ಅಂಶಗಳೂ ತೀವ್ರ ಮಾರಕವಾಗಬಲ್ಲವು. ಈ ಉತ್ಪನ್ನಗಳು ಕೊಲ್ಲುವುದಿಲ್ಲ. ಆದರೆ, ನಮ್ಮ ಪ್ರಮುಖ ಅಂಗಗಳಿಗೆ ಗಂಭೀರ ಗಾಯಗಳಾಗುವಂತೆ ಮಾಡುತ್ತವೆ. ಈ ಅಂಶಗಳು ನಮ್ಮ ಜೀವಕೋಶಗಳ ಒಳಗೆ ಸೇರಿಕೊಂಡರೆ ಅದು ಜೈವಿಕ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಸ್ಟೆರಿನ್ ನರಮಂಡಲ ವ್ಯವಸ್ಥೆ ಹಾಗೂ ಮೇದೋಜೀರಕಗ್ರಂಥಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ವಿಜ್ಞಾನಿಗಳು ಹೇಳುವುದೇನು?

ವಿಜ್ಞಾನಿಗಳು ಹೇಳುವುದೇನು?

ಒನ್ ಇಂಡಿಯಾ ಜತೆ ಮಾತನಾಡಿದ ಪರಿಸರವಾದಿ ಮತ್ತು ಲಕ್ನೋದಲ್ಲಿನ ಭಾರತೀಯ ವಿಷವಿಜ್ಞಾನ ಸಂಶೋಧನಾ ಸಂಸ್ಥೆಯ ಮಾಜಿ ವಿಜ್ಞಾನಿ ಡಾ. ಸೀಮಾ ಜಾವೆದ್, 'ಇದು ದೇಶದ ದುರದೃಷ್ಟ. ಒಂದೆಡೆ ಸರ್ಕಾರ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಲು ದೊಡ್ಡ ಪ್ರಯತ್ನಗಳನ್ನು ನಡೆಸುತ್ತಿದ್ದರೆ, ಇನ್ನೊಂದೆಡೆ ಪ್ರತಿಭಟನಾಕಾರರು ಸುಡುತ್ತಿರುವ ಟೈರ್‌ಗಳು ವಿಷಯುಕ್ತ ಅನಿಲಗಳನ್ನು ಬಿಡುಗಡೆ ಮಾಡುತ್ತಿವೆ.

ಉರಿಯುತ್ತಿರುವ ಟೈರ್‌ಗಳು ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಆಕ್ಸೈಡ್ ಮಾತ್ರವಲ್ಲದೆ, ಸಾರಜನಕವನ್ನೂ ವಿಸರ್ಜಿಸುತ್ತವೆ. ಈ ರಾಸಾಯನಿಕ ಬಲು ಅಪಾಯಕಾರಿ. ಹೀಗಾಗಿ ಇಂತಹ ಪ್ರತಿಭಟನೆಗಳಿಗೆ ಹೋಗದಂತೆ ಜನರಲ್ಲಿ ಮನವಿ ಮಾಡುತ್ತೇನೆ' ಎಂದಿದ್ದಾರೆ.

ಹೇಳಿ. ಈಗಲೂ ನೀವು ಭಾರತ್ ಬಂದ್ ಅನ್ನು ಬೆಂಬಲಿಸುತ್ತೀರಾ?

English summary
Did you know that the nation wide bandh is compelling the common man to inhale toxic chemicals which also includes cyanide? Read this story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X