ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಗುಡ್‌ ಬೈ ಹೇಳಲಿದ್ದಾರೆ ಸುಧಾಮೂರ್ತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು 2021ರ ಡಿಸೆಂಬರ್‌ 31ರಂದು ನಿವೃತ್ತರಾಗಲಿದ್ದಾರೆ. ಅವರು ಅವಧಿ ಈ ವರ್ಷವೇ ಅಂತ್ಯಗೊಳ್ಳಬೇಕಿತ್ತು. ಆದರೆ ಒಂದು ವರ್ಷದವರೆಗೆ ಅದನ್ನು ವಿಸ್ತರಿಸಲಾಗಿದೆ.

ಅಕ್ಟೋಬರ್ 10ರಂದು ಸುಧಾಮೂರ್ತಿ ಅವರ ಅಧಿಕಾರಾವಧಿ ಅಂತ್ಯಗೊಂಡಿತ್ತು. ಇನ್ಫೋಸಿಸ್ ಮಂಡಳಿಯು ಅದನ್ನು ಮುಂದಿನ ವರ್ಷದವರೆಗೆ ವಿಸ್ತರಿಸಿದ್ದು, 2021ರ ಅಂತ್ಯದೊಳಗೆ ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ಹುಡುಕಬೇಕಿದೆ. ಇದೇ ರೀತಿಯ ಸಮಾಜಸೇವೆಗೆ ಮೀಸಲಾಗಿರುವ ತಮ್ಮ ಕುಟುಂಬದ ನೇತೃತ್ವದ ಮೂರ್ತಿ ಪ್ರತಿಷ್ಠಾನದಲ್ಲಿ ತೊಡಗಿಸಿಕೊಳ್ಳಲು ಸುಧಾಮೂರ್ತಿ ಉದ್ದೇಶಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.

ಇನ್ಫೋಸಿಸ್ ಫೌಂಡೇಷನ್‍ನಿಂದ 50 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆಇನ್ಫೋಸಿಸ್ ಫೌಂಡೇಷನ್‍ನಿಂದ 50 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆ

'ನನ್ನ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ನನ್ನ ಉದ್ದೇಶದಂತೆ ಪರೋಪಕಾರದ ಕೆಲಸಗಳು ಮುಂದುವರಿಯಲಿದೆ. ಇನ್ಫೋಸಿಸ್ ಪ್ರತಿಷ್ಠಾನದ ಬದಲು ಮೂರ್ತಿ ಪ್ರತಿಷ್ಠಾನ ಎಂಬ ಹೆಸರಿನ ಹೊರತು ಬೇರೇನೂ ಬದಲಾಗುವುದಿಲ್ಲ' ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮುಂದೆ ಓದಿ.

ರಾಜಕೀಯದ ಆಹ್ವಾನಕ್ಕೆ ಪ್ರತಿಕ್ರಿಯೆ

ರಾಜಕೀಯದ ಆಹ್ವಾನಕ್ಕೆ ಪ್ರತಿಕ್ರಿಯೆ

ರಾಜಕೀಯ ಪಕ್ಷಗಳು ತಮಗೆ ರಾಜ್ಯಸಭೆ ಸದಸ್ಯತ್ವ ನೀಡಲು ಉದ್ದೇಶಿಸಿವೆ ಎನ್ನಲಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾಮೂರ್ತಿ, ಪಕ್ಷಗಳಾಚೆಗಿನ ಚಟುವಟಿಕೆಗಳನ್ನು ಮಾಡಲು ಮಾತ್ರವೇ ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ರಾಜಕೀಯಕ್ಕೆ ಸಮಯ ಇಲ್ಲ

ರಾಜಕೀಯಕ್ಕೆ ಸಮಯ ಇಲ್ಲ

'ನಾನು ಯಾವುದೇ ಪಕ್ಷದ ಪರವಾಗಿರುವುದಿಲ್ಲ. ನಾನು ತಟಸ್ಥಳಾಗಿರಲು ಬಯಸುತ್ತೇನೆ. ತಟಸ್ಥತೆ ಎಂದರೆ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಕೆಲಸಗಳಿವೆ. ಒಂದು ಪಕ್ಷಕ್ಕೆ ಸಂಪರ್ಕ ಪಡೆದುಕೊಂಡರೆ ಸನ್ನಿವೇಶಗಳು ಬದಲಾಗುತ್ತವೆ. ಹೀಗಾಗಿ ತಟಸ್ಥವಾಗಿರುವ ಯಾವುದೇ ಅವಕಾಶ ಬಂದಾಗ ಒಂದು ಪಕ್ಷಕ್ಕೆ ಸೀಮಿತವಾಗುವುದಿಲ್ಲ. ಅದರಾಚೆಗೆ ನಾನು ಯೋಚಿಸುತ್ತೇನೆ. ಇನ್ಫೋಸಿಸ್ ಪ್ರತಿಷ್ಠಾನದಲ್ಲಿ ಇದ್ದ ಈ ದಿನಗಳವರೆಗೂ ನಾನು ಅಂತಹ ಸಾಧ್ಯತೆ ಬಗ್ಗೆ ಯೋಚಿಸಿಲ್ಲ. ಅದಕ್ಕೆ ನನಗೆ ಸಮಯವೂ ಇಲ್ಲ' ಎಂದು ಹೇಳಿದ್ದಾರೆ.

ಇನ್ಫೋಸಿಸ್ ಸಹಕಾರದಲ್ಲಿ ಬ್ರಾಡ್ ವೇ ರಸ್ತೆಯ ಕೋವಿಡ್ ಆಸ್ಪತ್ರೆ ಉದ್ಘಾಟನೆಇನ್ಫೋಸಿಸ್ ಸಹಕಾರದಲ್ಲಿ ಬ್ರಾಡ್ ವೇ ರಸ್ತೆಯ ಕೋವಿಡ್ ಆಸ್ಪತ್ರೆ ಉದ್ಘಾಟನೆ

400 ಕೋಟಿ ರೂ. ನಿರ್ವಹಣೆ

400 ಕೋಟಿ ರೂ. ನಿರ್ವಹಣೆ

32 ಲಕ್ಷವನ್ನು ಇರಿಸಿಕೊಂಡು ಇನ್ಫೋಸಿಸ್ ಪ್ರತಿಷ್ಠಾನವನ್ನು ಆರಂಭಿಸಲಾಗಿತ್ತು. ಇಂದು ಅದು 400 ಕೋಟಿ ರೂ.ದಷ್ಟು ಮೊತ್ತವನ್ನು ನಿರ್ವಹಿಸುವವರೆಗೆ ಬೆಳೆದಿದೆ. 25 ವರ್ಷಗಳಿಂದ ಪ್ರತಿಷ್ಠಾನದಲ್ಲಿ ಭಾಗಿಯಾಗಿದ್ದೇನೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

Recommended Video

Chris Gayle ಮೊದಲ ಪಂದ್ಯದಲ್ಲೇ ಸುನಾಮಿ | Oneindia Kannada
'ಸೇವೆಯಿಂದ ನಿವೃತ್ತಳಾಗುವುದಿಲ್ಲ'

'ಸೇವೆಯಿಂದ ನಿವೃತ್ತಳಾಗುವುದಿಲ್ಲ'

'ಇನ್ಫೋಸಿಸ್ ಪ್ರತಿಷ್ಠಾನ ಮುಟ್ಟದ ಒಂದು ಕ್ಷೇತ್ರವನ್ನು ತೋರಿಸಿ. ಆಸ್ಪತ್ರೆ ಅಥವಾ ಶಿಕ್ಷಣ, ಪ್ರವಾಹ ಅಥವಾ ಪಿಡುಗು, ಸಂಸ್ಕೃತಿ ಅಥವಾ ಸಾಹಿತ್ಯ, ಯಾವುದನ್ನೇ ನೀವು ತೆಗೆದುಕೊಳ್ಳಿ ಅದರಿಂದ ಲಕ್ಷಾಂತರ ಮಂದಿಗೆ ನೆರವಾಗಿದೆ. ಮೂರ್ತಿ ಪ್ರತಿಷ್ಠಾನದಲ್ಲಿಯೂ ಕೆಲಸ ಮುಂದುವರಿಸಲು ನಾನು ಉತ್ಸುಕಳಾಗಿದ್ದೇನೆ. ನಾನು ಇನ್ಫೋಸಿಸ್ ಪ್ರತಿಷ್ಠಾನದಿಂದ ನಿವೃತ್ತಳಾಗಬಹುದು ಆದರೆ, ಪರೋಪಕಾರದ ಕೆಲಸದಿಂದ ಅಲ್ಲ' ಎಂದಿದ್ದಾರೆ.

English summary
Infosys Foundation chairperson Sudha Murthy is ser to retire on December 31, 2021 as the Infosys board has extended her term over a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X